Site icon Kannada News-suddikshana

ಹರಿಹರ(Harihara)ದಲ್ಲಿ ಮೊಬೈಲ್ ಕದ್ದು ಪರಾರಿಯಾಗಿದ್ದ ಇಬ್ಬರ ಸೆರೆ: ಮೊಬೈಲ್, ಬೈಕ್ ವಶ

SUDDIKSHANA KANNADA NEWS/ DAVANAGERE/ DATE:03-10-2023

ದಾವಣಗೆರೆ: ಹರಿಹರ (Harihara) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ (Harihara) ಬೈಪಾಸ್ ಕೃಷ್ಣಪ್ಪ ಸ್ಮಾರಕದ ಬಳಿ ಮೊಬೈಲ್ ಕಿತ್ತುಕೊಂಡು ಪರಾರಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಓದಿ: 

Davanagere: ನಾನೇನೂ ಮಂತ್ರಿಗಿರಿ ಕೇಳಿಲ್ಲ,ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ: ಶಾಮನೂರು ಶಿವಶಂಕರಪ್ಪ

ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ.ಎಸ್. ಹರಿಹರ (Harihara) ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ಅವರ ಮಾರ್ಗದರ್ಶನದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐಗಳಾದ ಬಿ. ಎಸ್. ಅರವಿಂದ ಮತ್ತು ಅಬ್ದುಲ್ ಖಾದರ್ ಜಿಲಾನಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಹರಿಹರ ನಗರದ ಪ್ರವೀಣ್ (29), ಹಾಗೂ ಬನ್ನಿಕೋಡು ಗ್ರಾಮದ ಅನಿಲ್ ಕುಮಾರ್ (28) ನನ್ನು ಸೆರೆ ಹಿಡಿದಿದೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಹಾಗೂ ಕಿತ್ತುಕೊಂಡು ಹೋದ ಒಂದು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ಹರಿಹರ (Harihara) ಗ್ರಾಮಾಂತರ ಠಾಣೆಯ ಪಿಎಸ್‌ಐ ಅರವಿಂದ ಮತ್ತು ಅಬ್ದುಲ್ ಖಾದರ ಜಿಲಾನಿ, ಎಎಸ್ ಐ ರಾಮಚಂದ್ರಪ್ಪ, ಸಿಬ್ಬಂದಿಯಾದ ನಾಗರಾಜ್, ಎನ್. ರಮೇಶ ಬಣಕಾರ, ಶ್ರೀಧರ, ಅನಿಲ್ ನಾಯ್ಕ, ಶೇಖರಪ್ಪ, ಹನುಮಂತ, ಸುಶೀಲ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಅವರು ಅಭಿನಂದಿಸಿದ್ದಾರೆ.

Exit mobile version