Site icon Kannada News-suddikshana

ಯಡಿಯೂರಪ್ಪರಿಂದ 1 ಸಾವಿರ ರೂಪಾಯಿ ಸ್ವಂತಕ್ಕೆ ಕೆಲಸ ಮಾಡಿಸಿಕೊಂಡಿದ್ದರೆ ರಾಜಕೀಯ ನಿವೃತ್ತಿ: ಸಿಡಿದೆದ್ದ ಜಿ.ಎಂ. ಸಿದ್ದೇಶ್ವರ!

ಜಿ.ಎಂ. ಸಿದ್ದೇಶ್ವರ

SUDDIKSHANA KANNADA NEWS/ DAVANAGERE/ DATE_08-07_2025

ದಾವಣಗೆರೆ: ಬಿ. ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಾನು ಒಂದು ಸಾವಿರ ರೂಪಾಯಿ ಸ್ವಂತಕ್ಕೆ ಕೆಲಸ ಮಾಡಿಸಿಕೊಂಡಿದ್ದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ (G. M. Siddeswara) ಅವರು ಸವಾಲು ಹಾಕಿದ್ದಾರೆ.

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂದೆ, ನಾನು, ನನ್ನ ಸಹೋದರರು, ಮಕ್ಕಳು ಕಷ್ಟಪಟ್ಟು ದುಡಿದು ಆಸ್ತಿ ಮಾಡಿದ್ದೇವೆಯೇ ಹೊರತು ರಾಜಕಾರಣದಿಂದ ಹಣ ಮಾಡಿಲ್ಲ ಎಂದು ಹೇಳಿದರು.

READ ALSO THIS STORY: ಭಾರೀ ಮಳೆ: 20 ಕುಟುಂಬಗಳ 67 ಮಂದಿ ಬದುಕಿಸಿದ್ದೇಗೆ ಶ್ವಾನ ಅನ್ನೋದೇ ಇಂಟ್ರೆಸ್ಟಿಂಗ್!

ಮಾಜಿ ಸಚಿವ ರವೀಂದ್ರನಾಥ್ ಅವರ ಜನುಮದಿನಾಚರಣೆ ವೇಳೆ ಯಡಿಯೂರಪ್ಪ ಅವರನ್ನು ಕರೆಸಿದ್ದರು. ಯಾರೋ ಒಬ್ಬ ಪುಣ್ಯಾತ್ಮ ಉಂಡು ತಿಂದು ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನನ್ನ ಮೇಲೆ ಮಾಡಿದ್ದಾರೆ. ನಾನು ವೇದಿಕೆಯಲ್ಲಿ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ಯಡಿಯೂರಪ್ಪನವರ ಜೊತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಬ್ಬರೂ ಊಟ, ತಿಂಡಿ ಮಾಡಿದ್ದೇನೆ. ಆದ್ರೆ, ನಾನು ಸಾವಿರ ರೂಪಾಯಿ ಸ್ವಂತಕ್ಕೆ ಯಡಿಯೂರಪ್ಪನವರಿಂದ ಕೆಲಸ ಮಾಡಿಕೊಂಡಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಕಾಲೇಜು ಕಟ್ಟಿದ್ದು ಮತ್ತು ಫ್ಯಾಕ್ಟರಿ ಮಾಡಿದ್ದು ಅವರಿಂದಲೇ ಎಂದು ಕೆಲವರು ತಪ್ಪು ತಿಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪಿಎಂ ಆಗಿದ್ದಾಗ 2000ರಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆಗ ಸಮಿತಿ ರಚಿಸಿ ತುಮಕೂರಿನ ಎಂಪಿ ಬಸವರಾಜ್ ಅವರು ನೀವು ದೆಹಲಿಗೆ ಕೆಲಸ ಮಾಡಿಕೊಡಿ, ನಾನು ರಾಜ್ಯದಲ್ಲಿ ಮಾಡಿಸಿಕೊಡುತ್ತೇನೆ ಎಂದರು. ಈ ಕಾಲೇಜಿಗೆ ಅನುಮತಿ ನೀಡಿದ್ದು ಜಿ. ಪರಮೇಶ್ವರ್ ಅವರು. ಅವರ ಮನೆಗೆ ಹೋದಾಗ ಒಂದೇ ಮಾತಿಗೆ ಮಂಜೂರಾತಿ ಮಾಡಿಕೊಟ್ಟಿದ್ದರು. ಎಂದು ನೆನಪು ಮಾಡಿಕೊಂಡರು.

