Home ದಾವಣಗೆರೆ ಪಿಯುಸಿ ಫಲಿತಾಂಶದಲ್ಲಿ ಹೊನ್ನಾಳಿಯ ಕೀರ್ತಿ ವರ್ಣೇಕರ್ ಸಾಧನೆ: ದಾವಣಗೆರೆ ಜಿಲ್ಲೆಗೆ ಪ್ರಥಮ
ದಾವಣಗೆರೆಬೆಂಗಳೂರು

ಪಿಯುಸಿ ಫಲಿತಾಂಶದಲ್ಲಿ ಹೊನ್ನಾಳಿಯ ಕೀರ್ತಿ ವರ್ಣೇಕರ್ ಸಾಧನೆ: ದಾವಣಗೆರೆ ಜಿಲ್ಲೆಗೆ ಪ್ರಥಮ

Share
ಪಿಯುಸಿ
Share

ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಹೊನ್ನಾಳಿಯ ಜ್ಞಾನ ಸಾಗರದ ಶ್ರೀ ವಿಜಯ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೀರ್ತಿ ಆರ್ ವರ್ಣೇಕರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 600 ಅಂಕಗಳಿಗೆ 595 ಅಂಕಗಳನ್ನು ಪಡೆಯುವ ಮೂಲಕ ಕೀರ್ತಿ ಅವರು ರಾಜ್ಯಕ್ಕೆ 5ನೇ ಸ್ಥಾನ ಹಾಗೂ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯ ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇವರು ಹೊನ್ನಾಳಿಯ ನಿವಾಸಿಗಳಾದ ಶ್ರೀಮತಿ ಯಮುನಾ ಮತ್ತು ರತ್ನಾಕರ್ ದಂಪತಿಗಳ ಪುತ್ರಿಯಾಗಿದ್ದಾರೆ. ಇವರ ಈ ಅಮೋಘ ಸಾಧನೆಗೆ ಶಿಕ್ಷಣ ಸಂಸ್ಥೆಯ ಮಂಡಳಿ, ಉಪನ್ಯಾಸಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿದ್ಯಾರ್ಥಿನಿ ಕೀರ್ತಿ ಆರ್. ವರ್ಣೇಕರ್ ಅವರನ್ನು ಅಧ್ಯಾಪಕರು, ಪ್ರಾಂಶುಪಾಲರು, ಕಾಲೇಜಿನ ಸಿಬ್ಬಂದಿ, ಬೋಧಕೇತರ ವರ್ಗದವರು ಸನ್ಮಾನಿಸಿದರು.

ಕನ್ನಡ ಭಾಷೆಯಲ್ಲಿ 100ಕ್ಕೆ 100, ಎಕಾನಮಿಕ್ಸ್ ನಲ್ಲಿ 100ಕ್ಕೆ 100, ಎಸಿಸಿ ಪರೀಕ್ಷೆಯಲ್ಲಿ 100ಕ್ಕೆ 100, ಇಂಗ್ಲೀಷ್ ಭಾಷೆಯಲ್ಲಿ ನೂರಕ್ಕೆ 95, ಬಿಎಸ್ ವಿಷಯದಲ್ಲಿ 100ಕ್ಕೆ 100 ಹಾಗೂ ಸಿಎಸ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. 600 ಅಂಕಗಳಿಗೆ 595 ಅಂಕ ಪಡೆಯುವ ಮೂಲಕ ಶೇಕಡಾ 99.10 ರಷ್ಟು ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಫಲಿತಾಂಶಕ್ಕೆ ನನ್ನ ತಂದೆ ತಾಯಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಅಧ್ಯಾಪಕರ ಸಹಕಾರ ಕಾರಣ. ನನಗೆ ಇಂಗ್ಲೀಷ್ ನಲ್ಲಿ 95 ಅಂಕ ಬಂದಿದೆ. ಈ ವಿಚಾರದಲ್ಲಿ ಮರುಮೌಲ್ಯಮಾಪನಕ್ಕೆ ಹಾಕಲು ನಿರ್ಧರಿಸಿದ್ದೇನೆ. ಐದು ವಿಷಯಗಳಲ್ಲಿ 100ಕ್ಕೆ 100 ಅಂಕಗಳು ಬಂದಿವೆ. ಆದರೆ ಇಂಗ್ಲೀಷ್ ಭಾಷೆಯಲ್ಲಿ ಐದು ಅಂಕಗಳು ಕಡಿಮೆ ಬಂದಿದ್ದು, ನಿರಾಸೆ ತಂದಿದೆ. ಈ ವಿಷಯದಲ್ಲಿಯೂ ಹೆಚ್ಚಿನ ಅಂಕ ಬರಬೇಕಿತ್ತು. ಕಡಿಮೆಯಾಗಿದೆ. ನನ್ನ ಓದಿಗೆ ತಂದೆ ತಾಯಿ ಏನನ್ನೂ ಕಡಿಮೆ ಮಾಡಿಲ್ಲ. ಉತ್ತಮ ಸಹಕಾರ ಕೊಟ್ಟಿದ್ದಾರೆ. ತಂದೆ ತಾಯಿ ಆಶೀರ್ವಾದ, ಅಧ್ಯಾಪಕರ ಸಲಹೆ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಕೀರ್ತಿ ಆರ್. ವರ್ಣೇಕರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳು:

