Site icon Kannada News-suddikshana

Gruhalakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ: 2 ಸಾವಿರ ರೂಪಾಯಿ ನಿಮ್ಗೆ ಬಂತಾ ಇಲ್ಲವೋ.. ಈ ಲಿಂಕ್ ಕ್ಲಿಕ್ ಮಾಡಿ ತಿಳಿದುಕೊಳ್ಳಿ…!

SUDDIKSHANA KANNADA NEWS/ DAVANAGERE/ DATE:26-08-2023

ದಾವಣಗೆರೆ: ಗೃಹ ಲಕ್ಷ್ಮೀ ಯೋಜನೆ(Gruhalakshmi)ಗೆ ಆಗಸ್ಟ್ 30ರಂದು ಅಧಿಕೃತವಾಗಿ ಚಾಲನೆ ನೀಡುತ್ತಿದೆ. ಇದಕ್ಕಾಗಿ ರಾಜ್ಯಾದ್ಯಂತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಗಸ್ಟ್ 30 ರಂದು ಮೈಸೂರಿನಲ್ಲಿ ಚಾಲನೆ ಸಿಗಲಿರುವ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಕಾರ್ಯಕ್ರಮದ ಸಂಬಂಧ ಸಿದ್ಧತೆ ಜೋರಾಗಿದೆ.

ಆಗಸ್ಟ್ 30 ರಂದು ಮೈಸೂರಿನಲ್ಲಿ ಚಾಲನೆ ಸಿಗಲಿರುವ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಕಾರ್ಯಕ್ರಮದ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಆದ್ರೆ, ಈಗಾಗಲೇ ಕೋಟ್ಯಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಹಣ ಯಾವಾಗ ಅಕೌಂಟ್ ಗೆ ಬರುತ್ತೆ ಎಂದು ಕಾಯುತ್ತಿದ್ದಾರೆ. ಈಗ ಆ ದಿನ ಹತ್ತಿರವಾಗುತ್ತಿದೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಗೃಹ ಲಕ್ಷ್ಮೀ” ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಅದರ ನೇರ ಪ್ರಸಾರದ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: 

M. P. Renukacharya: ಕಾಂಗ್ರೆಸ್ ಪಕ್ಷ ಸೇರಲ್ಲ, ಅವ್ರೇನೂ ಕರೆದಿಲ್ಲ: ನಾನೇನೂ ಹೋಗ್ತೀನಿ ಎಂದಿಲ್ಲ ಎಂದ ಎಂ. ಪಿ. ರೇಣುಕಾಚಾರ್ಯ

ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಸರ್ಕಾರದ ಪ್ರಮುಖ ಯೋಜನೆ ಇದಾಗಿದೆ. ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಬೇಕಾದ ಕಾರಣ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಸ್ಥಳಗಳಲ್ಲಿ ಎಲ್.ಇ.ಡಿ ವಾಲ್, ಸ್ಕ್ರೀನ್ ವ್ಯವಸ್ಥೆ, ಧ್ವನಿವರ್ಧಕ ಅಳವಡಿಸಬೇಕು. ಇದರ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ತಹಶೀಲ್ದಾರ, ತಾಲೂಕ ಪಂಚಾಯತ್, ಸಿ.ಡಿ.ಪಿ.ಒ ಅವರ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ನೋಡಲ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಬೇಕು.

ಜಿಲ್ಲೆಯ ನೊಂದಾಯಿತ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ 2,000 ರೂ. ಹಣ ವರ್ಗಾವಣೆ ಮಾಡಲು ಸಹ ಅನುದಾನ ಜಿಲ್ಲೆಗೆ ಬಿಡುಗಡೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಮುಂದಾಳತ್ವ ವಹಿಸಬೇಕು. ಇತರೆ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಪರಸ್ಪರ ಸಮನ್ವಯತೆಯಿಂದ ಒಟ್ಟಾರೆ ಎಲ್ಲಿಯೂ ಲೋಪವಾಗದಂತೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆಯಾಗಬೇಕು ಎಂದು ಸೂಚಿಸಲಾಗಿದೆ.

ಗೃಹ ಲಕ್ಷ್ಮಿ (Gruhalakshmi) ಯೋಜನೆ:

ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆಯು ಇತ್ತೀಚೆಗೆ ರಾಜ್ಯ ಸರ್ಕಾರವು ಪ್ರಾರಂಭಿಸಿದೆ, ಇದು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಉಪಕ್ರಮದ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥ ಮಹಿಳೆಯರಿಗೆ ಮಾಸಿಕ ರೂ. 2,000, ರಾಜ್ಯದಲ್ಲಿ ಸುಮಾರು 1.28 ಕೋಟಿ ಮಹಿಳೆಯರಿಗೆ ಲಾಭ. ಗೃಹಿಣಿಯರು, ಭೂರಹಿತ ಮಹಿಳೆಯರು ಮತ್ತು ಕೃಷಿ ಕಾರ್ಮಿಕರ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ, ಯೋಜನೆಯ ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ. ಆಗಸ್ಟ್ 16 ರಿಂದ 2,000 ಪಾವತಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲು ಅನುಕೂಲವಾಗುತ್ತದೆ.

ಹೇಗೆ ಚೆಕ್ ಮಾಡಿಕೊಳ್ಳುವುದು…?

ಗೃಹ ಲಕ್ಷೀ ಯೋಜನೆಯಡಿ 2000 ರೂಪಾಯಿಗೆ ಅರ್ಜಿ ಹಾಕಿದವರು ಯಾರಿಗೆ ದುಡ್ಡು ಬರುತ್ತೆ ಅನ್ನೋ ಲಿಸ್ಟ್ ಬಂದಿದೆ.. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ನಿಮ್ಮಊರು select ಮಾಡಿ ನೋಡಿಕೊಳ್ಳಿ..

https://ahara.kar.nic.in/WebForms/Show_Village_List.aspx

ಈ ಲಿಂಕ್ ಕಾಪಿ ಮಾಡಿಕೊಂಡು ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಕ್ಲಿಕ್ ಮಾಡಿ. ಆಗ ನಿಮ್ಮ ಜಿಲ್ಲೆ ಬರುತ್ತದೆ. ಆ ಬಳಿಕ ನಿಮ್ಮ ತಾಲೂಕಿನ ಹೆಸರು ಪ್ರೆಸ್ ಮಾಡಿ. ಗ್ರಾಮ ಪಂಚಾಯಿತಿ ಹೆಸರು ಹೆಸರು ತುಂಬಿ. ಆ ಬಳಿಕ ಗ್ರಾಮದ ಹೆಸರು ಪ್ರೆಸ್ ಮಾಡಿದರೆ ಲೀಸ್ಟ್ ಬರುತ್ತದೆ. ನಿಮ್ಮ ಹೆಸರಿದ್ದರೆ 2 ಸಾವಿರ ರೂಪಾಯಿ ನಿಮ್ಮ ಅಕೌಂಟ್ ಗೆ ಕ್ರೆಡಿಟ್ ಆಗಲಿದೆ.

Exit mobile version