Home ಕ್ರೈಂ ನ್ಯೂಸ್ ದಾವಣಗೆರೆ ಅಪೂರ್ವ ರೆಸಾರ್ಟ್ ಮದುವೆ ಈವೆಂಟ್ ನಲ್ಲಿ ಕದ್ದಿದ್ದ ಅರ್ಧಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಅಪೂರ್ವ ರೆಸಾರ್ಟ್ ಮದುವೆ ಈವೆಂಟ್ ನಲ್ಲಿ ಕದ್ದಿದ್ದ ಅರ್ಧಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶ!

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:10_12_2025

ದಾವಣಗೆರೆ: ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಮದುವೆಗೆ ಬಂದಿದ್ದ ವೇಳೆ ಕಳವು ಮಾಡಿದ್ದ 51.49 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: ಬೆಚ್ಚಿ ಬೀಳಿಸುವ ಕೃತ್ಯ: ಹಾಸ್ಟೆಲ್ ನಿಂದ ಲಾಡ್ಜ್ ಗೆ ಕರೆದೊಯ್ದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಮೂವರು ಕಾಮುಕರ ಬಂಧನ!

ಬಂಗಾರದ 1 ಡಾಬು, ಬಂಗಾರದ 1 ಅರವಂಕಿ, ಬಂಗಾರದ ಒಂದು ಲಾಂಗ್ ಚೈನ್, ಬಂಗಾರದ 1 ಶಾರ್ಟ್ ನೆಕ್ ಲೆಸ್, ಬಂಗಾರದ 1 ಕೊರಳ ಚೈನ್, ಬಂಗಾರದ 1 ಕೊರಳ ಚೈನ್, )ಬಂಗಾರದ 1 ಬ್ರಾಸ್ ಲೈಟ್, ಕರಿಮಣಿಗಳಿರುವ ಬಂಗಾರದ 1 ಚೈನ್, ಕರಿಮಣಿಗಳಿರುವ ಬಂಗಾರದ 1 ಚೈನ್, ಕಲರ್ ಮಣಿಗಳಿರುವ ಬಂಗಾರದ ಸರ, ಒಂದು ಜೊತೆ ಬಂಗಾರದ ಕಿವಿ ಓಲೆ, ಒಂದು ಜೊತೆ ಬಂಗರದ ಕಿವಿ ಓಲೆ ಸೇರಿದಂತೆ ಒಟ್ಟು ಸುಮಾರು 51,49,000 ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯಪ್ರದೇಶ ರಾಜ್ಯದ ರಾಜ್‌ಗಡ್ ಜಿಲ್ಲೆಯ ನರಸಿಂಗ್ ತಾಲ್ಲೂಕಿನ ಗುಲ್‌ಖೇಡಾದ ಕರಣ್‌ ವರ್ಮಾ ಅಲಿಯಾಸ್ ಕರಣ್ ಸಿಸೊಡಿಯಾ, ವಿನಿತ್ ಸಿಸೊಡಿಯಾ ತಪ್ಪಿಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ:

ನವೆಂಬರ್ 14ರಂದು ಪ್ರವೀಣ್ ಕುಮಾರ್ ಅವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನಲ್ಲೇನಿದೆ?

ಸೋದರ ಮಾವನ ಮಗ ವರುಣ್ ಮದುವೆ ನವೆಂಬರ್ 14 ಮತ್ತು 15ರಂದು 2 ದಿನಗಳ ಕಾಲ ದಾವಣಗೆರೆಯ ಹೈ ವೇ ಪಕ್ಕದಲ್ಲಿರುವ ಅಪೂರ್ವ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. ಸಂಬಂಧಿಕರೊಂದಿಗೆ ನವೆಂಬರ್ 14ರಂದು 2.30ಕ್ಕೆ ಅಪೂರ್ವ ರೆಸಾರ್ಟ್ ಬಂದು ಊಟ ಮಾಡಿ ನಂತರ ದಾವಣಗೆರೆಯ ಬಾಪೂಜಿ ಕಾಲೇಜ್ ಹತ್ತಿರ ಒಂದು ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದೆವು. ಅದೇ ದಿನ ಸಂಜೆ 7.30ಕ್ಕೆ ಅಲ್ಲಿಂದ  ನಾವು ಅಪೂರ್ವ ರೆಸಾರ್ಟ್ ಗೆ ಹೋದೆವು. ಈ ವೇಳೆ ಮದುವೆ ವೇಳೆ ಧರಿಸಲು ತಂದಿದ್ದ ಒಡವೆಗಳಿದ್ದ ಪಿಂಕ್ ಕಲರ್ ಬ್ಯಾಗ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದೆವು.

