Site icon Kannada News-suddikshana

92ನೇ ಜನ್ಮದಿನ ಆಚರಿಸಿಕೊಳ್ಳದಿರಲು ಎಚ್‌.ಡಿ. ದೇವೇಗೌಡರ ನಿರ್ಧಾರ!

ಬೆಂಗಳೂರು: ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, ಇದೇ ತಿಂಗಳ 18ರಂದು ನಾನು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಕಾರಣಾಂತರಗಳಿಂದ ಈ ಬಾರಿ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ.ಹೀಗಾಗಿ ಅಭಿಮಾನಿಗಳು ಹಾಗೂ ಜಾತ್ಯತೀತ ಜನತಾದಳದ ಕಾರ್ಯಕರ್ತರು ಇದ್ದಲ್ಲಿಂದಲೇ ಹಾರೈಸಬೇಕಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ದೇವೇಗೌಡರು ಕೋರಿದ್ದಾರೆ. ಇನ್ನು ಪ್ರಜ್ವಲ್‌ ಪ್ರಕರಣ, ಎಚ್‌.ಡಿ. ರೇವಣ್ಣರ ಬಂಧನ ಪ್ರಕರಣಗಳಿಂದ ಜರ್ಝರಿತರಾಗಿರುವ ದೇವೇಗೌಡರು, ಘಟನೆ ಬೆಳಕಿಗೆ ಬಂದಾಗಿನಿಂದಲೂ ಮನೆ ಬಿಟ್ಟು ಹೊರಗೆ ಬಂದಿಲ್ಲ. ಮನೆಗೆ ಬಂದವರ ಬಳಿ ನೋವು ತೋಡಿಕೊಳ್ಳುವುದು ಬಿಟ್ಟರೆ ಬೇರೇನೂ ಮಾತನಾಡುತ್ತಿಲ್ಲ. ಅಲ್ಲದೆ, ಸಾಧಾರಣವಾಗಿ ನಿತ್ಯ ಕ್ಷೌರ ಮಾಡಿ ಕಳೆಗಟ್ಟಿರುತ್ತಿದ್ದ ದೇವೇಗೌಡರ ಮುಖದಲ್ಲಿ ಈಗ ಗಡ್ಡ ಬೆಳೆದಿದೆ. ದೇವೇಗೌಡರು ಗಡ್ಡ ಬಿಟ್ಟಿದ್ದನ್ನು ಇತ್ತೀಚೆಗೆ ನೋಡಿಯೇ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

Exit mobile version