Home ನವದೆಹಲಿ ಸಚಿವಗಿರಿಗೆ 200 ಕೋಟಿ ರೂ., ಸಿಎಂ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಆಗಿದೆಯಂತೆ!
ನವದೆಹಲಿಬೆಂಗಳೂರು

ಸಚಿವಗಿರಿಗೆ 200 ಕೋಟಿ ರೂ., ಸಿಎಂ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸ್ ಆಗಿದೆಯಂತೆ!

Share
ಸಚಿವ
Share

SUDDIKSHANA KANNADA NEWS/DAVANAGERE/DATE:24_11_2025

ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಕಲಹ ಅಂತಿಮ ಘಟ್ಟದತ್ತ ಹೊರಳಿದೆ. ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸಚಿವ

READ ALSO THIS STORY: ಹೆಸರಿಗಷ್ಟೇ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷರಾ? ಅಧಿಕಾರ ನಕಲಿ ಗಾಂಧಿ ಕುಟುಂಬಕ್ಕೇಕೆ?
ಸಿಎಂ ಸ್ಥಾನಕ್ಕೆ ನೂರಾರು ಕೋಟಿ ಫಿಕ್ಸಾದರೆ, ಸಚಿವಗಿರಿ ಪಡೆಯಲು 200 ಕೋಟಿಯ ವರೆಗೆ ದರ ನಿಗದಿಯಾಗಿದೆ. ಇದನ್ನೆಲ್ಲಾ ನಿಭಾಯಿಸಲು ಉಸ್ತುವಾರಿ ಕಲೆಕ್ಷನ್‌ ವಾಲಾ ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಪಕ್ಷದೊಳಗೂ ಶಾಸಕರ ಖರೀದಿ ಭರಾಟೆ ಜೋರಾಗಿದ್ದು, ತಮ್ಮ ಶಾಸಕರನ್ನೇ ಖರೀದಿ ಮಾಡಲು 100 ಕೋಟಿಯವರೆಗೆ ನೀಡಲು ರಾಜ್ಯ ಕಾಂಗ್ರೆಸ್ ಪಕ್ಷದ ಎರಡೂ ಬಣದವರು ಸಿದ್ಧರಿದ್ದಾರೆ ಎಂದರೆ ಕಾಂಗ್ರೆಸ್‌ ಪಕ್ಷಕ್ಕೆ ಜನಹಿತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದೆ.

ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಈಡೇರಿಸಬೇಕಾದ ಬೇಡಿಕೆಗಳು:
  • ತುಂಗಭದ್ರಾ ವ್ಯಾಪ್ತಿಯಲ್ಲಿ 2ನೇ ಬೆಳೆಗೆ ನೀರಿಲ್ಲ ಪ್ರತಿ ಎಕರೆಗೆ ₹25,000 ಪರಿಹಾರ ಕೊಡಿ
  • ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ಹೆಚ್ಚುವರಿ ₹10,000 ಪರಿಹಾರ ನೀಡಿ
  • ಬಾಕಿ ಉಳಿಸಿಕೊಂಡಿರುವ ಹಾಲು ಉತ್ಪಾದಕರ ಪ್ರೋತ್ಸಾಹ ಧನ ₹620 ಕೋಟಿ ಬಿಡುಗಡೆ ಮಾಡಿ
  • ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಕಿರುಕುಳದಿಂದ ಮುಕ್ತಿಕೊಡಿ
  • ಪ್ರತಿ ಟನ್‌ ಕಬ್ಬಿಗೆ ಕೊಡುತ್ತಿರುವ ₹3,300 SAP ಯನ್ನು ಎಲ್ಲಾ ಜಿಲ್ಲೆಗಳ ರೈತರಿಗೂ ಕಡ್ಡಾಯವಾಗಿ ನೀಡಿ
  • ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನೀರಾವರಿ ಯೋಜನೆಗಳಿಗೆ ₹30 ಸಾವಿರ ಕೋಟಿ ಬಿಡುಗಡೆ ಮಾಡಿ
  • ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ₹4,000 ಕಿಸಾನ್‌ ಸಮ್ಮಾನ್‌ ಯೋಜನೆ ಮರುಪ್ರಾರಂಭಿಸಿ

ರೈತರ ಬೇಡಿಕೆಗಳನ್ನು ಈಡೇರಿಸಬೇಕಾದ ಸಿದ್ದರಾಮಯ್ಯ ಸರ್ಕಾರ ಕುರ್ಚಿ ಕಾದಾಟದಲ್ಲಿ ಅಸ್ಥಿರಗೊಂಡಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

Share

Leave a comment

Leave a Reply

Your email address will not be published. Required fields are marked *