Site icon Kannada News-suddikshana

ಕಡಿಮೆ ಬೆಲೆಯ ಟ್ಯಾಟೂ ಹಾಕಿಸಿಕೊಳ್ಳುವವರೇ ಎಚ್ಚರ; ಹಚ್ಚೆಯಿಂದಲೂ ಬರುತ್ತೆ ಹೆಚ್‌ಐವಿ ಏಡ್ಸ್?

ಈಗಿನ ದಿನಗಳಲ್ಲಿ ಟ್ಯಾಟೂ ಫ್ಯಾಷನ್‌ ಆಗಿದೆ. ಜನರು ಶಾಶ್ವತ ಟ್ಯಾಟೂ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಿಕೊಳ್ಳುವ ವೇಳೆ ಸುರಕ್ಷತೆಗೆ ಗಮನ ನೀಡಬೇಕು.

ಅಸುರಕ್ಷಿತ ಸ್ಥಳಗಳಲ್ಲಿ ಹಚ್ಚೆ ಹಾಕಿಸಿಕೊಂಡಾಗ ಅವರು ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವ ಸಾಧ್ಯತೆಯಿರುತ್ತದೆ. ಇದ್ರಿಂದ ಸೋಂಕು ಸುಲಭವಾಗಿ ಹರಡುತ್ತದೆ. ಎಚ್‌ ಐವಿ ಸಾಂಕ್ರಾಮಿಕ ರೋಗವಾಗಿದ್ದು ಅದು ಬಳಸಿದ ಸೂಜಿಯಿಂದಲೂ ಹರಡುತ್ತದೆ. ಇದಕ್ಕೆ ಇತ್ತೀಚೆಗೆ ವಾರಾಣಸಿಯ ಬನಾರಸ್‌ನಲ್ಲಿ ಹಚ್ಚೆ ಹಾಕಿಸಿಕೊಂಡ 12 ಮಂದಿಗೆ ಎಚ್‌ಐವಿ ಸೋಂಕು ತಗುಲಿದ್ದು ತಾಜಾ ನಿದರ್ಶನ.

Exit mobile version