Site icon Kannada News-suddikshana

ಶೋಷಿತರಿಗೆ ನ್ಯಾಯ ಕೊಟ್ಟದ್ದು ಕಾಂಗ್ರೆಸ್, ಒಳಮೀಸಲಾತಿ ಜಾರಿ ಐತಿಹಾಸಾತ್ಮಕ ಹೆಜ್ಜೆ: ಕೆ. ಹೆಚ್. ಮುನಿಯಪ್ಪ ಬಣ್ಣನೆ

ಕೆ. ಹೆಚ್. ಮುನಿಯಪ್ಪ

SUDDIKSHANA KANNADA NEWS/ DAVANAGERE/DATE:13_09_2025

ದಾವಣಗೆರೆ: ನಮ್ಮ ಸರ್ಕಾರಕ್ಕೆ ಬದ್ದತೆ ಇದ್ದು ಬಡವರ, ದೀನದಲಿತರ, ಕೃಷಿಕರ ಕಾರ್ಮಿಕರ ಪರವಾದ ತೀರ್ಮಾನವನ್ನು ತೆಗೆದುಕೊಳ್ಳುವ ಏಕೈಕ ಪಕ್ಷ ಅದು ಕಾಂಗ್ರೆಸ್ ಪಕ್ಷ. ಶೋಷಿತರಿಗೆ ನ್ಯಾಯ ಕೊಟ್ಟ ಕಾಂಗ್ರೆಸ್ ಸರ್ಕಾರದ ಐತಿಹಾಸಾತ್ಮಕ ನಿರ್ಧಾರ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್. ಮುನಿಯಪ್ಪ ಹೇಳಿದರು.

READ ALSO THIS STORY: ಅನಧಿಕೃತ ಪಡಿತರ ಚೀಟಿ ಪತ್ತೆ ಹಚ್ಚಿ, ಹೊಸ ಪಡಿತರಕ್ಕೆ ಅವಕಾಶ ನೀಡಿ: ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಮಹತ್ವದ ಸೂಚನೆ

ದಾವಣಗೆರೆ ಜಿಲ್ಲಾ ಮಾದಿಗ ಮಹಾ ಸಭಾವತಿಯಿಂದ ಆಯೋಜಿಸಿದ್ದ ಒಳ ಮೀಸಲಾತಿ ವಿಜಯೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

35 ವರ್ಷಗಳಿಂದ ಶೋಷಿತ ಸಮುದಾಯಗಳು ನಡೆಸಿದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ
ಐತಿಹಾಸಾತ್ಮಕ ಹೆಜ್ಜೆ. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಿದ ಎಲ್ಲಾ ಮಾದಿಗ ಸಂಘಟನೆಗಳು, ದಲಿತ ಒಳಮೀಸಲಾತಿ ಸಂಘಟನೆಗಳು, ಮುಖಂಡರು, ಹೋರಾಟಗಾರರಿಗೆ ನನ್ನ ವಿಶೇಷ ಧನ್ಯವಾದಗಳನ್ನು ತಿಳಿಸಲು
ಬಯಸುತ್ತೇನೆ ಎಂದು ಹೇಳಿದರು.

ತಮ್ಮ ಎಲ್ಲಾ ಕೆಲಸಗಳ ಬದಿಗಿಟ್ಟು ನಿರಂತರ ಹೋರಾಟದ ಫಲ ಇಂದು ನ್ಯಾಯ ಪಡೆಯಲು ಸಾಧ್ಯವಾಗಿದೆ. ಇದು ಸಮುದಾಯದ ಒಗ್ಗಟ್ಟಿನ ಗೆಲುವು. ಸರ್ವೋಚ್ಚ ನ್ಯಾಯಾಲಯ ತೀರ್ಪು – ಸರ್ಕಾರದ ತ್ವರಿತ ಕ್ರಮ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಬಳಿಕ ನಾನು ಮತ್ತು ತಿಮ್ಮಾಪುರ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತೀರ್ಪು ಜಾರಿಗೊಳಿಸಲು ಮನವಿ ಮಾಡಿದಾಗ ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಿ “ಇದು ಒಳ್ಳೆಯ ಕೆಲಸ, ತಕ್ಷಣ ಜಾರಿಗೊಳಿಸಬೇಕು” ಎಂದರು.

ಉಪಮುಖ್ಯಮಂತ್ರಿಗಳೂ ಕೂಡ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲು ಒಪ್ಪಿಕೊಂಡರು. ನಾಗಮೋಹನ್ ದಾಸ್ ರವರ ಏಕ ಸದಸ್ಯ ಆಯೋಗದ ವರದಿಯನ್ನು ಆಧರಿಸಿ ಜನಸಂಖ್ಯೆ ಆಧಾರದ ಮೇಲೆ 101 ಜಾತಿಗಳಿಗೆ ನ್ಯಾಯಯುತವಾದ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಇನ್ನೂ 12 ಲಕ್ಷ ಜನರ ಮಾಹಿತಿಯನ್ನು ದಾಖಲಿಸಿದೆ ಹೊರಗೆ ಉಳಿದಿದ್ದಾರೆ. ತಾವು ಇದೇ 25 ರಿಂದ ಆರಂಭಗೊಳ್ಳಲಿರುವ ಸಮೀಕ್ಷೆಯಲ್ಲಿ ತಪ್ಪದೇ ಎಲ್ಲಾ ನೂರೊಂದು ಜಾತಿಯ ಸಮುದಾಯದವರು ತಮ್ಮ ಮೂಲ ಜಾತಿಗಳ ಹೆಸರನ್ನು ಸೇರಿಸುವಂತೆ ಅವರು ಮನವಿ ಮಾಡಿದರು.

ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲ, ಎಲ್ಲರಿಗೂ ಅವಕಾಶ. ಇದರಿಂದ ರಾಜ್ಯದ ನಿಖರ ಜನಸಂಖ್ಯೆ ಚಿತ್ರಣ ದೊರೆತು, ಭವಿಷ್ಯದಲ್ಲಿ ಹೆಚ್ಚಿನ ಸೌಲಭ್ಯಗಳು ದೊರಕಬಹುದು ಎಂದು ಕೆ. ಹೆಚ್. ಮುನಿಯಪ್ಪ ತಿಳಿಸಿದರು.

ಶಾಸಕಾರದ ಶಾಂತನಗೌಡ, ಮಾಜಿ ಸಚಿವ ಹೆಚ್. ಆಂಜನೇಯ, ಎಲ್. ಹೆಚ್. ಹನುಮಂತಪ್ಪ ಸೇರಿದಂತೆ ದಲಿತ ಸಮುದಾಯದ ಮುಖಂಡರು, ಯುವಕರು ಹಾಜರಿದ್ದರು.

Exit mobile version