ದಾವಣಗೆರೆ: ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನು ಮುಂದುವರಿಸಲಾಗುತ್ತದೆಯೋ ಇಲ್ಲವೋ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಸಿಎಂ ಆಗಿ ಮಾಡುತ್ತಾರೋ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮನವಿ ಮಾಡಿದ್ದಾರೆ.
READ ALSO THIS STORY: ಅನ್ನ ಭಾಗ್ಯ ಅಕ್ಕಿಗೆ ಕನ್ನ ಹಾಕಿ ಅಕ್ರಮ ಸಂಗ್ರಹ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಸೇರಿ ಇಬ್ಬರ ವಿರುದ್ಧ ಎಫ್ಐಆರ್!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಗೊಂದಲ ಗೊಂದಲವಾಗಿಯೇ ಉಳಿದಿದೆ. ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ ಎರಡೂವರೆ ವರ್ಷ ಸಿಎಂ ಆಗಿರುವ ಸಿದ್ದರಾಮಯ್ಯರ ಬದಲಾವಣೆ ಮಾಡದಿದ್ದರೂ ತಿಳಿಸಬೇಕು. ಇಲ್ಲವೇ ಡಿ. ಕೆ. ಶಿವಕುಮಾರ್ ಸೇರಿದಂತೆ ಯಾರನ್ನೇ ಮುಖ್ಯಮಂತ್ರಿಯಾಗಿಸಿದರೂ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಹೇಳಿದರು.
ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ ಆ ರೀತಿ ನಡೆದುಕೊಳ್ಳಬೇಕಾಗುತ್ತದೆ. ಅಧಿಕಾರ ಒಡಂಬಡಿಕೆ ಆಗಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಮಾಧ್ಯಮಗಳಲ್ಲಿಯೇ ಬರುತ್ತಿದೆ. ಮಾಧ್ಯಮದವರು ಈ ಬಗ್ಗೆ ತಿಳಿದುಕೊಳ್ಳಬೇಕು. ಈ ಬಗ್ಗೆ ಸಿದ್ದರಾಮಯ್ಯರೇ ಹೇಳಬೇಕು ಎಂದು ಶಿವಗಂಗಾ ಬಸವರಾಜ್ ಹೇಳಿದರು.
ಹೈಕಮಾಂಡ್ ಹೇಳಿದಂತೆ ನಡೆಯುವವರು ನಾವು. ಖಡಾಖಂಡಿತವಾಗಿ ಹೇಳಿಬಿಟ್ಟರೆ ನಮಗೂ ನಿರಾಳ. ಮಾಧ್ಯಮದವರು ಪದೇ ಪದೇ ಬಂದು ನಮಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಲೇಬೇಕಾಗುತ್ತದೆ. ತಪ್ಪಿಸಿಕೊಂಡು ಹೋಗಲು ಆಗಲ್ಲ. ನಾವು ಜವಾಬ್ದಾರಿಯುತ ಸ್ಥಾನದಲ್ಲಿರುವವರು. ನಾನು ಶಾಸಕನಾಗಿದ್ದೇನೆ. ಹಾಗಾಗಿ, ಹೈಕಮಾಂಡ್ ಒಮ್ಮೆ ಈ ಬಗ್ಗೆ ಘೋಷಿಸಿಬಿಟ್ಟರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ತಿಳಿಸಿದರು.
- Basavaraju V. Shivaganga
- Basavaraju V. Shivaganga Congress Mla
- Basavaraju V. Shivaganga News
- Basavaraju V. Shivaganga Talk
- Mla
- ಚನ್ನಗಿರಿ ಕಾಂಗ್ರೆಸ್ ಶಾಸಕ
- ಬಸವರಾಜ್ ವಿ. ಶಿವಗಂಗಾ
- ಬಸವರಾಜ್ ವಿ. ಶಿವಗಂಗಾ ಗರಂ
- ಬಸವರಾಜ್ ವಿ. ಶಿವಗಂಗಾ ನ್ಯೂಸ್
- ಬಸವರಾಜ್ ವಿ. ಶಿವಗಂಗಾ ಮಾತು
- ಬಸವರಾಜ್ ವಿ. ಶಿವಗಂಗಾ ಸಿಟ್ಟು
- ಬಸವರಾಜ್ ವಿ. ಶಿವಗಂಗಾ- ಚನ್ನಗಿರಿ ಕಾಂಗ್ರೆಸ್ ಶಾಸಕ




Leave a comment