Site icon Kannada News-suddikshana

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್!

ಪಡಿತರ

ದಾವಣಗೆರೆ: ಜುಲೈ 2025ರ ಮಾಹೆಗೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಆಹಾರಧಾನ್ಯ ಹಂಚಿಕೆ ಮಾಡಲಾಗಿದೆ.

READ ALSO THIS STORY: ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ನಿಂದ ವೈಯಕ್ತಿಕ ಸಾಲ ಪಡೆಯುತ್ತೀರಾ: 5 ಎಚ್ಚರಿಕೆ ಪಾಲಿಸ್ಲೇಬೇಕು!

ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ 2.ಕೆ.ಜಿ ಅಕ್ಕಿಯನ್ನು ಹಾಗೂ 3 ಕೆ.ಜಿ ರಾಗಿಯನ್ನು ಜುಲೈ 31 ರವರೆಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸುವುದರೊಂದಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ.

ಅಂತ್ಯೋದಯ(ಎಎವೈ) ಪಡಿತರದಾರರಿಗೆ 1 ರಿಂದ 3 ಸದಸ್ಯರಿರುವ ಪಡಿತರ ಚೀಟಿಗಳಿಗೆ 21 ಕೆಜಿ ಅಕ್ಕಿ ಮತ್ತು ರಾಗಿ, ಹಂಚಿಕೆ. ಆದ್ಯತಾ(ಪಿಹೆಚ್‍ಹೆಚ್ ಸೆಂಟ್ರಲ್) ಕಾರ್ಡ್‍ದಾರರರಿಗೆ 7ಕೆಜಿ ಅಕ್ಕಿ ಹಾಗೂ 3 ಕೆಜಿ ರಾಗಿ, ಆದ್ಯತಾ(ಪಿಹೆಚ್‍ಹೆಚ್ ಸ್ಟೇಟ್) ಪ್ರತಿ ಸದಸ್ಯರಿಗೆ ತಲಾ 10 ಕೆಜಿ, ಅಂತರ್ ರಾಜ್ಯ, ಅಂತರ್ ಜಿಲ್ಲೆ ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಪಡಿತರ ಪಡೆಯಲು ಅವಕಾಶವಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ತಿಳಿಸಿದ್ದಾರೆ.

Exit mobile version