ಮದುವೆ ಈವೆಂಟ್ ಶುರುವಾದಾಗ ಒಡವೆ ಇದ್ದ ಬ್ಯಾಗ್ ಅನ್ನು ನನ್ನ ತಾಯಿ ಪದ್ಮಾವತಿ ಅವರು ರಾತ್ರಿ ಸುಮಾರು 8.54ರ ಸುಮಾರಿನಲ್ಲಿ ಚಪ್ಪಾಳೆ ಹೊಡೆಲು ಕುಳಿತಿದ್ದ ಚೇರ್ ಪಕ್ಕದಲ್ಲಿ ಇಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಬ್ಯಾಕ್ ಇರಲಿಲ್ಲ. ಆಗ ಈವೆಂಟ್ ವಿಡಿಯೋ ಪರಿಶೀಲಿಸಿದಾಗ ಯಾರೋ ಒಬ್ಬ ವ್ಯಕ್ತಿ ಬಂದು ತಾಯಿಯವರ ಹಿಂದಿನ ಚೇರ್ ಮೇಲೆ ಕುಳಿತಿದ್ದು ಕಂಡು ಬಂದಿದೆ.

ಬ್ಯಾಗ್ ನಲ್ಲಿ ಯಾವ್ಯಾವ ಆಭರಣಗಳು ಇದ್ದವು?

ತಾಯಿಯವರು ಕೆಳಗೆ ಇಟ್ಟಿದ್ದ ಒಡವೆಗಳು ಬ್ಯಾಗ್ ಅನ್ನು ಗೊತ್ತಾಗದಂತೆ ಕಳ್ಳತನ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಂಗಾರದ 1 ಡಾಬು ಸುಮಾರು 200 ಗ್ರಾಂ, ಬಂಗಾರದ 1 ಅರವಂಕಿ ಸುಮಾರು 50 ಗ್ರಾಂ, ಬಂಗಾರದ 1 ಲಾಂಗ್ ಚೈನ್ 2 ಸ್ಟೆಪ್ ಸುಮಾರು 60 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ನೆಕ್ ಲೆಸ್ ಸುಮಾರು 20 ಗ್ರಾಂ, ಬಂಗಾರದ 1 ಕೊರಳ ಚೈನ್ ಸುಮಾರು 30 ಗ್ರಾಂ, ಬಂಗಾರದ 1 ಕೊರಳ ಚೈನ್ ಸುಮಾರು 30 ಗ್ರಾಂ, ಬಂಗಾರದ 1 ಉಂಗುರ ಸುಮಾರು 3 ಗ್ರಾಂ, ಬಂಗಾರದ 1 ಉಂಗುರ ಸುಮಾರು 12 ಗ್ರಾಂ, ಬಂಗಾರದ 1 ಬ್ರಾಸ್ ಲೈಟ್ ಸುಮಾರು 25 ಗ್ರಾಂ, ಬಂಗಾರದ 1 ಜೊತೆ ಕಿವಿ ಓಲೆ ಸುಮಾರು 7 ಗ್ರಾಂ, ಬಂಗಾರದ 1 ಜೊತೆ ಕಿವಿ ಓಲೆ ಸುಮಾರು 8 ಗ್ರಾಂ, ಕರಿಮಣಿಗಳಿರುವ ಬಂಗಾರದ ಲಾಕೆಟ್ ಇದ್ದ 1 ಚೈನ್ ಸುಮಾರು 30 ಗ್ರಾಂ ಸೇರಿದಂತೆ ಒಟ್ಟು 535 ಗ್ರಾಂ ಬಂಗಾರದ ಆಭರಣಗಳು. ಒಟ್ಟು 67 ಲಕ್ಷದ 48 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.

Share

Leave a comment

Leave a Reply

Your email address will not be published. Required fields are marked *