ಹೊನ್ನಾಳಿಯ ಶ್ರೀ ವಿಜಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2026-27ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅತ್ಯುತ್ತಮ ಫಲಿತಾಂಶ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಕೆ. ಎಸ್. ಸತೀಶ್ ಚಂದ್ರ, ಉಪ ಪ್ರಾಂಶಪಾಲ ಎಸ್. ಎಚ್. ಜಯರಾಮ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳೆರಡೂ ಸೇರಿ, ಪರೀಕ್ಷೆಗೆ ಹಾಜರಾದ 306 ವಿದ್ಯಾರ್ಥಿಗಳಲ್ಲಿ 98 ಅತ್ಯುನ್ನತ ಶ್ರೇಣಿ, 170 ಪ್ರಥಮ ಶ್ರೇಣಿ, 32 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಒಟ್ಟು ಕಾಲೇಜಿನ ಶೇಕಡವಾರು ಫಲಿತಾಂಶ 98% ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

 

ವಾಣಿಜ್ಯ ವಿಭಾಗದ ಕೀರ್ತಿ ಆರ್ ವರ್ಣೇಕರ್ ಎಂಬ ವಿದ್ಯಾರ್ಥಿನಿಯು 600 ಕ್ಕೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ಸ್ಥಾನವನ್ನು ಹಾಗು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಶುಭ ಎನ್. ಹೆಚ್. 587 ಅಂಕ ಪಡೆದು ನ್ಯಾಮತಿ ಹಾಗೂ ಹೊನ್ನಾಳಿ ಅವಳೇ ತಾಲ್ಲೂಕಿಗೇ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ಹರ್ಷಿತಾ ಕಮಾರಿ ಎಂಬ ವಿದ್ಯಾರ್ಥಿನಿಯು 584 ಅಂಕ ಪಡೆದು ನ್ಯಾಮತಿ ಹಾಗೂ ಹೊನ್ನಾಳಿ ತಾಲ್ಲೂಕಿಗೇ ತೃತೀಯ ಸ್ಥಾನ ಪಡೆದಿದ್ದಾಳೆ. ಇದು ಖುಷಿಯ ವಿಚಾರ ಎಂದಿದ್ದಾರೆ.

ದೀಪ ಎಸ್ ಎಂಬ ವಿದ್ಯಾರ್ಥಿನಿಯು 600 ಕ್ಕೆ 579 ಅಂಕಗಳನ್ನು ಗಳಿಸಿ ನ್ಯಾಮತಿ ಹಾಗೂ ಹೊನ್ನಾಳಿ ಅವಳೇ ತಾಲ್ಲೂಕಿಗೇ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಪಯಾಲ್ ನದಾಫ್ ಎಂಬ ವಿದ್ಯಾರ್ಥಿನಿಯು 571 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಹಾಗೂ ಸಿಂಚನಾ ಮತ್ತು ಸಿಂಧು ಹೆಚ್ ಎಂಬ ವಿದ್ಯಾರ್ಥಿಗಳು 570 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದು ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *