Site icon Kannada News-suddikshana

ಹೃದಯಘಾತಕ್ಕೆ ಶಿವಮೊಗ್ಗದಲ್ಲಿಯೂ ಮರಣಮೃದಂಗ: ಎರಡೇ ದಿನದಲ್ಲೇ ವೈದ್ಯ, ಬಾಣಂತಿ ಸೇರಿ ನಾಲ್ವರ ಸಾವು!

ಶಿವಮೊಗ್ಗ

SUDDIKSHANA KANNADA NEWS/ DAVANAGERE/ DATE-01-07-2025

ಶಿವಮೊಗ್ಗ: ರಾಜ್ಯಾದ್ಯಂತ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿಯೂ ವಿದ್ಯಾರ್ಥಿನಿ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದಳು. ಈಗ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಮದಲ್ಲಿ ನಾಲ್ವರು ಸಾವನ್ನಪ್ಪಿದ್ದು ಆತಂಕ ಮತ್ತಷ್ಟು ಹೆಚ್ಚಿಸಿದೆ.

Read Also This Story: ಮಣಿಪಾಲ ಆರೋಗ್ಯ ಕಾರ್ಡ್‌ 2025 ರ ನೋಂದಣಿ ಪ್ರಾರಂಭ: ರಿಯಾಯಿತಿ ಪ್ರಯೋಜನಗಳ ಸಂಪೂರ್ಣ ಮಾಹಿತಿ

ಶಿವಮೊಗ್ಗ ಜಿಲ್ಲೆಯಲ್ಲಿಯೂ ಹಾರ್ಟ್ ಅಟ್ಯಾಕ್ ಮರಣ ಮೃದಂಗ ಬಾರಿಸಿದ್ದು, ನಾಲ್ವರು ಅಸುನೀಗಿದ್ದಾರೆ. 23 ವರ್ಷದ ವಿವಾಹಿತ ಮಹಿಳೆ, 21 ವರ್ಷದ ಯುವಕ, ವೈದ್ಯ ಹಾಗೂ 52 ವರ್ಷದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಹಾಸನ ಜಿಲ್ಲೆಯ ಯುವಕನ ಜೊತೆ ಹರ್ಷಿತಾ ಮದುವೆಯಾಗಿತ್ತು. ಕಳೆದ ಏಪ್ರಿಲ್ 5ನೇ ತಾರೀಖಿನಂದು ಎರಡನೇ ಹೆರಿಗೆಗೆ ಶಿವಮೊಗ್ಗ ಜಿಲ್ಲೆಯ ಆಯನೂರು ಹೋಬಳಿಯ ಮಂಡಘಟ್ಟ ತಾಲೂಕಿನ ದ್ಯಾವನ ಕೆರೆಯಲ್ಲಿರುವ ತವರು
ಮನೆಗೆ ಬಂದಿದ್ದರು. ಮೇ24 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಮಗುವಿಗೆ ಜನ್ಮ ನೀಡಿ 34 ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಲಾಗುತಿತ್ತು. ಆದ್ರೆ, ಶಿವಮೊಗ್ಗದ ಮೆಗ್ಗಾನ್ ಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಶ್ರೀನಿಧಿ ಎಂಬ 21 ವರ್ಷದ ಯುವಕ ಮೃತಪಟ್ಟಿದ್ದಾರೆ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ದಿಢೀರ್ ಹೃದಯ ಸ್ತಂಭನ ಆಗಿ ಮೃತಪಟ್ಟಿರುವುದಾಗಿ
ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ಮುಂದುವರಿದಿದ್ದು, ಹೃದಯಾಘಾತದಿಂದ ಮತ್ತೊಬ್ಬ ಮಹಿಳೆ ಸಾವು ಕಂಡಿದ್ದಾರೆ. ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆಯು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು, ಈ ಘಟನೆ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಹೃದಯಘಾತದಿಂದ ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಸಂದೀಪ (40) ಅವರು ಇಹಲೋಕ ತ್ಯಜಿಸಿದ್ದಾರೆ. ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವಿವಾಹಿತ ಮಹಿಳೆ ಹರ್ಷಿತಾ ಅವರೂ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ.

Exit mobile version