Site icon Kannada News-suddikshana

ಜನರೇ ಎಚ್ಚರ..! ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ; ವಿಡಿಯೋ ವೈರಲ್

ಮುಂಬೈ: ಈ ಹಿಂದೆ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಹಾಗೂ ಮೊಟ್ಟೆ ಮಾರುಕಟ್ಟೆ ದೊರೆಯುತ್ತಿದ್ದವು. ಇದೀಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದೆ. ಬಳಿಕ ಬೆಳ್ಳುಳ್ಳಿ ಒಳಗಡೆ ನೋಡಿದಾಗ ಸಿಮೆಂಟ್ ಕಂಡುಬಂದಿದೆ

ಸದ್ಯ ದೇಶದಲ್ಲಿ ಬೆಳ್ಳುಳ್ಳಿ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೆಲವರು ದುಡ್ಡಿನಾಸೆಗಾಗಿ ಸಿಮೆಂಟ್‌ನಿಂದ ಬೆಳ್ಳುಳ್ಳಿಯನ್ನು ತಯಾರಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ದರ 300-350 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಕಿಡಿಗೇಡಿಗಳು ನಿಜವಾದ ಬೆಳ್ಳುಳ್ಳಿ ರೀತಿಯಲ್ಲಿ ಸಿಮೆಂಟ್‌ನಿಂದ ಬೆಳ್ಳುಳ್ಳಿ ತಯಾರಿಸಿ, ಬಳಿಕ ಅದಕ್ಕೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ. ನಂತರ ