SUDDIKSHANA KANNADA NEWS/ DAVANAGERE/ DATE:15-09-2023
ದಾವಣಗೆರೆ (Davanagere): ನಗರದ ಮಹಾನಗರ ಪಾಲಿಕೆಯ ಕೊಠಡಿ 1ರಲ್ಲಿ ವಿಧಾನಪರಿಷತ್ ಸದಸ್ಯ ಕೆ. ಎಸ್. ನವೀನ್ ಕುಮಾರ್ ಅವರ ಜನಸಂಪರ್ಕ ಕಚೇರಿ ಉದ್ಘಾಟನೆ ನೆರವೇರಿತು.
ಈ ಸುದ್ದಿಯನ್ನೂ ಓದಿ:
M. P. Renukacharya: ಎಂ. ಪಿ. ರೇಣುಕಾಚಾರ್ಯ ಸರಿ ಹೋದರೆ ಸರಿ, ಇಲ್ಲದಿದ್ದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ: ಕೆ. ಎಸ್. ನವೀನ್ ವಾರ್ನಿಂಗ್
ಕಚೇರಿಯಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗೆದ್ದು ತಕ್ಷಣ ಜನಸಂಪರ್ಕ ಕಾರ್ಯಾಲಯ ಆಗಬೇಕಿತ್ತು. ಚುನಾವಣೆಯಲ್ಲಿ ಗೆದ್ದು ಒಂದು ವರ್ಷ ನಾಲ್ಕು ತಿಂಗಳಾಗಿದೆ. ದಾವಣಗೆರೆ ಡಿಸಿ ಅವರಿಗೆ ಮನವಿ ಮಾಡಿದ್ದೆ. ಈ ಕೊಠಡಿಯನ್ನು ಈಗ ಡಿಸಿ ನೀಡಿದ್ದಾರೆ. ಶುಭದಿನ ಎಂಬ ಕಾರಣಕ್ಕೆ ಇಂದೇ ಕಾರ್ಯಾಲಯ ಉದ್ಘಾಟಿಸಲಾಯಿತು. ಗ್ರಾಮ ಚೈತನ್ಯ ಕಾರ್ಯಾಲಯ ಎಂದು ಹೆಸರು ಇಡಲಾಗಿದೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಸದಸ್ಯರಿಂದ ಆಯ್ಕೆಯಾಗಿರುವ ಕಾರಣ ಅವರಿಗೆ ಚೈತನ್ಯ ತುಂಬಲು ಈ ಹೆಸರು ಇಟ್ಟಿದ್ದೇವೆ ಎಂದು ತಿಳಿಸಿದರು.
ದಾವಣಗೆರೆ(Davanagere)ಯಲ್ಲಿ ನನಗೆ 5 ಕ್ಷೇತ್ರಗಳು ಬರುತ್ತವೆ. ದಾವಣಗೆರೆ ಉತ್ತರ, ದಕ್ಷಿಣ, ಜಗಳೂರು, ಮಾಯಕೊಂಡವೂ ಬರುತ್ತವೆ. ಜನರು ಕಷ್ಟ ಹೇಳಿಕೊಂಡು ಬಂದರೆ ಪರಿಹರಿಸುವ ಕೆಲಸ ಮಾಡ್ತೇವೆ. ವಾರದಲ್ಲಿ 2 ದಿನಗಳ ಕಾಲ ಇಲ್ಲೇ ಇರುತ್ತೇನೆ. ಮಂಗಳವಾರ, ಬುಧವಾರ ಬರುತ್ತೇನೆ. ರಾಜ್ಯದಲ್ಲಿ ಮೊದಲನೇ ಬಾರಿಗೆ ಎಲ್ಲಾ ವ್ಯವಸ್ಥೆಯಳ್ಳ ಗ್ರಾ. ಪಂ.ನಿರ್ಮಾಣ ತಾಲೂಕಿಗೆ ಒಂದರಂತೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 10 ಸಾವಿರ ಅಡಿಗಿಂತ ಕಡಿಮೆ ಇರುವ ಜಾಗ ಗುರುತಿಸಿ ಪಂಚಾಯಿತಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಗ್ರಂಥಾಲಯ, ಗ್ರಾಮ ಸಭೆ ನಡೆಸಲು ಅನುಕೂಲವಾಗುವುದು ಸೇರಿದಂತೆ ಎಲ್ಲಾ ವ್ಯವಸ್ಥೆಯುಳ್ಳ, ಮಾದರಿ ಗ್ರಾಮ ಪಂಚಾಯಿತಿ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ವಿವರಿಸಿದರು.
ನನ್ನ ವ್ಯಾಪ್ತಿಗೆ ಬರುವ ಹತ್ತು ತಾಲೂಕುಗಳಲ್ಲಿ ಒಂದೊಂದು ಗ್ರಾಮ ಪಂಚಾಯಿತಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಡುತ್ತೇವೆ. ಒಂದು ವರ್ಷದ ಅವಧಿಯಲ್ಲಿ ಗ್ರಾ. ಪಂ. ಸದಸ್ಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 2300 ಗ್ರಾ. ಪಂ. ಸದಸ್ಯರಿಗೆ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಕುರಿತಂತೆ ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು. ನೂರು ರೈತರನ್ನು ಆಯ್ಕೆ ಮಾಡಿ ವಿದೇಶ ಪ್ರವಾಸಕ್ಕೆ ತೆರಳಿ ಅಲ್ಲಿ ಕೃಷಿ ಸಂಬಂಧಿತ ಮಾಹಿತಿ ಕಲೆ ಹಾಕುವ ಕಾರ್ಯಕ್ರಮವನ್ನು ಜನವರಿ ತಿಂಗಳಿನಲ್ಲಿ ಕಾರ್ಯರೂಪಕ್ಕೆ ತರುವ ಇರಾದೆ ಎಂದರು.
ದಾವಣಗೆರೆ (Davanagere)ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ. ಪಾಲಿಕೆಯ ಮೇಯರ್, ಸದಸ್ಯರು, ಆಯುಕ್ತರ ನಡುವೆ ಸಮನ್ವಯತೆ ಸಾಧಿಸಿ ಉತ್ತಮ ಕೆಲಸ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಚೇರಿ ತೆರೆಯಲಾಗಿದೆ. ಮಹಾನಗರ ಬೆಳೆಯಬೇಕಾದರೆ ಮೊದಲು ಸಮಸ್ಯೆಗಳು ಪರಿಹಾರ ಆಗಬೇಕು. ಬೆಂಗಳೂರಿನಲ್ಲಿ ಸಮಸ್ಯೆ ಬಂದಾಗ ಎಚ್ಚೆತ್ತುಕೊಳ್ಳಲಿಲ್ಲ. ಈಗ ಸಮಸ್ಯೆಯೂ ಎದುರಾಗುತ್ತಲೇ ಇದೆ. ಹಾಗಾಗಿ, ಮುಂದೆ ಎದುರಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕ ಪ್ರೊ. ಲಿಂಗಣ್ಣ, ಮಹಾನಗರ ಪಾಲಿಕೆಯ ಉಪ ಮೇಯರ್ ಯಶೋಧಾ, ಎಲ್. ಡಿ. ಗೋಣಪ್ಪ, ಕೆ. ಎಂ. ವೀರೇಶ್,
ಪ್ರಸನ್ನಕುಮಾರ್, ಗೌರಮ್ಮ, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಜಯಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.