ಕೆಐಎಡಿಬಿಯಿಂದ 38 ಎಕರೆಯನ್ನು ಶಿಕ್ಷಣಕ್ಕೆ ಕೇಳಿದೆವು. ಸಿಎಂ ಆಗಿದ್ದ ಎಸ್. ಎಂ. ಕೃಷ್ಣರಿಗೆ ಅರ್ಜಿ ಕೊಟ್ಟೆವು. ಉಪಸಮಿತಿ ಮಾಡಿದ್ದು, ಇದರಲ್ಲಿ ಎಂ. ಪಿ. ಪ್ರಕಾಶ್, ಪಿಜಿಆರ್ ಸಿಂಧ್ಯಾ, ಪರಮೇಶ್ವರ್, ಸಿದ್ದರಾಮಯ್ಯರು ಸೇರಿದಂತೆ ಐವರು ಇದ್ದರು. ಆಗ 38 ಎಕರೆ ಶಿಕ್ಷಣಕ್ಕಾಗಿ ನೀಡಿದರು. ಸಾವಿರಾರು ಕೋಟಿ ರೂಪಾಯಿ ಮಾಡಿದ್ದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾವು, ಅಣ್ಣ ತಮ್ಮಂದಿರು, ಮಕ್ಕಳು ಕಷ್ಟಪಟ್ಟು ಮಾಡಿಕೊಂಡಿದ್ದೇವೆ. ಶುಗರ್ ಫ್ಯಾಕ್ಟರಿ ಮಾಡಿಕೊಂಡಿದ್ದು ರಾಜ್ಯಪಾಲರ ಆಡಳಿತದ ಕಾಲದಲ್ಲಿ. ಸಂಡೂರ್ ಫ್ಯಾಕ್ಟರಿಯನ್ನು ಟೆಂಡರ್ ಹಾಕಿದಾಗ ನಮಗೆ ಸಿಕ್ಕಿತು. ಒಳಗೊಳಗೆ ಮಾಡಿಕೊಂಡಿದ್ದೇವೆಂದು ಜನರು ತಪ್ಪು ತಿಳಿದುಕೊಂಡದ್ದು ತುಂಬಾ ವ್ಯಥೆ ಆಯ್ತು. ಸಂದರ್ಭ ಬಂದಿದ್ದಕ್ಕಾಗಿ ಈಗ ಹೇಳುತ್ತಿದ್ದೇನೆ ಎಂದು ಜಿ. ಎಂ. ಸಿದ್ದೇಶ್ವರ ಸ್ಪಷ್ಟನೆ ನೀಡಿದರು.

