SUDDIKSHANA KANNADA NEWS/ DAVANAGERE/ DATE-15-05-2025
ಪಾಕಿಸ್ತಾನದಲ್ಲಿ ಭಾರತ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಹಾಕುತ್ತಿದೆ. ಇನ್ನು ಪಾಪಿ ಪಾಕಿಸ್ತಾನಕ್ಕೆ ಬೆಂಬಲಿಸಿದ ರಾಷ್ಟ್ರಗಳಿಗೂ ಉತ್ತರ ಕೊಡಲು ಶುರು ಮಾಡಿದೆ. ಟರ್ಕಿಯ ಎಲ್ಲಾ ವಸ್ತುಗಳ ಆಮದು ರಫ್ತು ಮಾಡಲಾಗುತ್ತಿರುವುದೂ ಸೇರಿದಂತೆ ಎಲ್ಲಾ ರೀತಿಯ ನಿರ್ಬಂಧ ಭಾರತ ಹೇರಿದ ಬಳಿಕ ವಿಲವಿಲ ಒದ್ದಾಡುವಂತಾಗಿದೆ.
ಟರ್ಕಿಯ ಬಹಿಷ್ಕಾರದ ಕರೆಗಳಿಂದ ವಿಚಲಿತರಾಗದ ಟರ್ಕಿ ಮತ್ತೆ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆಯಲ್ಲದೇ ನಿಜವಾದ ಸಹೋದರ ಪಾಕಿಸ್ತಾನ ಎಂದು ಹೇಳಿದೆ.
ಭಾರತದೊಂದಿಗಿನ ಸಶಸ್ತ್ರ ಮುಖಾಮುಖಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ನೀಡಿದ ಮಿಲಿಟರಿ ಬೆಂಬಲದ ಬಗ್ಗೆ ಭಾರತೀಯರು ಮತ್ತು ವ್ಯವಹಾರಗಳು ಆಕ್ರೋಶ ವ್ಯಕ್ತಪಡಿಸಿದರೂ, ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ಪಾಕ್ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ಟರ್ಕಿ ಪಾಕಿಸ್ತಾನದ ಜೊತೆ ನಿಲ್ಲುತ್ತದೆ ಎಂದು ಪಾಕಿಸ್ತಾನಿ ಪ್ರಧಾನಿ ಷರೀಫ್‌ಗೆ ಭರವಸೆ ನೀಡಿದ್ದಾರೆ.
ಟರ್ಕಿಯ ಎಲ್ಲವನ್ನೂ ಬಹಿಷ್ಕರಿಸುವಂತೆ ಭಾರತದಲ್ಲಿ ಹೆಚ್ಚುತ್ತಿರುವ ಕರೆಗಳ ಹೊರತಾಗಿಯೂ ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಟರ್ಕಿ-ಪಾಕಿಸ್ತಾನ ಸಹೋದರತ್ವವನ್ನು ದ್ವಿಗುಣಗೊಳಿಸಿದ್ದಾರೆ. ಟರ್ಕಿ ಪಾಕಿಸ್ತಾನಕ್ಕೆ ಮಿಲಿಟರಿ ಡ್ರೋನ್‌ಗಳನ್ನು ಒದಗಿಸಿದ್ದಲ್ಲದೆ, ಭಾರತದ ದಾಳಿಗೆ ಪ್ರತಿದಾಳಿ ನಡೆಸಲು ಸೈನಿಕರನ್ನು ಕಳುಹಿಸಿಕೊಟ್ಟು ಟರ್ಕಿ ತನ್ನ ಮೇಲೆ ತಾನೇ ಕಲ್ಲು ಎತ್ತಿಹಾಕಿಕೊಂಡಿದೆ.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಮತ್ತು ಪಾಕಿಸ್ತಾನ ತರಬೇತಿ ಪಡೆದ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ 26 ಜನರ ಕುಟುಂಬಗಳಿಗೆ ನ್ಯಾಯ ಒದಗಿಸುವುದಾಗಿ ಭಾರತ ಪ್ರತಿಜ್ಞೆ ಮಾಡಿದ ನಂತರ ಭಾರತ ಮತ್ತು ಪಾಕ್ ನಡುವೆ ಘರ್ಷಣೆ ಹೆಚ್ಚಾಯಿತು. ಟರ್ಕಿಶ್ ವಾಯುಪಡೆಯ ಸಿ -130 ವಿಮಾನ ಮತ್ತು ಯುದ್ಧನೌಕೆ ಪಾಕಿಸ್ತಾನ ಕಳಹಿಸಿಕೊಟ್ಟಿದ್ದ ಟರ್ಕಿಗೆ ಮುಖಭಂಗವಾಗುವಂತೆ ಭಾರತೀಯ ಸೇನೆ ಮಾಡಿದೆ.