SUDDIKSHANA KANNADA NEWS/ DAVANAGERE/ DATE:08-04-2023
ದಾವಣಗೆರೆ (DAVANAGERE): ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಹೈವೋಲ್ಟೇಜ್ (HIGHVOLTAGE) ಕ್ಷೇತ್ರವೆಂದರೆ ಹರಿಹರ (HARIHARA). ಯಾಕೆಂದರೆ ಈ ಕ್ಷೇತ್ರವೂ ಸಾಕಷ್ಟು ವಿಚಾರಗಳಿಂದ ಕುತೂಹಲ ಕೆರಳಿಸಿದೆ. ಇಲ್ಲಿ ಯಾವ ಪಕ್ಷವು ಎರಡನೇ ಬಾರಿ ಗೆದ್ದ ಇತಿಹಾಸ (HISTORY) ಕಡಿಮೆ. ಮಾತ್ರವಲ್ಲ, ಈ ಕ್ಷೇತ್ರದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ (CONGRESS), ಬಿಜೆಪಿ (BJP)ಮತ್ತು ಜೆಡಿಎಸ್ (JDS) ನಡುವೆ ನೇರ ಹಣಾಹಣಿ ಇದೆ.
ಕಾಂಗ್ರೆಸ್ (CONGRESS) ನ ರಾಮಪ್ಪ (RAMAPPA( 2018ರ ಚುನಾವಣೆಯಲ್ಲಿ ಶಾಸಕರಾಗಿದ್ದರು. ಅದೇ ರೀತಿಯಲ್ಲಿ ಬಿಜೆಪಿ(BJP)ಯ ಬಿ. ಪಿ. ಹರೀಶ್ ಅವರೂ ಎಂಎಲ್ಎ ಆಗಿದ್ದರು. ಅದೇ ರೀತಿಯಲ್ಲಿ ಜೆಡಿಎಸ್ ನ ಹೆಚ್. ಎಸ್. ಶಿವಶಂಕರ್ ಅವರೂ ಸಹ ಶಾಸಕರಾಗಿ ಚುನಾಯಿತರಾಗಿದ್ದರು. ಹಾಗಾಗಿ, ಈ ಕ್ಷೇತ್ರದಲ್ಲಿ ಮತದಾರ ಒಮ್ಮೆ ಗೆಲ್ಲಿಸಿದ ಪಕ್ಷವನ್ನು ಮತ್ತೆ ಗೆಲ್ಲಿಸುವುದು ಕಡಿಮೆ. ಮತದಾರರ ಮನದೊಳಗೆ ಈ ಬಾರಿ ಯಾರು ಅಡಗಿದ್ದಾರೆ ಎಂಬ ಕುತೂಹಲದ ನಡುವೆ
ಮತ್ತೊಂದು ಸ್ಪೆಷಾಲಿಟಿ ಈ ಕ್ಷೇತ್ರಕ್ಕಿದೆ.
ಹೌದು. ಹರಿ-ಹರ ನೆಲೆ ನಿಂತಿರುವ ಕ್ಷೇತ್ರವೇ ಹರಿಹರ (HARIHARA). ಚುನಾವಣೆ ಅಂದರೆ ಸಾಕು ಮತದಾರರ ಮನ ಗೆಲ್ಲಲು ಪಕ್ಷಗಳು, ಅಭ್ಯರ್ಥಿಗಳು ಆಸೆ, ಆಮೀಷ ಒಡ್ಡುವುದು ಸಹಜ. ಕುಕ್ಕರ್, ಸೀರೆ, ಎಲೆಕ್ಟ್ರಾನಿಕ್ ವಸ್ತುಗಳು, ಹಣ ಸೇರಿದಂತೆ
ಇತರೆ ರೀತಿಯಲ್ಲಿ ಆಮೀಷ ಒಡ್ಡಲಾಗುತ್ತದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18 ಕ್ಕೂ ಹೆಚ್ಚು ಹಳ್ಳಿಗಳ ಜನರು ದೇಣಿಗೆ ಮೂಲಕ ಹಣ ಒಟ್ಟುಗೂಡಿಸಿ ಅಭ್ಯರ್ಥಿಗೆ ನೀಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು
ಬಂದಿದೆ.
ಹೆಚ್. ಶಿವಪ್ಪರಿಂದ ಆರಂಭ:
ಜನತಾ ಪರಿವಾರದ ಹಿರಿಯ ನಾಯಕ ಹೆಚ್. ಶಿವಪ್ಪರು ಹರಿಹರ (HARIHARA) ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎರಡು ಬಾರಿ ಶಾಸಕರಾಗಿದ್ದರು. ಆಗಿನ ಚುನಾವಣಾ ಸಂದರ್ಭದಲ್ಲಿ ಜನರೇ ದೇಣಿಗೆ ಮೂಲಕ ಹಣ ಸಂಗ್ರಹಿಸಿ ಅಭ್ಯರ್ಥಿ ನೀಡುತ್ತಿದ್ದರು.
ಗ್ರಾಮಸ್ಥರು ನೀಡಿದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಿ ಜಯಗಳಿಸಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೆಚ್. ಎಸ್. ಶಿವಶಂಕರ್ ಅವರ ಪರ ಗ್ರಾಮಸ್ಥರು ಹಣ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.
