Site icon Kannada News-suddikshana

ಎಚ್‌ಎಎಲ್‌ನಲ್ಲಿ ಉದ್ಯೋಗ; ನಾಳೆಯೇ ಕೊನೆಯ ದಿನಾಂಕ

ಬೆಂಗಳೂರು: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಬೆಂಗಳೂರು ವರದಾನ ಎನ್ನಬಹುದು. ಇಲ್ಲಿ ಹೇಗೆ ಆದರೂ ಒಂದು ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬ ಆಸೆ ಕಣ್ಣಿನಿಂದ ರಾಜ್ಯದ ಎಲ್ಲ ಭಾಗಗಳ ಜನ ಧಾವಿಸಿ ಬರುತ್ತಾರೆ. ಇದೀಗ ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬಂಪರ್ ಆಫರ್ ನೀಡಿದೆ.

ಎಚ್‌ಎಎಲ್‌ನಲ್ಲಿ ಅನೇಕ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಅದನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನ್ 22, 2024ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಶೈಕ್ಷಣಿಕ ಅರ್ಹತೆ ಏನು?

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಡ್ಡಾಯವಾಗಿ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ

ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದ ತರಬೇತಿ ಹಂತದಲ್ಲಿ ತಿಂಗಳಿಗೆ 7000-7700 ರೂ. ವೇತನ ನೀಡಲಾಗುತ್ತದೆ. ಜತೆಗೆ ಇತರ ಭತ್ಯೆ ಇರುತ್ತದೆ.
ಉದ್ಯೋಗ ಸ್ಥಳ

ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕಾಗುತ್ತದೆ. ಹಾಗಾಗಿ ಬೆಂಗಳೂರಿನಲ್ಲಿ ಕೆಲಸ ಹುಡುಕುವವರಿಗೆ ಇದು ಅನುಕೂಲವಾಗಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಪ್ರತಿಯೊಂದು ಹುದ್ದೆಗೂ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕ: ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್), ಸುರಂಜನದಾಸ್ ರಸ್ತೆ (ಹಳೆಯ ವಿಮಾನ ನಿಲ್ದಾಣದ ಹತ್ತಿರ), ಬೆಂಗಳೂರು-560017
ದಿನಾಂಕ ಜೂನ್ 22, 2024ರಂದು ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು.

Exit mobile version