Site icon Kannada News-suddikshana

ಪತ್ನಿ ಕೊಂದು ಕೊಡಗನೂರು ಕೆರೆಗೆ ಎಸೆದಿದ್ದ ಕೇಸ್, ಪತಿ – ಎರಡನೇ ಹೆಂಡತಿ ಸೆರೆ: ಹತ್ಯೆ ಮಾಡಿದ್ದಾದರೂ ಯಾಕೆ ಗೊತ್ತಾ..?

SUDDIKSHANA KANNADA NEWS/ DAVANAGERE/ DATE:29-01-2024

ದಾವಣಗೆರೆ: ಮಾಯಕೊಂಡ ಸಮೀಪದ ಕೊಡಗನೂರು ಕೆರೆ ಬಳಿ ಮಹಿಳೆಯೊಬ್ಬರ ಚೀಲದಲ್ಲಿ ಕಟ್ಟಿ ಎಸೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಕೆ ಪತಿ ಹಾಗೂ ಈತನ ಎರಡನೇ ಪತ್ನಿ ಪೊಲೀಸರ ಅತಿಥಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲುಹಳ್ಳಿ ಗ್ರಾಮದ ಕಾವ್ಯ ಹತ್ಯೆಗೀಡಾಗಿದ್ದಾಕೆ. ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ ಸಚಿನ್ (24) ಹಾಗೂ ಈತನ ಎರಡನೇ ಹೆಂಡತಿ ದಾವಣಗೆರೆ ತಾಲೂಕಿನ ಕಡ್ಲೇಬಾಳು ಗ್ರಾಮದ ಚೈತ್ರಾ (21) ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ:

ಹೊಳಲ್ಕೆರೆ ತಾಲೂಕಿನ ಸಾಸಲು ಹಳ್ಳ ಗ್ರಾಮದ ಕಾವ್ಯ ಎಂಬಾಕೆಯನ್ನು ಪ್ರೀತಿಸಿ ಸಚಿನ್ ಮದುವೆಯಾಗಿದ್ದ. ಸಚಿನ್ ಮದುವೆಯಾದ ಕೆಲವೇ ವರ್ಷಗಳಲ್ಲಿ ದಾವಣಗೆರೆಯ ಕಡ್ಲೆಬಾಳು ಗ್ರಾಮದ ಚೈತ್ರಾ ಎಂಬಾಕೆ ಜೊತೆ ಎರಡನೇ ವಿವಾಹವಾಗಿದ್ದ. ಆದ್ರೆ, ಕಾವ್ಯ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಎರಡನೇ ಪತ್ನಿ ಜೊತೆ ಸೇರಿ ಕಾವ್ಯಳನ್ನು ಕೊಲೆ ಮಾಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರೀತಿ ಮಾಡಿ ಮದುವೆಯಾದ ಕಾವ್ಯಳ ಬದುಕು ದುರಂತ ಅಂತ್ಯ ಕಂಡರೆ, ಮತ್ತೊಂದು ಹೆಣ್ಣಿನ ಜೊತೆ ಮದುವೆಯಾಗಿ ಆರೋಪಿ ಈಗ ಜೈಲು ಸೇರಿದ್ದಾನೆ. ಮೊದಲ ಪತ್ನಿ ಇದ್ದದ್ದು ಗೊತ್ತಿದ್ದರೂ ಎರಡನೇ ಮದುವೆಯಾದ ಚೈತ್ರಾ ಕೂಡ ಈಗ ಕಂಬಿ ಎಣಿಸುತ್ತಿದ್ದಾಳೆ.

Exit mobile version