ಜೆ. ಹೆಚ್. ಪಟೇಲ್ (J. H. PATEL) ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಶಿವಪ್ಪ ಅವರು 1994ರ ಚುನಾವಣೆಯಲ್ಲಿ ಕ್ಷೇತ್ರದ ಜನರಿಂದ ಧನ ಸಹಾಯ ಪಡೆದಿದದ್ರು. 2013, 2018ರಲ್ಲಿ ಕಣಕ್ಕಿಳಿದಿದ್ದ ಶಿವಶಂಕರ್ ಅವರಿಗೆ ಜನರು ನೆರವು ಸಮಾರೋಪಾದಿಯಲ್ಲಿ ಹರಿದು ಬಂದಿತ್ತು.
ಯಾವ್ಯಾವ ಗ್ರಾಮಗಳು:
ಹರಿಹರ ತಾಲೂಕಿನ ಹೊಳೆ ಸಿರಿಗೆರೆ, ಬೆಳ್ಳೂಡಿ, ಉಕ್ಕಡಗಾತ್ರಿ, ಕಮಲಾಪುರ, ದೂಳೆಹೊಳೆ, ನಂದಿಗುಡಿ, ಭಾನುವಳ್ಳಿ, ನಂದಿಗಾವಿ, ಹೊಸಳ್ಳಿ, ಹಿರೇ ಹೊಸಳ್ಳಿ, ಸಾಲಕಟ್ಟೆ, ಮಿಟ್ಲಕಟ್ಟೆ, ಬನ್ನಿಕೋಡು, ಸಂಕ್ಲೀಪುರ, ವಾಸನ, ಕೊಕ್ಕನೂರು ಸೇರಿದಂತೆ ಹದಿನೆಂಟು ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಣೆಯಿಂದಲೇ ದೇಣಿಗೆ ಸಂಗ್ರಹಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳುವವರಿಗೆ ಕೊಡುತ್ತಾರೆ.
ಚುನಾವಣೆಯಲ್ಲಿ ಪ್ರಚಾರಕ್ಕೆ ಬರುತ್ತಾರೆ. ಅವರಿಗೂ ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮತ ಎಣಿಕೆ, ಮತಗಟ್ಟೆ ಏಜೆಂಟರಿಗೆ ಖರ್ಚು ಮಾಡಲು ಹಣ ಬೇಕು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಶಿವಪ್ಪರ ಕುಟುಂಬಕ್ಕೆ
ನೆರವು ಮೊದಲಿನಿಂದ ನೀಡಿಕೊಂಡು ಬರುತ್ತಿದ್ದೇವೆ. ಈ ಮೂಲಕ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಅವರ ಕುಟುಂಬದ ಮೇಲಿನ ಅಭಿಮಾನದಿಂದ ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ 18 ಗ್ರಾಮಗಳ
ಪ್ರಮುಖರು.
ಯಾರ ಮೇಲೆ ಒತ್ತಡ ಹೇರಲ್ಲ:
ಯಾರಿಗೂ ಹಣ ನೀಡಿ ಎಂದು ಒತ್ತಡ ಹೇರುವುದಿಲ್ಲ. ಕೆಳ, ಮಧ್ಯಮ ವರ್ಗದವರು ಸೇರಿ ಚುನಾವಣೆಗೆ ಮುನ್ನ ಸಭೆ ನಡೆಸುತ್ತಾರೆ. ಶಿವಶಂಕರ್ ಅವರ ಚುನಾವಣಾ ಖರ್ಚಿಗಾಗಿ ದೇಣಿಗೆ ಸಂಗ್ರಹ ಮಾಡುವ ಸಂಪ್ರದಾಯದ ಈ ಬಾರಿಯೂ
ಮುಂದುವರಿದಿದೆ. ಅವರ ಶಕ್ತಿಗೆ ಅನುಸಾರ ಹಣ ನೀಡಲಾಗುತ್ತದೆ.
ಶಿವಶಂಕರ್ ಏನಂತಾರೆ..?
ಚುನಾವಣೆ ಅಂದ ಮೇಲೆ ದುಡ್ಡು ಕೊಟ್ಟು ಹಣ ಸೇರಿಸುವುದನ್ನು ನೋಡಿದ್ದೇವೆ. ಈಗ ಎಲ್ಲೆಡೆ ಹಣ ಕೊಟ್ಟರೆ ಮಾತ್ರ ಜನರು ಬರುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದ್ರೆ, ಜನರೇ ಅಭಿಮಾನದಿಂದ ಧನ ಸಹಾಯ ಮಾಡಲು ಬರುತ್ತಾರೆ. ಇದು
ನಿಜಕ್ಕೂ ಖುಷಿಯ ವಿಚಾರ. ತಂದೆ ಮೇಲಿನ ಅಭಿಮಾನ ಒಂಚೂರು ಕ್ಷೇತ್ರದಲ್ಲಿ ಕಡಿಮೆಯಾಗಿಲ್ಲ. ಮೂರು ಬಾರಿ ಕಣಕ್ಕಿಳಿದಾಗಲೂ ಜನರು ನೆರವು ನೀಡಿದ್ದಾರೆ. ಇದನ್ನು ಜೀವನದಲ್ಲಿ ಮರೆಯುವುದಿಲ್ಲ ಎನ್ನುತ್ತಾರೆ ಹೆಚ್. ಎಸ್. ಶಿವಶಂಕರ್.