ಬೆಂಗಳೂರು: ನಾನು ತಪ್ಪು ಮಾಡಿಲ್ಲ. ಇದು ಯಾರೋ ಮಾಡಿರುವ ಷಡ್ಯಂತ್ರ. ಎಂಟು ವರ್ಷಗಳ ಹಿಂದೆ ಕೆಲಸ ಮಾಡಿದ್ದ ಜಾಗವದು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಡಿಜಿಪಿ ರಾಮಚಂದ್ರರಾವ್ ಹೇಳಿದ್ದಾರೆ.
ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ರಾಮಚಂದ್ರರಾವ್ ನಾನು ತಪ್ಪು ಮಾಡಿಲ್ಲ. ಷಡ್ಯಂತ್ರ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಈ ಮೂಲಕ ಆರೋಪದಿಂದ ತಪ್ಪಿಸಿಕೊಳ್ಳುವ ನಾಟಕವಾಡಿದ್ದಾರೆ.
ರಾಜ್ಯದ ಉನ್ನತ ಹುದ್ದೆಯಲ್ಲಿದ್ದ ಡಿಜಿಪಿ ರಾಮಚಂದ್ರರಾವ್ ಯುವತಿಯರು ಮತ್ತು ಮಹಿಳೆಯರ ಜೊತೆ ಕುಚ್ ಕುಚ್ ನಡೆಸಿರುವ ವಿಡಿಯೋಗಳು ಬಹಿರಂಗವಾಗಿವೆ. ಇದು ರಾಜ್ಯದ ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿದೆ.
ಕಳೆದ ವರ್ಷದ ಹಿಂದೆ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ. ಈಗ ಈ ವಿಡಿಯೋಗಳನ್ನು ಹರಿಬಿಡಲಾಗಿದೆ.
ಪೊಲೀಸ್ ಸಮವಸ್ತ್ರದಲ್ಲಿದ್ದಾಗಲೇ ಡಿಜಿಪಿ ರಾಮಚಂದ್ರರಾವ್ ಕಚೇರಿಯಲ್ಲಿ ಪೊಲೀಸ್ ಡ್ರೆಸ್ ನಲ್ಲೇ ಮಹಿಳೆಯರ ಜೊತೆಗೆ ರಾಸಲೀಲೆ ನಡೆಸಿರುವುದು ಬೆಳಕಿಗೆ ಬಂದಿದೆ. ರಾಮಚಂದ್ರರಾವ್ ಮಹಿಳೆಯರನ್ನು ಅಪ್ಪಿಕೊಂಡು, ಮುದ್ದಾಡುತ್ತಾ, ತಬ್ಬಿಕೊಂಡು, ಹೊಟ್ಟೆ ಇಸುಕುತ್ತಾ ಲೈಂಗಿಕ ತೀಟೆ ತೀರಿಸಿಕೊಂಡಿರುವಂಥ ವಿಡಿಯೋಗಳು ರಿಲೀಸ್ ಆಗಿವೆ.
ಕರ್ನಾಟಕದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯಾಗಿರುವ ಡಾ.ರಾಮಚಂದ್ರರಾವ್ ಅವರು ಮಹಿಳೆಯರ ಜೊತೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಬಿಡುಗಡೆಯಾಗಿದ್ದು, ಭಾರೀ ಮುಜುಗರಕ್ಕೂ ಕಾರಣವಾಗಿದೆ. ಕಚೇರಿಯಲ್ಲೇ ಈ ರಾಸಲೀಲೆಗಳು ನಡೆದಿವೆ. ಮಹಿಳೆಯರ ಜೊತೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ನಡೆಸುತ್ತಿರುವುದು ಸೆರೆಯಾಗಿದ್ದು, ವಿಡಿಯೋ ರಿಲೀಸ್ ಆದ ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದೇ ವಾಪಸ್ ತೆರಳಿದ್ದಾರೆ.
ಬೇರೆ ಬೇರೆ ಬಟ್ಟೆ ಧರಿಸಿ ಮಹಿಳೆಯರು ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆಯರನ್ನು ತಬ್ಬಿಕೊಂಡು ಮುತ್ತು ಕೊಟ್ಟು ರಾಮಚಂದ್ರರಾವ್ ರಾಸಲೀಲೆ ನಡೆಸಿದ್ದು ಬೆಳಕಿಗೆ ಬಂದಿದೆ.





Leave a comment