Site icon Kannada News-suddikshana

ಅನುಮಾನಂ ಪೆದ್ದ ರೋಗಂ: ಅನೈತಿಕ ಸಂಬಂಧದ ಶಂಕೆ ಪಟ್ಟು ಲಟ್ಟಾಣಿಗೆ, ಮರದ ತುಂಡಿನಿಂದ ಹಲ್ಲೆ ನಡೆಸಿ ಪತ್ನಿ ಕೊಂದ ಪತಿ…!

SUDDIKSHANA KANNADA NEWS/ DAVANAGERE/ DATE:22-03-2024

ದಾವಣಗೆರೆ: ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಅನೈತಿಕ ಸಂಬಂಧದ ಶಂಕೆ ಪಟ್ಟು ಪತ್ನಿ ಮೇಲೆ ಹಲ್ಲೆ ನಡೆಸಿ ಪತಿಯೇ ಕೊಂದು ಹಾಕಿದ ಘಟನೆ ನಡೆದಿದೆ.

ನೇಪಾಳ ಮೂಲದ ಇಂದ್ರ ಥಾಪಾ (36) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ರಮಣ್ ಕುಮಾರ್ ಥಾಪಾ ಪತ್ನಿಯನ್ನೇ ಹತ್ಯೆ ಮಾಡಿದ ಪತಿ.

ಕಳೆದ ಆರು ತಿಂಗಳ ಹಿಂದಿನಿಂದಲೂ ಬೆಳ್ಳೂಡಿಯ ಕನಕ ಗುರುಪೀಠ ಸಮೀಪದ ಅಕ್ಷಯ ಹೊಟೇಲ್ ನಲ್ಲಿ ರಮಣ್ ಥಾಪಾ ಅಡುಗೆ ಕೆಲಸ ಮಾಡುತ್ತಿದ್ದ. ಬೆಳ್ಳೂಡಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ. ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿರುವ ವಿಚಾರ ಕುರಿತಂತೆ ದಂಪತಿ ನಡುವೆ ಜಗಳ ನಡೆಯುತಿತ್ತು.

ಬುಧವಾರ ರಾತ್ರಿ 12 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ರಮಣ್ ಕುಮಾರ್ ಥಾಪಾನು ಪತ್ನಿ ಜೊತೆ ಜಳ ತೆಗೆದಿದ್ದ. ಅದು ತಾರಕಕ್ಕೇರಿದಾಗ ಚಪಾತಿ ಮಾಡುವ ಲಟ್ಟಣಿಗೆ ಹಾಗೂ ತರಕಾರಿ ಕತ್ತರಿಸಲು ಬಳಸುವ ಮರದ ತುಂಡಿನಿಂದ ಪತ್ನಿ ತಲೆ ಹಾಗೂ ಮೈ, ಕೈಗೆ ಥಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಇಂದ್ರ ಥಾಪಾ ಸಾವು ಕಂಡಿದ್ದಾರೆ. ರಮಣ್ ಥಾಪಾ ಕೆಲಸಕ್ಕೆ ಬಾರದೇ ಇದ್ದದ್ದನ್ನು ಗಮನಿಸಿದ ಹೊಟೇಲ್ ಮಾಲೀಕರು ಮನೆಗೆ ತೆರಳಿದ್ದರು. ಆಗ ಕೊಲೆ ಮಾಡಿರುವ ವಿಚಾರ ಬಯಲಿಗೆ ಬಂದಿದ್ದು, ಹೊಟೇಲ್ ಮಾಲೀಕರು ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Exit mobile version