ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಇಲ್ಲವೇ ಅಹಿಂದ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಸುಮಾರು 40 ವರ್ಷಗಳಿಂದ ಪ್ರಾತಿನಿಧ್ಯ ಸಿಕ್ಕಿಲ್ಲ, ಒಂದು ವೇಳೆ ಕುಟುಂಬ ರಾಜಕಾರಣಕ್ಕೆ ಮಣಿದು ಟಿಕೆಟ್ ನೀಡಿದರೆ ಸ್ವಾಭಿಮಾನಿ ಬಳಗದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಘೋಷಿಸಿದರು.
READ ALSO THIS STORY: ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು: ಜಿ. ಬಿ. ವಿನಯ್ ಕುಮಾರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ವರ್ಗದವರೇ ಶೇಕಡಾ 85ರಷ್ಟಿದ್ದಾರೆ. 2 ಲಕ್ಷದ 31 ಸಾವಿರ ಮತದಾರರ ಪೈಕಿ 1 ಲಕ್ಷದ 85 ಸಾವಿರ ಮತಗಳು ಅಹಿಂದ ವರ್ಗಕ್ಕೆ ಸೇರಿವೆ. ಬಿಜೆಪಿ ಮತ್ತು ಕಾಂಗ್ರೆಸ್
ಪಕ್ಷವು ಅಹಿಂದ ಸಮುದಾಯಕ್ಕೆ ಟಿಕೆಟ್ ನೀಡಿದರೆ ಬಾಹ್ಯ ಬೆಂಬಲ ನೀಡುತ್ತೇವೆ. ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ವಾಗತಿಸುತ್ತೇನೆ. ಅಧಿಕಾರ ವಿಕೇಂದ್ರೀಕರಣವಾಗಬೇಕೇ ವಿನಾಃ ಒಂದೇ ಕುಟುಂಬಕ್ಕೆ ಅಧಿಕಾರ ಸಿಗಬಾರದು. ಊಳಿಗಮಾನ್ಯ ಪದ್ಧತಿಯಂತೆ ಇರುವ ಕ್ಷೇತ್ರದಲ್ಲಿ ಅಹಿಂದ ವರ್ಗಕ್ಕೆ ಮಾನ್ಯತೆ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದರು.
ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗೆ ಭಾರೀ ಪೈಪೋಟಿ ನಡೆಸುತ್ತಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದೆ. ಅವರಿಗೆ ಟಿಕೆಟ್ ನೀಡಿದರೆ ಸ್ವಾಗತಾರ್ಹ. ಆಗ ಸ್ವಾಭಿಮಾನಿ ಬಳಗವು ಬೆಂಬಲಿಸುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಹಿಂದಕ್ಕೆ ಟಿಕೆಟ್ ನೀಡದೇ ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿರುವವರನ್ನ ಕಣಕ್ಕಳಿಸಿದರೆ ಸ್ವಾಭಿಮಾನಿ ಬಳಗದ ಅಭ್ಯರ್ಥಿಯೂ ಸ್ಪರ್ಧೆ ಮಾಡಲಿದ್ದಾರೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಕೆಲವೊಂದು ಕ್ಷೇತ್ರಗಳು ಮಿನಿ ರಿಪಬ್ಲಿಕ್ ನಂತೆ ಬೆಳೆದಿವೆ. ಊಳಿಗಮಾನ್ಯ ಆಡಳಿತದಂತೆಯೇ ನಡೆಯುತ್ತಿದೆ. ಒಂದು ಕುಟುಂಬವು ಎಲ್ಲವವ್ನೂ ನಿಯಂತ್ರಣ ಮಾಡುತ್ತದೆ. ದುರಹಂಕಾರ ಮಿತಿ ಮೀರಿದೆ. ಇದಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರವೂ ಹೊರತಾಗಿಲ್ಲ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ನನ್ನ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ನಡುವೆ ಯಾವುದೇ ವಾರ್ ನಡೆಯುತ್ತಿಲ್ಲ. ಈ ರೀತಿಯಲ್ಲಿ ನಾನು ಎಂದಿಗೂ ಆಲೋಚನೆ ಮಾಡಿಲ್ಲ. ದಾವಣಗೆರೆಯಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆಯು ಶಾಖಾ ಕಚೇರಿ ಆರಂಭಿಸಿದ ಬಳಿಕ ಐಎಎಸ್ ಕೋಚಿಂಗ್ ಅನ್ನು ಸರ್ಕಾರದ ವತಿಯಿಂದಲೇ ಉಚಿತವಾಗಿ ನೀಡಲಾಗುತ್ತಿದೆ. ಇದು ಒಳ್ಳೆಯ ಕಾರ್ಯ. ದಾವಣಗೆರೆಯ ಮಕ್ಕಳಿಗೆ ಐಎಎಸ್, ಕೆಎಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅವಕಾಶ ಸಿಗಲಿ ಎಂಬುದು ನನ್ನ ಅಭಿಪ್ರಾಯ. ಈ ಸಂಸ್ಥೆಯು ಚೆನ್ನಾಗಿ ನಡೆದುಕೊಂಡು ಹೋಗಲಿ ಎಂದು ಹಾರೈಸುವೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
- G B Vinay Kumar
- G B Vinay Kumar Davanagere
- G B Vinay Kumar Davanagere News
- G B Vinay Kumar insights
- G B Vinay Kumar News
- G B Vinay Kumar News Updates
- ಜಿ. ಬಿ. ವಿನಯ್ ಕುಮಾರ್
- ಜಿ. ಬಿ. ವಿನಯ್ ಕುಮಾರ್ - ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರು
- ಜಿ. ಬಿ. ವಿನಯ್ ಕುಮಾರ್ - ಯುವ ರಾಜಕಾರಣಿ
- ಜಿ. ಬಿ. ವಿನಯ್ ಕುಮಾರ್ - ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರು
- ಜಿ. ಬಿ. ವಿನಯ್ ಕುಮಾರ್ ನ್ಯೂಸ್
- ಜಿ. ಬಿ. ವಿನಯ್ ಕುಮಾರ್ ಮಾತು
- ಜಿ. ಬಿ. ವಿನಯ್ ಕುಮಾರ್ ಸುದ್ದಿ





Leave a comment