Home ದಾವಣಗೆರೆ ರಂಗೋಲಿಯಲ್ಲಿ ಅರಳಿದ 130 ಅಡಿ ಅಳತೆಯ ಬೃಹತ್ತಾದ ಶಾಮನೂರು ಶಿವಶಂಕರಪ್ಪ ಚಿತ್ರ
ದಾವಣಗೆರೆನವದೆಹಲಿಬೆಂಗಳೂರು

ರಂಗೋಲಿಯಲ್ಲಿ ಅರಳಿದ 130 ಅಡಿ ಅಳತೆಯ ಬೃಹತ್ತಾದ ಶಾಮನೂರು ಶಿವಶಂಕರಪ್ಪ ಚಿತ್ರ

Share
Share

SUDDIKSHANA KANNADA NEWS/DAVANAGERE/DATE:26_12_2025

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ನುಡಿ ನಮನದ ಪ್ರಯುಕ್ತ ಬಿಐಇಟಿ ಕಾಲೇಜಿನ ಆವರಣದಲ್ಲಿ130 ಅಡಿ ಅಳತೆಯ ಬೃಹತ್ತಾದ ಚಿತ್ರ ವನ್ನು ರಂಗೋಲಿಯಲ್ಲಿ ಅರಳಿಸಲಾಯಿತು.

ಈ ಸುದ್ದಿಯನ್ನೂ ಓದಿ: ಭೂ ಪರಿವರ್ತನೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮೂಲಕ ಯಾವೆಲ್ಲಾ ವಿಚಾರಗಳನ್ನು ಸರಳೀಕರಣ ಮಾಡಲಾಗಿದೆ..?

ಸಂಸದೆ ಡಾ. ಪ್ರಭಾಮಲ್ಲಿಕಾರ್ಜುನ್ ಅವರು ತಮ್ಮ ಕುಟುಂಬ ವರ್ಗದವರೊಡನೆ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ.ಜಸ್ಟಿನ್ ಡಿ ಸೌಜ ಅವರು ರಚಿಸಿದ “ ದಾವಣಗೆರೆ ಧಣಿ ಬಡವರ ಕಣ್ಮಣಿ “ ಶೀರ್ಷಿಕೆಯ ಹಾಡನ್ನು ಸಮರ್ಪಿಸಲಾಯಿತು. ಬಾಪೂಜಿ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾವ ನಮನ ಸಲ್ಲಿಸಿದರು.

ಚಿತ್ರ ರಚಿಸಿದ ಸಿದ್ದಗಂಗಾ ವಿದ್ಯಾಸಂಸ್ಯೆಯ ವಿದ್ಯಾರ್ಥಿಗಳಿಗೂ ಹಾಗೂ ಚಿತ್ರಕಲಾ ಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ. ಜಯಂತ್ ಅವರ ಪರಿಕಲ್ಪನೆಯಲ್ಲಿ ಹಾಗೂ ಡಿ. ಎಸ್. ಹೇಮಂತ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿತ್ತು.

Share

Leave a comment

Leave a Reply

Your email address will not be published. Required fields are marked *