Site icon Kannada News-suddikshana

ಆರ್‌ಎಸ್‌ಎಸ್ ಎಷ್ಟು ದೊಡ್ಡದು? ನಿಷೇಧ ಸಾಧ್ಯವೇ: ಎಲ್ಲೂ ಇಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಆರ್‌ಎಸ್‌ಎಸ್

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ ಆರ್‌ಎಸ್‌ಎಸ್. ಸಂವಿಧಾನದಲ್ಲಿ ಈ ಸಂಘಟನೆ ನಿಷೇಧ ಸಾಧ್ಯವೇ ಇಲ್ಲ. ಅದರಲ್ಲಿಯೂ ರಾಜ್ಯ ಸರ್ಕಾರಗಳಿಗೆ ಈ ಅಧಿಕಾರ ಇಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ.

ಈ ಸುದ್ದಿಯನ್ನೂ ಓದಿ: ಬೆಳಕಿನ ಹಬ್ಬದ ವೇಳೆಯಲ್ಲೂ ಬರಲಲ್ಲ ಬೆಳಕು, ಕತ್ತಲಲ್ಲಿ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ: ಚಿತ್ರದುರ್ಗ ಕಾಂಗ್ರೆಸ್ ಶಾಸಕನಿಗೆ ಶಾಕ್ ಮೇಲೆ ಶಾಕ್!

ಆರ್ ಎಸ್ ಎಸ್ ಇಂದು ಬೃಹದಾಕಾರವಾಗಿ ಬೆಳೆದಿರುವ ದೇಶದ ದೊಡ್ಡ ಸಂಘಟನೆ. ಈ ಸಂಘವನ್ನು ನಿಷೇಧ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಚಟುವಟಿಕೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿರುವುದು ಬಿಜೆಪಿ, ಹಿಂದೂಪರ ಸಂಘಟನೆಗಳನ್ನು ಕೆರಳಿಸಿದೆ. ಸರ್ಕಾರಿ ಜಾಗ, ಮುಜರಾಯಿ ಇಲಾಖೆಗೆ ಒಳಪಟ್ಟ ಸ್ಥಳಗಳಲ್ಲಿ ಬೈಠಕ್ ಸೇರಿದಂತೆ ಸರ್ಕಾರಿ ತಾಣಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳಿಗೆ ನಿಷೇಧ ಹೇರುವ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ನಿರ್ಣಯಿಸಲು ಹವಣಿಸುತ್ತಿದೆ.

ಆರ್ ಎಸ್ ಎಸ್ ಬಗ್ಗೆ ಒಂದಿಷ್ಟು…

ಆರ್‌ಎಸ್‌ಎಸ್ ಇಂದು ವಿಶ್ವದ ಅತ್ಯಂತ ದೊಡ್ಡ ಸ್ವಯಂಸೇವಕರ ಸಂಘ. ಕೋಟ್ಯಂತರ ಕಾರ್ಯಕರ್ತರು, ಸಾವಿರಾರು ಶಾಖೆಗಳು ಹಾಗೂ ವಿದೇಶಗಳಲ್ಲಿಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಬಿಜೆಪಿ ಅದರ ರಾಜಕೀಯ ಕ್ಷೇತ್ರದಲ್ಲಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ.

ಅಂಕಿಅಂಶಗಳು:
ಸಂಘದ ಸಂಖ್ಯಾತ್ಮಕ ಮಾಹಿತಿಗಳು ಅಂದಾಜು ಇಂತಿವೆ.

ದೇಶದಲ್ಲಿ ಯಾವುದೇ ರೀತಿಯ ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಮೊದಲು ಸೇವಾ ಕಾರ್ಯಗಳು ನಿಸ್ವಾರ್ಥವಾಗಿ ಹಗಲಿರುಳು ಸೇವಾ ಕಾರ್ಯಗಳನ್ನು ಮಾಡುವುದೇ RSS .

ಇವುಗಳ ಮೂಲಕ ಆರ್‌ಎಸ್‌ಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ, ಸಂಘಟಿತ ಹಾಗೂ ನಿರಂತರ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಕಾಂಗ್ರೆಸ್ಸಿಗರಿಗೆ, ಅವರ ಪಕ್ಷಕ್ಕಿಂತಲೂ ದೊಡ್ಡದಾದ ಇಂತಹ ವಿಶ್ವದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯನ್ನು ನಿಷೇಧಿಸುವ ಸಾಮರ್ಥ್ಯವಾದರೂ ಇದೆಯೇ? ಎಂದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಪ್ರಶ್ನಿಸಿವೆ.

Exit mobile version