Site icon Kannada News-suddikshana

ಸೆ. 18ರವರೆಗೆ ಸುರಿಯಲಿದೆ ಭಾರೀ ಮಳೆ( Rain): ದಾವಣಗೆರೆ ಕೂಲ್ ಕೂಲ್…!

SUDDIKSHANA KANNADA NEWS/ DAVANAGERE/ DATE:17-09-2023

ಬೆಂಗಳೂರು: ಶನಿವಾರ ಸುರಿದ ಮಳೆ (Rain) ಯಿಂದಾಗಿ ದಾವಣಗೆರೆ ಕೂಲ್ ಕೂಲ್ ಆಗಿದೆ. ವಾತಾವರಣವೂ ತಂಪಾಗಿತ್ತು. ಮಧ್ಯಾಹ್ನದಿಂದ ಶುರುವಾದ ಮಳೆ ಉತ್ತಮವಾಗಿ ಸುರಿಯಿತು. ಮೆಕ್ಕೆಜೋಳ ಬೆಳೆಗೆ ಲಾಭವಾಗದಿದ್ದರೂ ದಾವಣಗೆರೆ
ಜನರಿಗೆ ತಂಪೆನೆಯ ವಾತಾವರಣದ ಅನುಭವ ಆಯಿತು. ಮಳೆ(Rain)ಯಿಂದ ತಪ್ಪಿಸಿಕೊಳ್ಳಲು ಜನರು ಪರದಾಡಿದರು.

ಈ ಸುದ್ದಿಯನ್ನೂ ಓದಿ: 

BIG BREAKING: ಭದ್ರಾ ಡ್ಯಾಂ (Bhadra Dam) ನೀರು ಸ್ಥಗಿತಕ್ಕೆ ರೈತರ ವ್ಯಾಪಕ ಆಕ್ರೋಶ, ಡಿಕೆಶಿ ಜೊತೆ ಸಚಿವ ಎಸ್. ಎಸ್ ಎಂ ಚರ್ಚೆ: ಭದ್ರಾ ನಾಲೆಗಳಲ್ಲಿ ಮತ್ತೆ ಹರಿಯಲಿದೆ ನೀರು…?

ಸಂಜೆ ಹಾಗೂ ರಾತ್ರಿ ಉತ್ತಮ ಮಳೆ(Rain)ಯಾಯಿತು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ವರುಣ ಅಬ್ಬರಿಸಿ ಬೊಬ್ಬಿರಿಯಲಿದ್ದು, ಜನರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆಯು ಸೂಚನೆ ಕೊಟ್ಟಿದೆ.

ಎಲ್ಲೆಲ್ಲಿ ಭಾರೀ ಮಳೆ (Rain):

ಬೆಂಗಳೂರು, ಚಾಮರಾಜನಗರ, ದಾವಣಗೆರೆ, ಹಾಸನ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ಯಾದಗಿರಿ, ಜಿಲ್ಲೆಸೇರಿದಂತೆ ಹಲವೆಡೆ ಸಾಧಾರಣ ಮಳೆ(Rain)ಯಾಗುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆಯು ದೇಶದ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 17 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಒಡಿಶಾ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆ(Rain)ಯಾಗುವ ನಿರೀಕ್ಷೆಯಿದೆ.

ವಾಯುಭಾರ ಕುಸಿತದ ಪರಿಣಾಮ ಮುಂಗಾರು ಚುರುಕುಕೊಂಡಿದೆ. ಗಾಳಿಯ ದಿಕ್ಕು ಬದಲಾಗಿ ಪಶ್ಚಿಮದಿಂದ ಬೀಸುತ್ತಿದ್ದು, ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ(Rain)ಯಾಗುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ
ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ.

Exit mobile version