Site icon Kannada News-suddikshana

ಜಾಮೀನಿನಿಂದ ಬಿಡುಗಡೆಯಾದ ಬಳಿಕ ಹಾಸನಕ್ಕೆ ಭೇಟಿ ನೀಡಿದ ಹೆಚ್‌ಡಿ ರೇವಣ್ಣ

ಹಾಸನ: ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಶಾಸಕ ಎಚ್.ಡಿ. ರೇವಣ್ಣ ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಹಾರ, ತುರಾಯಿ ಹಾಕಬೇಡಿ , ಪಟಾಕಿ ಸಿಡಿಸಬೇ ಡಿ ಎಂದು ಜೆಡಿಎಸ್ ಶಾಸಕರು, ಕಾರ್ಯಕರ್ತರಿಗೆ ರೇವಣ್ಣ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯ ನನ್ನೆಲ್ಲಾ ಅಭಿಮಾನಿಗಳೇ, ನನ್ನ ಪಕ್ಷದ ಶಾಸಕರೇ , ಚುನಾಯಿತ ಪ್ರತಿನಿಧಿಗಳೇ ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ನಾನು ಜಾಮೀನು ಪಡೆದು ಬಿಡುಗಡೆ ಆಗಿದ್ದೇನೆ ಎಂದು ಹೇಳಿದರು.

ನಾನು ಘನ ನ್ಯಾಯಾಲಯದ ತೀರ್ಪಿನ ಆದೇಶಕ್ಕೆ ಗೌರವ ಕೊಡುತ್ತೇನೆ. ಕಡೆವರೆಗೂ ಅದನ್ನು ಪಾಲಿಸುತ್ತೇನೆ. ಇದಕ್ಕೆಲ್ಲಾ ನಿಮ್ಮ ಪ್ರೀತಿ, ಪ್ರಾರ್ಥನೆಯೇ ಕಾರಣ. ಜೊತೆಗೆ ತಂದೆ ತಾಯಿ, ದೇವರು ಕಾರಣ ಎಂದು ತಿಳಿಸಿದ್ದಾರೆ.ನಿಮ್ಮ ಈ ಋಣವ ನಾನೆಂದೂ ಮರೆಯಲಾರೆ ಎಂದು ಹೇಳಿದ್ದಾರೆ.

 

Exit mobile version