Site icon Kannada News-suddikshana

ಭುಗಿಲೆದ್ದ ಕೂಡಲ ಸಂಗಮ ಪೀಠ ವಿವಾದದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಹೆಚ್. ಎಸ್. ಶಿವಶಂಕರ್!

ಕೂಡಲ ಸಂಗಮ

ದಾವಣಗೆರೆ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮದ ಪಂಚಮಸಾಲಿ ಪೀಠದ ವಿವಾದ ಭುಗಿಲೆದ್ದಿದ್ದು, ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹುನಗುಂದ ಕಾಂಗ್ರೆಸ್
ಶಾಸಕ ವಿಜಯಾನಂದ ಕಾಶಪ್ಪನವರ್ ನಡುವಿನ ವೈಮನಸ್ಸು ಜಗಜ್ಜಾಹೀರಾಗಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಮಠಕ್ಕೆ ಬೀಗ ಹಾಕಿಸಿದ್ದ ವಿಜಯಾನಂದ ಕಾಶಪ್ಪನವರ್ ಕೂಡಲ ಸಂಗಮ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

READ ALSO THIS STORY: ಅನೈತಿಕ ಸಂಬಂಧ ಹೊಂದಿದ್ದ ಬಾವನ ಜೊತೆ ಸೇರಿ ಗಂಡನ ಕೊಂದ ಪತ್ನಿ: ವಾಟ್ಸಪ್ ಚಾಟ್ ಚಾಟ್ ಕೊಡ್ತು ಹಂತಕರ ಸುಳಿವು!

ಈ ಬೆಳವಣಿಗೆ ನಡುವೆ ದಾವಣಗೆರೆಯಲ್ಲಿ ಮಾಧ್ಯಮದವರಿಗೆ ಮಾಜಿ ಶಾಸಕ ಹಾಗೂ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿಯವರ ಆಪ್ತರೂ ಆದ ಹೆಚ್. ಎಸ್. ಶಿವಶಂಕರ್ ಅವರು ಪೀಠದ ಗಲಾಟೆ
ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ನಡುವಿನ ರಾಜಕೀಯ ವೈಷಮ್ಯದಿಂದ ಈ ಬೆಳವಣಿಗೆ ನಡೆದಿದೆ. ಕಾಶಪ್ಪನವರ್ ಮತ್ತು ಯತ್ನಾಳ್ ನಡುವಿನ ರಾಜಕೀಯ ವ್ಯತ್ಯಾಸ ಪೀಠದ ಮೇಲೆ ಪರಿಣಾಮ ಬೀರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಮಾಡಿ, ಯಾರೂ ಬೇಡವೆನ್ನಲ್ಲ. ಪೀಠದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಸಂದರ್ಭ ಬಂದರೆ ಸ್ವಾಮೀಜಿ ಉಚ್ಚಾಟನೆ ಮಾಡುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ರಾಜಕೀಯ ಗೊಂದಲಗಳಿಂದ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಮಠಕ್ಕೆ ಬೀಗ ಹಾಕಿಸಿದ್ದಾಗಲೀ, ರಾಜಕೀಯವಾಗಿ ಅವರ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ. ಕಾಶಪ್ಪನವರ್ ಜೊತೆ ಮಾತನಾಡಿದ್ದೇನೆ. ಕೂತು ಮಾತನಾಡೋಣ ಎಂದಿದ್ದೇನೆ. ಸಮಸ್ಯೆ ಪರಿಹಾರವಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ವಿಜಯಾನಂದ ಕಾಶಪ್ಪನವರ್ ಅವರೇ ಕರೆದುಕೊಂಡಿರಬಹುದು. ಶ್ರೀಗಳು ಸಮಾಜ ಸಂಘಟನೆ ಮಾಡಿದ್ದಾರೆ, ಸಮಾಜವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಪ್ರತ್ಯೇಕ ಮಠ ಕಟ್ಟಿಲ್ಲ. 2ಎ ಮೀಸಲಾತಿಗೆ
ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಸಾಕಷ್ಟು ಹೇಳಿಕೆ ನೀಡಿದರು. ಹೋರಾಟ  ಮಾಡಿದರು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಮ್ಮ ಹಕ್ಕು ಕೊಡಲಿಲ್ಲ. ಈ ಸರ್ಕಾರದ ವಿರುದ್ಧವೂ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್ ನವರು 2ಎ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. 2ಎ ಮೀಸಲಾತಿ ನೀಡುತ್ತೇವೆ ಎಂಬ ಭರವಸೆ ಭರವಸೆಯಾಗಿಯೇ ಉಳಿದಿದೆ. ಸಮಾಜದ ಪರ ಧ್ವನಿ ಎತ್ತಿದವರು, ಹೋರಾಟ ಮಾಡಿದವರ ನಡುವೆಯೇ ವ್ಯತ್ಯಾಸ ಬಂದಿದೆ ಎಂದು ಹೆಚ್. ಎಸ್. ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.

Exit mobile version