Site icon Kannada News-suddikshana

ಗಂಟಲು ನೋವಿಗೆ ಈ ಮನೆಮದ್ದು ಒಮ್ಮೆ ಟ್ರೈ ಮಾಡಿ ನೋಡಿ

ಗಂಟಲು ನೋವಿಗೆ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಜೇನುತುಪ್ಪದ ಆಂಟಿಮೈಕ್ರೊಬಿಯಲ್‌ ಗುಣಲಕ್ಷಣಗಳು ಸೋಂಕುಗಳ ವಿರುದ್ಧ ಹೋರಾಡಲು
ಸಹಾಯ ಮಾಡುತ್ತದೆ. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೀನುತುಪ್ಪ ಹಾಕಿ ಕುಡಿಯಬೇಕು. ಶುಂಠಿ ಟೀ ಹಾಗೂ ಪುದೀನಾ ಟೀ ಗಂಟಲು ನೋವಿಗೆ ರಾಮಬಾಣವಾಗಿದೆ. ಬೆಳ್ಳುಳ್ಳಿಯ ಎಸಳನ್ನು ಪುಡಿಮಾಡಿ ಬೆಚ್ಚಗಿನ ನೀರು ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

Exit mobile version