Home ದಾವಣಗೆರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಿ: ಅಬ್ದುಲ್ ಘನಿ ತಾಹೀರ್ ಆಗ್ರಹ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಿ: ಅಬ್ದುಲ್ ಘನಿ ತಾಹೀರ್ ಆಗ್ರಹ

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:05_01_2026

ದಾವಣಗೆರೆ: ಮುಸ್ಲಿಂ ಮತಗಳ ಗಣನೀಯವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಾಮಾಜಿಕ ಪರಿಕಲ್ಪನೆ ಹಿನ್ನಲೆಯಲ್ಲಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ರಾಜ್ಯ ವಕ್ಫ್ ಪರಿಷತ್ ಸದಸ್ಯ ಅಬ್ದುಲ್ ಘನಿ ತಾಹೀರ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್: ಹೊಸ ದಾಳ ಉರುಳಿಸಿದ ಶಿವಗಂಗಾ ಬಸವರಾಜ್!

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಮುದಾಯ ನಿರ್ಣಾಯಕವಾಗಿದ್ದರು ಸಹ ಹಕ್ಕು ಪಡೆಯುವಲ್ಲಿ ವಿಫಲವಾಗಿದ್ದೇವೆ. ಪ್ರತಿಬಾರಿ ಅವಕಾಶಕ್ಕೆ ಎದುರು ನೋಡುತ್ತಿದ್ದೇವೆ. ಆದರೆ, ನಮಗೆ ಅವಕಾಶ ಸಿಗದೆ ವಂಚಿತರಾಗಿದ್ದೇವೆ. ಪ್ರತಿ ಬಾರಿಯು ಅವಕಾಶ ಕೇಳಿದಾಗ ಮುಂದಿನ ಬಾರಿ ಎನ್ನುವ ಬಹು ದೊಡ್ಡ ಭರವಸೆ ನೀಡಿ ನಮ್ಮ ಸಮುದಾಯ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ. ಇದರಿಂದ ನಮ್ಮ ಸಮುದಾಯಕ್ಕೆ ನೋವು ತಂದಿದೆ. ಈಗ ಕಾಂಗ್ರೆಸ್ ಪಕ್ಷದ ವರಿಷ್ಠರು ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ಮೂಲಕ ಬಸವಣ್ಣ ಮತ್ತು ಅಂಬೇಡ್ಕರ ಅವರ ಆಶಯದಂತೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಆಗ್ರಹಿಸಿದ್ದಾರೆ.

ದಕ್ಷಿಣದಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮುದಾಯ ಹೆಚ್ಚಾಗಿದೆ. ಈ ಸಮುದಾಯಗಳು ನಿರ್ಧಾರ ಮಾಡಿ ಮತ ನೀಡಿದ ವ್ಯಕ್ತಿ ಇಲ್ಲಿ ಆಯ್ಕೆಯಾಗಲು ಸಾಧ್ಯ. ಆದರೆ, ಈ ಸಮುದಾಯಗಳಿಂದ ಮಾತ್ರ ಅಭ್ಯರ್ಥಿ ಇಲ್ಲಿ ಆಯ್ಕೆಯಾಗುತ್ತಿಲ್ಲ. ಸಾಮಾಜಿಕ ನ್ಯಾಯದ ಕಲ್ಪನೆ ವಿರುದ್ಧವಾಗಿದೆ. ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ತನ್ನ ಸಹೋದರನಿಗೆ ಟಿಕೆಟ್ ಕೇಳಿರುವುದು ನ್ಯಾಯ ಸಮ್ಮತವಲ್ಲ. ಅದನ್ನು ಅವರು ಅರಿತು ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗುವಂತೆ ಮಾಡಬೇಕು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ ವ್ಯಕ್ತಿ ಜನಪ್ರತಿನಿಧಿ ಆಗಲು ಕೈ ಜೋಡಿಸಬೇಕು. ಆ ಮೂಲಕ ಸಮಾಜ ಕಟ್ಟಲು ಕೈ ಜೋಡಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *