Site icon Kannada News-suddikshana

ಹರಿಹರ(Harihara)ದಲ್ಲಿ ನಿಲ್ಲದ ಕಳ್ಳತನ, ತುಮಕೂರು ಮೂಲದ ಆರೋಪಿ ಬಂಧಿಸಿ, ಎಷ್ಟು ಮೌಲ್ಯದ ಚಿನ್ನ ವಶ…? ಪೊಲೀಸರು ಕೊಟ್ಟಿರುವ ಸೂಚನೆ ಏನು…?

SUDDIKSHANA KANNADA NEWS/ DAVANAGERE/ DATE:09-10-2023

ದಾವಣಗೆರೆ: ಹರಿಹರ (Harihara) ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ (Harihara) ನಗರದ ಜೆ.ಸಿ.ಬಡಾವಣೆಯಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

Read Also This Story:

Areca nut: ಅಡಿಕೆ ಬೆಳೆಗಾರರಿಗೆ ಮತ್ತೆ ಸಂಕಷ್ಟ… ಅಡಿಕೆ ಧಾರಣೆಯಲ್ಲಿ ಮತ್ತೆ ಇಳಿಕೆ… ಎಷ್ಟಾಗಿದೆ ಗೊತ್ತಾ…?

ತುಮಕೂರು ಜಿಲ್ಲೆಯ ತುರವೇಕೆರೆ ತಾಲೂಕಿನ ವಿನೋಬನಗರ ವಾಸಿ ವೆಂಕಟೇಶ ಅಲಿಯಾಸ್ ತಿಪ್ಪೆ ಬಂಧಿತ ಆರೋಪಿ. ಮೇ 15ರಂದು ಮನೆ ಕಳ್ಳತನ ಪ್ರಕರಣ ಹರಿಹರ (Harihara) ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣದ ಆರೋಪಿತರು ಹಾಗೂ ಸ್ವತ್ತು ಪತ್ತೆಕಾರ್ಯಕ್ಕೆ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಸವರಾಜ ಬಿ. ಎಸ್. ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಹರಿಹರ (Harihara) ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ ದೇವಾನಂದರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.

ವೆಂಕಟೇಶ ಅಲಿಯಾಸ್ ತಿಪ್ಪೆ ಎಂಬಾತನನ್ನು ಹರಿಹರ (Harihara) ನಗರ ಪೊಲೀಸರು ಬಂಧಿಸಿದ್ದು, 4,50,000 ರೂಪಾಯಿ ಮೌಲ್ಯದ 80 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿ. ದೇವಾನಂದ, ಪಿಎಸ್‌ಐಗಳಾದ ಪ್ರವೀಣ್ ಕುಮಾರ, ಶ್ರೀಪತಿ ಗಿನ್ನಿ, ಮಂಜುನಾಥ ಕಲ್ಲೇದೆವರು (ಬೆರಳುಮುದ್ರೆ ಘಟಕ) ಹಾಗೂ ಸಿಬ್ಬಂದಿಯಾದ ಮಂಜುನಾಥ ಬಿ.ವಿ, ದೇವರಾಜ್ ಸೂರ್ವೆ, ಮಂಜುನಾಥ ಕ್ಯಾತಮ್ಮನವರ, ಹನುಮಂತ ಗೋಪನಾಳ, ಹೇಮಾನಾಯ್ಕ್, ರುದ್ರಸ್ವಾಮಿ, ಸಿದ್ದರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಖ್ತರ್, ವೀರೇಶ, ಅಡಿವೆಪ್ಪನವರ್ ಮಾರುತಿ ಇವರುಗಳನ್ನೊಳಗೊಂಡ ತಂಡವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ ಅವರು ಪ್ರಶಂಸಿಸಿದ್ದಾರೆ.

ವಿಶೇಷ ಸೂಚನೆ: ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗುವಾಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹೋಗಬಾರದು. ಬೀಗ ಹಾಕಿಕೊಂಡು ಹೋಗುವ ಬಗ್ಗೆ ಮುಂಚಿತವಾಗಿ
ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮನೆಗಳ ಕಡೆಗೆ ಹೆಚ್ಚಿನ ಗಸ್ತು ಕರ್ತವ್ಯ ನಿರ್ವಹಿಸಲಾಗುವುದು ಎಂದು ಹರಿಹರ (Harihara) ಪೊಲೀಸರು ತಿಳಿಸಿದ್ದಾರೆ.

Exit mobile version