Site icon Kannada News-suddikshana

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಜಮಾ; ಜಮಾ ಆಗದೇ ಇರುವವರು ತಕ್ಷಣ ಈ ಕೆಲಸ ಮಾಡಿ

(gruhalakshmi-Money:) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣ ಜೂನ್ ಮತ್ತು ಜುಲೈ ತಿಂಗಳ ಹಣ ಜಮಾ ಆಗದೇ ಬಾಕಿ ಉಳಿದಿತ್ತು. ಆದರೆ, ಎರಡು ತಿಂಗಳ ಹಣ ನಿನ್ನೆಯಿಂದ ಮಹಿಳೆಯರ ಖಾತೆಗೆ ಜಮಾ ಆಗುತ್ತಿದ್ದು, ಇನ್ನು ಕೆಲವರಿಗೆ ಜಮಾ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಜಮಾ ಆಗದೇ ಇರುವ ಮಹಿಳೆಯರು ತಕ್ಷಣದಿಂದ ಈ ಕೆಲಸ ಮಾಡಿದರೇ ನಿಮಗೂ ಕೂಡ ಎರಡು ತಿಂಗಳ ಹಣ ಜಮಾ ಆಗಲಿದೆ. ಹಾಗಾದರೆ ಯಾವ ಕೆಲಸ, ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನಗದು ಜಮೆಯಾಗದೇ ಐಟಿ ಮತ್ತು ಜಿಎಸ್‌ಟಿ ಪಾವತಿದಾರರೆಂದು ಅರ್ಜಿ ಸ್ಥಿತಿಯಲ್ಲಿ ಕಂಡು ಬಂದಿದೆ. ಇದರಿಂದಾಗಿ ಕೆಲವು ಮಹಿಳೆಯರಿಗೆ ಹಣ ಜಮಾ ಆಗಿಲ್ಲ. ಹೀಗಾಗಿ ಅಂತಹ ತಮ್ಮ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳಾದ ಪಡಿತರ ಚೀಟಿ ಸಂಖ್ಯೆ (ರೇಷನ್ ಕಾರ್ಡ್ ನಂಬರ್), ಪಾನ್ ನಂಬರ್, ಆದಾಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ನೋಟರಿಯಿಂದ ಪಡೆದ ಪತ್ರ, ಆಡಿಟ್ ಅವರಿಂದ ಪಡೆದ ಪತ್ರ, ಅರ್ಜಿದಾರರ ಮನವಿ ಪತ್ರ ನೀಡಲು ಕ್ರಮವಹಿಸಿದ್ದು, ಈ ದಾಖಲೆಗಳು ನೀಡಿದ ಬಳಿಕ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ.

Exit mobile version