Home ದಾವಣಗೆರೆ ಇನ್ಫೋಸಿಸ್ ಕ್ಯಾಂಪಸ್ ಸಂದರ್ಶನದಲ್ಲಿ ಬಿಐಇಟಿ ವಿದ್ಯಾರ್ಥಿಗಳ ಕಮಾಲ್!
ದಾವಣಗೆರೆಉದ್ಯೋಗ ವಾರ್ತೆನವದೆಹಲಿ

ಇನ್ಫೋಸಿಸ್ ಕ್ಯಾಂಪಸ್ ಸಂದರ್ಶನದಲ್ಲಿ ಬಿಐಇಟಿ ವಿದ್ಯಾರ್ಥಿಗಳ ಕಮಾಲ್!

Share
Share

ದಾವಣಗೆರೆ:ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದ ಕ್ಯಾಂಪಸ್ ನೇಮಕಾತಿಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.

ಇನ್ಫೋಸಿಸ್‌ ಸಂಸ್ಥೆಯ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿ. ನಿಹಾರಿಕಾ, ಕೆ ಆರ್. ಸ್ಪಂದನ ಮತ್ತು ಕೆ. ಉಮ್ಮೆ, ಕಂಪ್ಯೂಟರ್ ಸೈನ್ಸ್ ಡಿಸೈನ್ ವಿಭಾಗದಿಂದ ಎಂ ಎಸ್. ಅನುಷ ಕಂಪ್ಯೂಟರ್ ಸೈನ್ಸ್ ಬಿಸಿನೆಸ್‌ ಸಿಸ್ಟಮ್ ವಿಭಾಗದ ಬಿ ಡಿ. ವೈಭವಿ ಎಲೆಕ್ಟ್ರಾನಿಕ್ಸ ವಿಭಾಗದಿಂದ ಪಿ. ಪವಿತ್ರ, ಎಚ್‌. ಸ್ನೇಹ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಿಂದ ಕೆ ಎಂ ಶ್ರೇಯಾ ಮತ್ತು ಬಿ. ತನ್ಮಯಿ ಇವರುಗಳು ವಾರ್ಷಿಕ 3.6 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಇದೆ ತಿಂಗಳಿನಲ್ಲಿ ನಡೆದ ಹಲವು ಕ್ಯಾಂಪಸ್ ಸಂದರ್ಶನಗಳಲ್ಲಿ ಪ್ರೇರಣಾ ಇಂಜಿನಿಯರಿಂಗ್‌ ವರ್ಕ್ಸ ನೇಮಕಾತಿಯಲ್ಲಿ ಎಲೆಕ್ಟ್ರಾನಿಕ್ಸ ವಿಭಾಗದಿಂದ ಬಿ ಎಸ್‌ ಅಶ್ವಥ್‌ ಮತ್ತು ಎಸ್‌ ಕೆ. ದರ್ಶನ್‌ ಇವರು ವಾರ್ಷಿಕ 5 ರಿಂದ 7ಲಕ್ಷ ವೇತನದೊಂದಿಗೆ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಅದರ್ಶ್‌ ಕುಮಾರ್‌ ಇವರು ಕೋಡಿಟಾಸ್‌ ಸಂಸ್ಥೆಗೆ ವಾರ್ಷಿಕ 4.5 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಕೆಮಿಕಲ್‌ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಪ್ರಚೇತ್‌ ಎನ್‌ ಜೆ ಮತ್ತು ಸಹನ ಎನ್‌ ಎಸ್‌ ಇವರು ಸೀನ್ಥೈಟ್‌ ಇಂಡಸ್ಟ್ರೀಸ್‌ ಸಂಸ್ಥೆಗೆ ವಾರ್ಷಿಕ 4.0 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಅಂಪ್ಕಸ್‌ ಸೈಬರ್ ಸಂಸ್ಥೆಯ ಸಂದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪಿ. ಪಾವನಿ ಮತ್ತು ಕಂಪ್ಯೂಟರ್ ಸೈನ್ಸ್ ಬಿಸಿನೆಸ್‌ ಸಿಸ್ಟಮ್ ವಿಭಾಗದ ಎಸ್‌ ಎಸ್‌ ಮನೋಹರಿ ಇವರು ವಾರ್ಷಿಕ 4.5 ಲಕ್ಷ ವೇತನದೊಂದಿಗೆ ನೇಮಕಾತಿಗೊಂಡಿದ್ದಾರೆ. ಐವ್ಯಾಂಟ್‌ ಸಂಸ್ಥೆಯ ನೇಮಕಾತಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ ಎಸ್ ಮೋನಿಕಾ ಮತ್ತು ಎಂ ಪಿ ತನುಶ್ರೀ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಿಂದ ಕೆ. ಪವನ್‌ ರಾಜು ಇವರು ವಾರ್ಷಿಕ 3.6 ರಿಂದ 4.2 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆ ಮತ್ತು ಪರಿಶ್ರಮಕ್ಕೆ, ಬಾಪೂಜಿ ವಿದ್ಯಾ ಸಂಸ್ಥೆಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್‌ ಬಿ ಅರವಿಂದ್, ನಿರ್ದೇಶಕರಾದ ಪ್ರೊ. ವೈ ವೃಷಭೇಂದ್ರಪ್ಪ, ತರಬೇತಿ ಮತ್ತು ಉದ್ಯೋಗದ ಮುಖ್ಯಸ್ಥೆ ಸಿ ಆರ್‌ ನಿರ್ಮಲ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *