Site icon Kannada News-suddikshana

ಫೆ.13ರಿಂದ 17ರವರೆಗೆ ಐತಿಹಾಸಿಕ ಹಳೇ ಕುಂದುವಾಡದ ಶ್ರೀ ಆಂಜನೇಯ, ಬಸವೇಶ್ವರ ದೇವಸ್ಥಾನ ಉದ್ಘಾಟನೆ

SUDDIKSHANA KANNADA NEWS/ DAVANAGERE/ DATE:11-02-2025

ದಾವಣಗೆರೆ: ತಾಲೂಕಿನ ಹಳೇಕುಂದುವಾಡ ಗ್ರಾಮದ ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆಬ್ರವರಿ 13ರಿಂದ 17ರವರೆಗೆ 5 ದಿನಗಳ ಕಾಲ ನಡೆಯಲಿದ್ದು, 17ರಂದು ಧಾರ್ಮಿಕ ಸಭೆ ನಡೆಯಲಿದೆ ಎಂದು ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ಜಿ.ಗಣೇಶಪ್ಪ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಜನೇಯ ಸ್ವಾಮಿ ಮಹಿಮೆಯನ್ನು ಹೊಂದಿದ್ದು, ದೇವಸ್ಥಾನಕ್ಕೆ ವಿವಿಧೆಡೆಯಿಂದ ದರ್ಶನಕ್ಕೆ ಆಗಮಿಸುತ್ತಾರೆ, ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಲಿನಲ್ಲೇ ಆಂಜನೇಯ, ಬಸವೇಶ್ವರ ದೇವಸ್ಥಾನ ನಿರ್ಮಾಣವಾಗಿದೆ. ಅಯೋಧ್ಯೆ ಶ್ರೀ ರಾಮಮಂದಿರ ವಿಗ್ರಹ ರಚನೆಕಾರ ಅರುಣ್ ಯೋಗಿರಾಜ್ ಅವರು ಆಂಜನೇಯ ವಿಗ್ರಹ ಕೆತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಫೆಬ್ರವರಿ 17ರಂದು ಬೆಳಿಗ್ಗೆ 11ಕ್ಕೆ ನಡೆಯುವ ಧಾರ್ಮಿಕ ಸಭೆಯ ಸಾನಿಧ್ಯವನ್ನು ಸಿರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಕಾಗಿನೆಲೆ ಮಹಾಸಂಸ್ಥಾನ ಶ್ರೀ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಹೊಸದುರ್ಗದ ಶ್ರೀ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ, ದಾವಣಗೆರೆಯ ಶ್ರೀಮುರುಘ ರಾಜೇಂದ್ರ ಮಠದ ಬಸವಪ್ರಭು ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಪರಮಹಂಸ ಶ್ರೀ ಮುರಳೀಧರ ಶ್ರೀಗಳು, ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠ, ಮಹಾಸಂಸ್ಥಾನದ ಪ್ರಸನ್ನಾನಂದಪುರಿ ಶ್ರೀಶ್ರೀಗಳು, ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು,
ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಮಾದರ ಚನ್ನಯ್ಯ ಶ್ರೀಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀಗಳು, ಹೊಸದುರ್ಗದ ಭಗೀರಥ ಪೀಠದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಪುರುಷೋತ್ತಮಾನಂದಪುರಿ ಶ್ರೀಗಳು, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಶ್ರೀಗಳು, ಹಳೇಕುಂದುವಾಡದ ಕರಿಬಸವೇಶ್ವರ ದೇವಸ್ಥಾನ ಧರ್ಮಧಿಕಾರಿ ರಾಜಣ್ಣ ವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಹರಿಹರದ ಶಾಸಕ ಬಿ.ಪಿ.ಹರೀಶ್, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ್ರು, ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್.ರಾಮಪ್ಪ, ಆಗಮಿಸಲಿದ್ದಾರೆ ಎಂದು ಹೇಳಿದರು.

ಇವರೊಂದಿಗೆ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ನಂದಿಗಾವಿ ಶ್ರೀನಿವಾಸ್, ಲೋಕಿಕೆರೆ ನಾಗರಾಜ್, ಜಿ.ಬಿ. ಅಜಯ್ ಕುಮಾರ್, ಮಾಜಿ ಶಾಸಕ ಹೆಚ್.ಎಸ್.‌ಶಿವಶಂಕರ್, ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್, ಎಸ್.ವಿ.ರಾಮಚಂದ್ರ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಳೇ ಕುಂದುವಾಡ ಶ್ರೀ ಬಸವ ಆಂಜನೇಯ ಅಭಿವೃದ್ದಿ ಸಮಿತಿ ಕಾರ್ಯದರ್ಶಿ ಹೆಚ್.ಜಿ.ಮಂಜಪ್ಪ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ನಿರ್ದೇಶಕ ಜೆ.ಮಾರುತಿ, ಹಿರಿಯ ಮುಖಂಡರಾದ ಹೆಚ್.ಬಿ.ಅಣ್ಣಪ್ಪ, ಹೆಚ್ ಜಿ ದೊಡ್ಡೆಪ್ಪ, ಗೌಡ್ರು ಬಸವರಾಜಪ್ಪ, ಸಿದ್ದನಗೌಡ್ರು, ಬಾರಿಕರ ಚಂದ್ರಪ್ಪ, ಯು ವಿ ಶ್ರೀನಿವಾಸ್, ಡಿಎಸ್ ಎಸ್ ಮಂಜುನಾಥ್, ಹೆಚ್.ಎಸ್.ಶ್ರೀನಿವಾಸ್, ಜಿ.ಹೆಚ್.ಗಣೇಶ್, ಎಸ್.ಬಿ.ವಿಜಯ್, ತಡಿಕೆಪ್ಪರ್ ನಿಂಗಪ್ಪ, ಹೆಚ್ ಎಸ್ ಉಮಾಪತಿ, ಮಧು ನಾಗರಾಜ್, ದೇವಸ್ಥಾನ ಸಮಿತಿ ಸದಸ್ಯರು, ಡೊಳ್ಳಿನ ಸಂಘದ ಸದಸ್ಯರು ಸೇರಿದಂತೆ ಇತರರಿದ್ದರು.

Exit mobile version