Site icon Kannada News-suddikshana

ಸೌತ್ ಆಫ್ರಿಕಾ ಮತ್ತೆ ಚೋಕರ್ಸ್: ಸೂರ್ಯ ಸೂಪರ್ ಕ್ಯಾಚ್, ಹಾರ್ದಿಕ್ ಕಮಾಲ್, ಬೂಮ್ರಾ ದೂಸ್ರಾ, ಕೊಹ್ಲಿ, ಅಕ್ಷರ್ ಬೆಂಕಿ ಬ್ಯಾಟಿಂಗ್…!

SUDDIKSHANA KANNADA NEWS/ DAVANAGERE/ DATE:29-06-2024

ಬ್ರಿಡ್ಜ್‌ಟೌನ್: ಇಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್ ಸೂಪರ್ ಕ್ಯಾಚ್, ಹಾರ್ದಿಕ್ ಪಾಂಡ್ಯ ಕಮಾಲ್ ಬೌಲಿಂಗ್, ಬೂಮ್ರಾ ದೂಸ್ರಾ, ವಿರಾಟ್ ಕೊಹ್ಲಿ ಪರಾಕ್ರಮ ಬ್ಯಾಟಿಂಗ್. ವೇಗದ ಬೌಲರ್ ಗಳ ಕರಾರುವಕ್ ದಾಳಿ, ಅತ್ಯುತ್ತಮ ಫೀಲ್ಡಿಂಗ್. ಅದೃಷ್ಟ ಭಾರತದ ಕಡೆ. ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲು ಪ್ರಮುಖ ಕಾರಣವಾದದ್ದು.

ಕೊನೆ ಓವರ್ ನವರೆಗೂ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದ್ದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಳು ರನ್ ಗಳಿಂದ ಗೆದ್ದು ಬೀಗಿತು.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಎರಡನೇ ಟಿ20 ವಿಶ್ವಕಪ್ ಅನ್ನು ಗೆದ್ದು ವಿಜಯದ ನಗೆ ಬೀರಿತು. ಬ್ರಿಡ್ಜ್‌ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ
ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾ ಪರ ಹೆಂಡ್ರಿಕ್ಸ್ 4 ರನ್ ಗಳಿಸಿ ಔಟಾದರೆ ಮಾರ್ಕ್ರಾಮ್ ಸಹ 4 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಬ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 31 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇನ್ನು ಡಿಕಾಕ್ 39 ರನ್ ಗಳಿಸಿದ್ದಾಗ ಅರ್ಷ ದೀಪ್ ಔಟ್ ಮಾಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ಲಾಸೆನ್ 52 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು. ಆದರೆ ಪಂದ್ಯ ಸೋತಿದೆ.

ಮೊದಲ ಓವರ್ ನಲ್ಲಿ 15 ರನ್ ಗಳ ಭರ್ಜರಿ ಆರಂಭ ಪಡೆದರೂ ಭಾರತಕ್ಕೆ ಎರಡನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಆಘಾತ ನೀಡಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಾರಾಜ್ ಒಂದೇ ಓವರ್ ನಲ್ಲಿ 9 ರನ್ ಗಳಿಸಿದ್ದ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ತಾಳ್ಮೆಯ ಆಟವಾಡಿದ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 106 ರನ್ ಗಳ ಜೊತೆಯಾಟ ನೀಡಿದರು.

47 ರನ್ ಗಳಿಸಿದ್ದ ಅಕ್ಷರ್ ಪಟೇಲ್ ರನ್ ಔಟ್ ಗೆ ಬಲಿಯಾದರು. ನಂತರ ಬಂದ ಶಿವಂ ದುಬೆ 27 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ನಾರ್ಟ್ಜೆ ತಲಾ 2 ವಿಕೆಟ್ ಪಡೆದಿದ್ದಾರೆ.

Exit mobile version