ತಂದೆ ಮಲ್ಲಿಕಾರ್ಜುನಪ್ಪ 1990ರಲ್ಲಿ ಚಿತ್ರದುರ್ಗ ಬಿಜೆಪಿ ತಾಲೂಕಿನ ಉಪಾಧ್ಯಕ್ಷರಾಗಿದ್ದರು. 1996ರಲ್ಲಿ ಸಾದು ಲಿಂಗಾಯತ ಸಮುದಾಯದ ಅಧ್ಯಕ್ಷರಾಗಿದ್ದರು. ಆಗ ಮಲ್ಲಿಕಾರ್ಜುನಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿತು. ಜಯಭೇರಿ ಬಾರಿಸಿದರು. ಎರಡನೇ ಬಾರಿ ಮತ್ತೆ ಚುನಾವಣೆಗೆ ನಿಂತಾಗ 10500 ಮತಗಳಿಂದ ಸೋತರು. ಮೂರನೇ ಬಾರಿ 16,500 ಮತಗಳಿಂದ ಗೆದ್ದು ಚಿತ್ರದುರ್ಗ – ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಆರಿಸಿ ಬಂದರು. ತಂದೆಯವರು ತೀರಿಕೊಂಡ ಮೇಲೆ ಕೈಲಾಸ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು, ಯಡಿಯೂರಪ್ಪ, ಅನಂತಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಬಂದಿದ್ದರು. ಬೇರೆ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿದ್ದರಿಂದ ವೆಂಕಯ್ಯ ನಾಯ್ಡು ಅವರು ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನಪ್ಪರ ಪುತ್ರ ಸಿದ್ದೇಶ್ವರ ಅಭ್ಯರ್ಥಿಯಾಗಬೇಕೆಂಬ ಘೋಷಣೆ ಮಾಡಿದರು ತಿಳಿಸಿದರು.

ನಾನು ರಾಜಕಾರಣದಲ್ಲಿ ಇರಲಿಲ್ಲ. ದಾವಣಗೆರೆ ಸಂಪರ್ಕವೂ ಕಡಿಮೆ ಇತ್ತು. ಜನರ ಆಶೀರ್ವಾದದಿಂದ ಲೋಕಸಭಾ ಸದಸ್ಯನಾದೆ ಎಂದು ಜಿ. ಎಂ. ಸಿದ್ದೇಶ್ವರ ಅವರು ತಿಳಿಸಿದರು.

ಸಂಸದ ಗೋವಿಂದ ಕಾರಜೋಳ, ಶಾಸಕ ಬಿ. ಪಿ. ಹರೀಶ್, ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಹೆಚ್. ಎಸ್. ಶಿವಶಂಕರ್, ಎಸ್. ವಿ. ರಾಮಚಂದ್ರ, ಹೆಚ್. ಪಿ. ರಾಜೇಶ್, ಜಿ. ಎಸ್. ಅನಿತ್ ಕುಮಾರ್, ಬಿ. ವಿ. ನಾಯಕ್, ವೀರೇಶ್ ಹನಗವಾಡಿ, ಶಾಂತರಾಜ್ ಪಾಟೀಲ್, ಜೀವನ್ ಮೂರ್ತಿ, ದೂಡಾ ಮಾಜಿ ಅಧ್ಯಕ್ಷರಾದ ಎ. ವೈ. ಪ್ರಕಾಶ್, ದೇವರಮನಿ ಶಿವಕುಮಾರ್, ಯಶವಂತರಾವ್ ಜಾಧವ್, ಬಿ. ಎಸ್. ಜಗದೀಶ್, ಹಿರಿಯ ಮುಖಂಡ ಮುರುಗೇಶ್ ಆರಾಧ್ಯ, ಬಿಜೆಪಿಯ ಗುಲ್ಬರ್ಗಾ ಭಾಗದ ಮುಖಂಡ ರವಿ ಬಿರಾದಾರ್, ಹೊನ್ನಾಳಿ ಕ್ಷೇತ್ರದ ಎ. ಬಿ. ಹನುಮಂತಪ್ಪ, ಎಂ. ಆರ್. ಮಹೇಶ್, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಸಂಗನಗೌಡರು, ಅಜಿತ್ ಸಾವಂತ್, ಲಿಂಗರಾಜ್, ಸೊಕ್ಕೆ ನಾಗರಾಜ್, ಹನುಮಂತ್ ನಾಯ್ಕ್, ದೇವೇಂದ್ರಪ್ಪ, ಹಾಲೇಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ. ಎಸ್. ಶ್ಯಾಮ್, ಜಯಮ್ಮ, ಸಿ. ಆರ್. ನಾಸೀರ್ ಅಹ್ಮದ್, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಜಿ. ಪಂ., ತಾ.ಪಂ., ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಹಾಜರಿದ್ದರು.

 

Exit mobile version