Site icon Kannada News-suddikshana

ಬಿಜೆಪಿ ಅಧಿಕಾರ ಹಿಡಿಬೇಕು: ಬೆರಳು ಕತ್ತರಿಕೊಂಡು ಹರಕೆ ತೀರಿಸಿದ ಅಭಿಮಾನಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲಿ ಎಂದು ವ್ಯಕ್ತಿಯೋರ್ವ ತನ್ನ ಬೆರಳನ್ನೇ ಕತ್ತರಿಸಿಕೊಂಡಿರುವ ಘಟನೆ ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ನಡೆದಿದೆ.
ದುರ್ಗೇಶ್‌ ಪಾಂಡೆ ಬಿಜೆಪಿ ಬೆಂಬಲಿತನಾಗಿದ್ದು, ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡು, ಎಲ್ಲಿ ಎನ್‌’ಡಿಎಗೆ ಈ ಬಾರಿ
ಅಧಿಕಾರ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆಒಳಗಾಗಿ, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Exit mobile version