Site icon Kannada News-suddikshana

ಹರಿಹರ (Harihara) ಸೇರಿ ಜಿಲ್ಲೆಯ ವಿವಿಧಡೆ ನೀರೆತ್ತುವ ಮೋಟಾರುಗಳ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

SUDDIKSHANA KANNADA NEWS/ DAVANAGERE/ DATE:18-09-2023

ದಾವಣಗೆರೆ: ರೈತರ ಜಮೀನುಗಳ ನೀರೆತ್ತುವ ಮೋಟಾರ್ ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹರಿಹರ (Harihara) ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 

Yogi Adityanath Warning: ಮಹಿಳೆಯರು, ಯುವತಿಯರಿಗೆ ಕಿರುಕುಳ ಕೊಟ್ಟರೆ ಯಮ ಬರುತ್ತಾನೆ ಹುಷಾರ್: ಆದಿತ್ಯನಾಥ ಯೋಗಿ ಎಚ್ಚರಿಕೆ

ಹರಿಹರ (Harihara) ನಗರದ ಸೈಯದ್ ಖಲಂದರ್ (24), ಸೈಯದ್ ಅಲಿ ಅಲಿಯಾಸ್ ಸಜ್ಜು (22) ಬಂಧಿತ ಆರೋಪಿಗಳು. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಗ್ರಾಮಗಳಲ್ಲಿ ಹಲವು ದಿನಗಳಂದ ರೈತರ ನೀರೆತ್ತುವ ಮೋಟಾರುಗಳ ಕಳ್ಳತನವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ದಾವಣಗೆರೆ ಗ್ರಾಮಾಂತರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ ಅವರ ಮಾರ್ಗದರ್ಶನದಲ್ಲಿ ಹರಿಹರ (Harihara) ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ಹರಿಹರ (Harihara) ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐಗಳಾದ ಅರವಿಂದ ಬಿ.ಎಸ್, ಅಬ್ದುಲ್ ಖಾದರ ಜಿಲಾನಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದೆ.

ಸೈಯದ್ ಖಲಂದರ್, ಸೈಯದ್ ಅಲಿ @ ಸಜ್ಜು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವಾಪ್ತಿಯಲ್ಲಿ ಕದ್ದಿದ್ದ ಮೋಟಾರು ವಶಪಡಿಸಿಕೊಳ್ಳಲಾಗಿದೆ. ಹರಿಹರ (Harihara) ಗ್ರಾಮಾಂತರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ವಿವಿಧ ಕಂಪನಿಗಳಗೆ ಸೇರಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ನೀರೆತ್ತುವ ಮೋಟಾರುಗಳನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಲಾಗಿದೆ.

ಈ ಮೋಟಾರು ಕಳ್ಳರ ಪತ್ತೆ ಕಾರ್ಯದಲ್ಲಿ ಹರಿಹರ (Harihara) ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ, ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಅರವಿಂದ, ಬಿ.ಎಸ್ ಮತ್ತು ಅಬ್ದುಲ್ ಖಾದರ ಜಿಲಾನಿ, ಸಿಬ್ಬಂದಿಯವರಾದ ತಿಪ್ಪೇಸ್ವಾಮಿ, ಮಹಮ್ಮದ್ ಇಲಿಯಾಜ್, ರಮೇಶ್ ಎನ್., ಬಣಕಾರ ಶ್ರೀಧರ, ಅನಿಲ್ ಕುಮಾರ್ ನಾಯ್ಕ್, ಸಂತೋಷ್ ನಾಯ್ಕ, ಮಹೇಂದ್ರ, ಪ್ರಸನ್ನಕಾಂತ, ರಮೇಶ್, ಫೈರೋಜ್, ವೆಂಕಟರಮಣ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

 

Exit mobile version