Home ದಾವಣಗೆರೆ Gold Rate Today: ಆಭರಣ ಪ್ರಿಯರಿಗೆ ಶಾಕ್! ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಜಿಗಿತ, ಇಂದಿನ ದರ ಎಷ್ಟಿದೆ?
ದಾವಣಗೆರೆಬೆಂಗಳೂರುವಾಣಿಜ್ಯ

Gold Rate Today: ಆಭರಣ ಪ್ರಿಯರಿಗೆ ಶಾಕ್! ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಜಿಗಿತ, ಇಂದಿನ ದರ ಎಷ್ಟಿದೆ?

Share
ಚಿನ್ನ
Share

ಬೆಂಗಳೂರು: ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಖರೀದಿ ಭರಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಶನಿವಾರದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹1,26,000 ತಲುಪಿದ್ದರೆ, ಬೆಳ್ಳಿ ದರ ಪ್ರತಿ ಕೆಜಿಗೆ ₹1,53,640ಕ್ಕೆ ಜಿಗಿದಿದೆ.

ಡಿಸೆಂಬರ್ ತಿಂಗಳಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಹಾಗೂ ಡಾಲರ್ ಮೌಲ್ಯ ಬಲಗೊಂಡಿದ್ದರೂ ಸಹ, ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಭರ್ಜರಿ ಚೇತರಿಕೆ ಕಂಡಿವೆ.

ಶುಕ್ರವಾರ ಎಂಸಿಎಕ್ಸ್  ಮಾರುಕಟ್ಟೆಯಲ್ಲಿ ಬೆಳ್ಳಿ ಭವಿಷ್ಯದ ವಹಿವಾಟು ಶೇ. 4.4ರಷ್ಟು ಜಿಗಿದು ಪ್ರತಿ ಕೆಜಿಗೆ ₹1,52,322ಕ್ಕೆ ತಲುಪುವ ಮೂಲಕ ಚಿನ್ನವನ್ನೂ ಮೀರಿಸಿದೆ. ಅಂತಾರಾಷ್ಟ್ರೀಯ ಕಾಮೆಕ್ಸ್ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ $3,650 ಮತ್ತು ಬೆಳ್ಳಿ $43.23ಕ್ಕೆ ಏರಿಕೆಯಾಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಇಂದು ಎಂಸಿಎಕ್ಸ್ ಮಾರುಕಟ್ಟೆಗೆ ರಜೆ ಇರಲಿದೆ.

ಬೆಂಗಳೂರು ದರ: ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ (10 ಗ್ರಾಂ) ₹1,25,870, 22 ಕ್ಯಾರೆಟ್ ಚಿನ್ನ ₹1,15,381 ಹಾಗೂ 999 ಶುದ್ಧ ಬೆಳ್ಳಿ (1 ಕೆಜಿ) ₹1,53,480ಕ್ಕೆ ಮಾರಾಟವಾಗುತ್ತಿದೆ.

ಇತರೆ ಮೆಟ್ರೋ ನಗರಗಳ 24K ಚಿನ್ನದ ದರ (10 ಗ್ರಾಂ): ಚೆನ್ನೈ ₹1,26,140, ಹೈದರಾಬಾದ್ ₹1,25,970, ಮುಂಬೈ ₹1,25,770, ಕೋಲ್ಕತ್ತಾ ₹1,25,610 ಮತ್ತು ದೆಹಲಿ ₹1,25,560.

ಇತರೆ ಮೆಟ್ರೋ ನಗರಗಳ 22K ಚಿನ್ನದ ದರ (10 ಗ್ರಾಂ): ಚೆನ್ನೈ ₹1,15,628, ಹೈದರಾಬಾದ್ ₹1,15,473, ಮುಂಬೈ ₹1,15,289, ಕೋಲ್ಕತ್ತಾ ₹1,15,143 ಮತ್ತು ದೆಹಲಿ ₹1,15,097.

ಪ್ರಮುಖ ನಗರಗಳ ಬೆಳ್ಳಿ ದರ (1 ಕೆಜಿ): ಚೆನ್ನೈ ₹1,53,810, ಹೈದರಾಬಾದ್ ₹1,53,600, ಮುಂಬೈ ₹1,53,360, ಕೋಲ್ಕತ್ತಾ ₹1,53,160 ಮತ್ತು ದೆಹಲಿ ₹1,53,100.

ಒಟ್ಟಾರೆಯಾಗಿ, 22 ಕ್ಯಾರೆಟ್ ಆಭರಣ ಚಿನ್ನದ ಸರಾಸರಿ ದರ 10 ಗ್ರಾಂಗೆ ₹1,15,500 ಹಾಗೂ 925 ಸ್ಟರ್ಲಿಂಗ್ ಬೆಳ್ಳಿ ದರ ಪ್ರತಿ ಕೆಜಿಗೆ ₹1,42,117 ದಾಖಲಾಗಿದೆ. ಮದುವೆ ಸೀಸನ್ ಮತ್ತು ಹೂಡಿಕೆದಾರರ ಬೇಡಿಕೆಯಿಂದಾಗಿ ಬೆಲೆಗಳಲ್ಲಿ ಈ ಏರಿಳಿತ ಮುಂದುವರಿದಿದೆ.

Share
Related Articles