Site icon Kannada News-suddikshana

ಮುಂದಿನ ತಿಂಗಳಿಂದ ತೃತೀಯ ಲಿಂಗಿಗಳಿಗೂ ಸಿಗಲಿದೆ ಗೃಹಲಕ್ಷ್ಮಿ ಯೋಜನೆಯ ಹಣ

ಬೆಂಗಳೂರು: ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ತೃತೀಯ ಲಿಂಗಿಗಳಿಗೂ ಸಿಗಲಿದೆ.‌ ಜಿಲ್ಲಾಧಿಕಾರಿಗಳು ವಿತರಣೆ ಮಾಡಿರುವ ಐಡಿ ಕಾರ್ಡ್ ನೀಡಿ ಗೃಹಲಕ್ಷ್ಮಿ ಹಣಕ್ಕೆ ಅರ್ಜಿ ಸಲ್ಲಿಸಬಹುದು.

ತೃತೀಯ ಲಿಂಗಿಗಳಿಗೆ ಹಣ ನೀಡಲು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆದೇಶವಾಗಿದೆ. ಈ ತಿಂಗಳ ಕೊನೆಯ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದರೆ ಮುಂದಿನ ತಿಂಗಳೇ ತೃತೀಯ ಲಿಂಗಿಗಳ ಅಕೌಂಟ್​​​ಗೆ ಎರಡು ಸಾವಿರ ರೂಪಾಯಿ ಹಣ ಬರಲಿದೆ. ರಾಜ್ಯದಲ್ಲಿ 40,000 ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್​​ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

Exit mobile version