Site icon Kannada News-suddikshana

‘ಗೃಹಲಕ್ಷ್ಮಿ’ 11 ನೇ ಕಂತಿನ ಹಣ ಬಿಡುಗಡೆ

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ 10 ನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ. 11 ನೇ ಕಂತಿನ ಹಣ ಯಾವಾಗ ಎಂದು ಕಾದು ಕುಳಿತಿರುವ ಯಜಮಾನಿಯರಿಗೆ ಇಲ್ಲಿದೆ ಗುಡ್ ನ್ಯೂಸ್.

ಹೌದು. ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ 2 ಸಾವಿರ ಹಣ ಕೆಲವರಿಗೆ ಬಂದಿದೆ ಎನ್ನಲಾಗುತ್ತಿದೆ.

ಮುಂದಿನ 2-3 ದಿನಗಳಲ್ಲಿ ಎಲ್ಲರಿಗೂ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲು ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಸನ, ದಕ್ಷಿಣ ಕನ್ನಡ , ಉಡುಪಿ. ಚಿಕ್ಕಮಗಳೂರು. ಚಾಮರಾಜನಗರ ಜಿಲ್ಲೆಗಳಿಗೆ 11 ನೇ ಕಂತಿನ 2 ಸಾವಿರ ಹಣ ಮೊದಲು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮನೆಯ ಯಜಮಾನಿಯರಿಗೆ ಮಾತ್ರ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂಪಾಯಿ ಹಣ ಇನ್ಮುಂದೆ ತೃತೀಯ ಲಿಂಗಿಗಳಿಗೂ ಸಿಗಲಿದೆ.ಜುಲೈ ತಿಂಗಳಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಗೃಹಲಕ್ಷ್ಮಿ ಹಣಕ್ಕಾಗಿ ಈ ತಿಂಗಳ ಅಂತ್ಯದೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಜಿಲ್ಲಾಧಿಕಾರಿಗಳು ವಿತರಣೆ ಮಾಡಿದ ಐಡಿ ಕಾರ್ಡ್ ನೀಡಿ ಗೃಹಲಕ್ಷ್ಮಿ ಹಣಕ್ಕೆ ಅರ್ಜಿ ಸಲ್ಲಿಸಬಹುದು.

ಹಣ ಬಾರದೇ ಇದ್ರೆ ಏನು ಮಾಡಬೇಕು..?

1) ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇಕೆವೈಸಿ ಮಾಡಿಸಬೇಕು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕಾದ್ರೆ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರೂ ಕೂಡ ಈಕೆವೈಸಿ ಮಾಡಿಸಬೇಕು.

2)ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದರೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬರಲ್ಲ. ಹೀಗಾಗಿ ಕೂಡಲೇ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

3) ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡು ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ ಗಳಲ್ಲಿ ಪರಿಹರಿಸಿಕೊಳ್ಳಬೇಕು.

4) ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ಗೆ ಎಸ್‌ಎಂಎಸ್ ಬರುತ್ತದೆ. ಹಲವು ಬಾರಿ ಎಸ್‌ಎಂಎಸ್ ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್ ನಲ್ಲಿ ಹೋಗಿ ಪಾಸ್ ಬುಕ್ ಚೆಕ್ ಮಾಡಿಸಬೇಕು.

 

 

Exit mobile version