ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ-ಆರ್ಎಸ್ಎಸ್ ಟೀಕಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ “ನನಗೆ ಈ ಬಿಜೆಪಿ-ಆರ್ಎಸ್ಎಸ್ ಜನರ ಬಗ್ಗೆ ಏನಂದುಕೊಂಡಿದೆ ಎಂಬುದು ತಿಳಿದಿದೆ. ಅವರ ಮೇಲೆ ಸ್ವಲ್ಪ ಒತ್ತಡ ಹೇರಿ, ಸ್ವಲ್ಪ ತಳ್ಳಿದರೆ ಸಾಕು ಭಯದಿಂದ ಓಡಿಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು, ಟ್ರಂಪ್ ಅಲ್ಲಿಂದ ಸಿಗ್ನಲ್ ಮಾಡಿದ ತಕ್ಷಣ, ಅವರು ಫೋನ್ ಎತ್ತಿಕೊಂಡು, ‘ನೀವು ಏನು ಮಾಡುತ್ತಿದ್ದೀರಿ ಮೋದಿ ಜಿ?’ ನರೇಂದ್ರ…. ಶರಣಾಗಿ ಎನ್ನುತ್ತಾರೆ. ಅದಕ್ಕೆ ‘ಜಿ ಹುಜೂರ್’ ಎಂದು
ಹೇಳುತ್ತಾ, ನರೇಂದ್ರ ಮೋದಿ ಜಿ ಟ್ರಂಪ್ ಸಿಗ್ನಲ್ ಅನ್ನು ಅನುಸರಿಸುತ್ತಾರೆ” ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿಯವರು 1971 ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರ ನಾಯಕತ್ವವನ್ನು ಉಲ್ಲೇಖಿಸಿದರು. ಅವರು ನೆನಪಿಸಿಕೊಂಡರು, “ಫೋನ್ ಕರೆ ಬರದ ಸಮಯವನ್ನು ನೀವು ನೆನಪಿಸಿಕೊಳ್ಳಬಹುದು – ಏಳನೇ ಫ್ಲೀಟ್ ಬಂದಿತ್ತು. 1971 ರ ಯುದ್ಧದಲ್ಲಿ, ಏಳನೇ ಫ್ಲೀಟ್ ಬಂದಿತು, ಶಸ್ತ್ರಾಸ್ತ್ರಗಳು ಬಂದವು, ವಿಮಾನವಾಹಕ ನೌಕೆ ಬಂದಿತು. ಇಂದಿರಾ ಗಾಂಧಿ ಜಿ ಅವರು, ‘ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ’ ಎಂದು ಇಂದಿರಾ ಗಾಂಧಿ ಹೇಳಿದ್ದರು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಇಂದಿರಾ ಗಾಂಧಿಗೆ ಇರುವ ವ್ಯತ್ಯಾಸ ” ಎಂದು ಕಿಡಿಕಾರಿದ್ದಾರೆ.





Leave a comment