Site icon Kannada News-suddikshana

“ಹಿಂದೂ ಸಮಾಜ ಸತ್ತಿಲ್ಲ… ಹಿಂದೂ ಸಂಘಟನೆ ಗಟ್ಟಿಯಾಗೈತಿ”: ರಾಜನಹಳ್ಳಿ ಶಿವಕುಮಾರ್ ಆಕ್ರೋಶ

ಹಿಂದೂ

SUDDIKSHANA KANNADA NEWS/DAVANAGERE/DATE:27_09_2025

ದಾವಣಗೆರೆ: ದಾವಣಗೆರೆಯಲ್ಲಿ ಹಿಂದೂ ಸಮಾಜ ಸತ್ತಿಲ್ಲ, ಹಿಂದೂ ಸಂಘಟನೆ ಗಟ್ಟಿಯಾಗಿದೆ. ಪೊಲೀಸರು ವಿನಾಕಾರಣ ಆಟೋ ಚಾಲಕರ ಮೇಲೆ ಕೇಸ್ ಹಾಕಿದರೆ ದಂಡದ ಹಣವೂ ಸೇರಿದಂತೆ ಎಲ್ಲಾ ರೀತಿಯಲ್ಲಿ ನೆರವು ನೀಡುತ್ತೇವೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

READ ALSO THIS STORY: ಹಿಂದೂಗಳ ಮೇಲೆ ಕೇಸ್, ಆಜಾದ್ ನಗರದಲ್ಲಿ ಕಾನೂನು ಗಾಳಿಗೆ ತೂರಿದ್ದರೂ ಇದ್ದರೂ ಕ್ರಮ ಏಕಿಲ್ಲ: ಹಿಂದೂ ಮುಖಂಡರ ರೋಷಾವೇಶ!

ನಗರದ ಹೈಸ್ಕೂಲ್ ಮೈದಾನದಿಂದ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ರ್ಯಾಲಿಯಲ್ಲಿ ಹೊರಟ ಆಟೋ ಚಾಲಕರನ್ನು ತಡೆದು ದಾಖಲೆ ಕೇಳಿ ಕೇಸ್ ಹಾಕುತ್ತಿದ್ದ ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ಹೊರ ಹಾಕಿದರು.

ಆಟೋ ಚಾಲಕರಿಗೆ ಕೇಸ್ ಹಾಕುವುದು ಇದೇ ಮೊದಲಲ್ಲ. ನಾವು ಹೋರಾಟ ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಅನ್ಯಾಯ ಆಗಲು ಬಿಡುವ ಪ್ರಶ್ನೆಯೇ ಇಲ್ಲ. ದಾವಣಗೆರೆಯಲ್ಲಿ ಟ್ರಾಫಿಕ್ ಸಮಸ್ಯೆ, ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದೆ. ಆಟೋಗಳ ಮೂಲಕ ಹಿಂದೂ ಸಮಾಜದ ಜಾಗೃತಿ ಮೂಡಿಸಲು ಹೊರಟರೆ ಡಿಎಲ್ ಸೇರಿದಂತೆ ದಾಖಲಾತಿ ಕೇಳುತ್ತಾರೆಂದರೆ ಯಾವ ಮಟ್ಟಕ್ಕೆ ಇಲ್ಲಿ ಪೊಲೀಸರು ಕೆಲಸ ನಿರ್ವಹಿಸುತ್ತಾರೆ ಎಂಬುದು ಗೊತ್ತಾಗುತ್ತದೆ. ಇಲಾಖೆಯ ಬಗ್ಗೆ ಯಾವ ಭಾಷೆಯಲ್ಲಿ ಬೈಯಬೇಕು. ಅಂದರೆ ಕಾಲು ಕೆರೆದು ಹಿಂದೂಗಳ ಜೊತೆ ಜಗಳಕ್ಕೆ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಆಟೋ ಚಾಲಕರ ಮೇಲೆ ಕೇಸ್ ಹಾಕಿದ್ದಾಗ ಸಾವಿರಾರು ಆಟೋಗಳನ್ನು ನಾವು ಬಿಡಿಸಿಕೊಟ್ಟಿದ್ದೇವೆ. ನೀವೆಲ್ಲರೂ ಬಂದಿದ್ದೀರಾ. ಏನೇ ಕಾನೂನು ಸಮಸ್ಯೆ ಬಂದರೂ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎಂದು ರಾಜನಹಳ್ಳಿ ಶಿವಕುಮಾರ್ ಭರವಸೆ ನೀಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

Exit mobile version