Site icon Kannada News-suddikshana

ಗ್ರಾಹಕರಿಗೆ ಶುಭ ಸುದ್ದಿ: ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಸುತ್ತಿನ ಮತದಾನದ ದಿನ ಗ್ಯಾಸ್ ಬೆಲೆ ಇಳಿಕೆಯಾಗಿದ್ದು, ತಿಂಗಳ ಆರಂಭದಲ್ಲಿಯೇ ಶುಭ ಸುದ್ದಿ ಸಿಕ್ಕಿದೆ.

ಜೂನ್ 1 ರಂದು ಜಾರಿಗೆ ಬರುವಂತೆ ತೈಲ ಮಾರಾಟ ಸಂಸ್ಥೆಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 72 ರೂ. ಕಡಿಮೆ ಮಾಡಿವೆ. ಹೊಸ ಬೆಲೆ 1787 ರೂ. ಈ ಹೊಸ ಬೆಲೆ ಇಂದಿನಿಂದ ಜಾರಿಗೆ ಬರಲಿದೆ.

14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. 14.2 ಕೆಜಿ LPG ಸಿಲಿಂಡರ್ ಬೆಲೆ 829 ರೂ. ಆಗಿದೆ. ಪ್ರತಿ ತಿಂಗಳ ಆರಂಭದಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳನ್ನು ತೈಲ ಮಾರುಕಟ್ಟೆ ಏಜೆನ್ಸಿಗಳು ಪರಿಶೀಲಿಸುತ್ತವೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ LPG ಬೆಲೆಗಳನ್ನು ಕಡಿಮೆಗೊಳಿಸಲಾಗುತ್ತದೆ ಅಥವಾ ಹೆಚ್ಚಿಸಲಾಗುತ್ತದೆ. ಆದರೆ ಗ್ಯಾಸ್ ಬೆಲೆ ಇಳಿಕೆಗೂ ಚುನಾವಣೆಗೂ ಸಂಬಂಧವಿಲ್ಲ.

19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳನ್ನು ಸಾಮಾನ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಬಳಸಲಾಗುತ್ತದೆ. ಮನೆಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಅನ್ನು ಬಳಸಲಾಗುತ್ತದೆ.

Exit mobile version