ಕಲಬುರಗಿ: ಏಯ್ ಸುಮ್ಮನಿರು… ಏಯ್ ಸುಮ್ಮನೆ ಕುಳಿತುಕೊಳ್ಳಿ… ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಗದರಿದ ಪರಿ.
ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡುವ ವೇಳೆ ಈ ಘಟನೆ ನಡೆಯಿತು.
ಸೇಡಂ ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡುವಾಗ ಘೋಷಣೆ ಕೂಗಲು ಆರಂಭಿಸಿದರು. ಆಗ ಸಿಟ್ಟಿಗೆದ್ದ ಮಲ್ಲಿಕಾರ್ಜುನ ಖರ್ಗೆ ಗದರಿದರು. ಏಯ್ ಸುಮ್ಮನಿರ್ರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷ ಉಳಿದೇ ಉಳಿಯುತ್ತದೆ. ಬಿಜೆಪಿ ನಾಯಕರು ಮತ್ತು ಕೆಲವರು ಈ ಮಾತು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಶಾಶ್ವತವಾಗಿರಲಿದೆ. ಕಾಂಗ್ರೆಸ್ ನಿಮ್ಮ ಸುಖದಲ್ಲಿ ಭಾಗಿಯಾಗಿದೆ. ಇಂದಿರಾ ಗಾಂಧಿ ಕಷ್ಟದಲ್ಲಿದ್ದಾಗ ನಾನು ಕಾಂಗ್ರೆಸ್ ಸೇರಿದ್ದೆ. ಕಾಂಗ್ರೆಸ್ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೆಲವು ಕಾನೂನು ಮಾಡಿದ್ದರು. ಬಿ. ಆರ್. ಅಂಬೇಡ್ಕರ್ ಬರೆದ ಸಂವಿಧಾನ. ಆರ್ಟಿಕಲ್ 41ರ ಪ್ರಕಾರ ಕೆಲಸ ಮಾಡುವ ಅಧಿಕಾರ ಕಾಯ್ದೆ ಜಾರಿಗೆ ತಂದಿದ್ದರು. ಬಡವರಿಗೆ ಹೊಟ್ಟೆ ತುಂಬುವ ಆಹಾರ ಧಾನ್ಯಗಳ ಒದಗಿಸುವ ಕಾಯ್ದೆ, ಕಾರ್ಮಿಕರಿಗೆ ಉದ್ಯೋಗ ಕಾಯ್ದೆ, ಆರೋಗ್ಯ ಕಾಯ್ದೆ ಸೇರಿದಂತೆ ಹಲವು ಕಾನೂನುಗಳನ್ನು ಸೋನಿಯಾ ಗಾಂಧಿ ಮಾಡಿದ್ದರು. ಇಷ್ಟೊಂದು ಒಳ್ಳೆಯ ಕಾನೂನು ಮಾಡಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ. ಮುಂದೆ ನಮ್ಮ ಸರ್ಕಾರ ಕರ್ನಾಟಕದಲ್ಲಿ ಬಂದ ಮೇಲೆ ಸಿದ್ದರಾಮಯ್ಯರ ನೇತೃತ್ವದಲ್ಲಿ ಅನೇಕ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿತು. ಗ್ಯಾರಂಟಿಗಳು ಮತ್ತು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ನೀಡಿದ ಹಕ್ಕುಗಳು ಜಾರಿಗೆ ತಂದವು. ಇದನ್ನು ಜಾರಿಗೆ ತಂದಿದ್ದು ಕರ್ನಾಟಕ ರಾಜ್ಯ ಮಾತ್ರ ಎಂದು ಕೊಂಡಾಡಿದರು.





Leave a comment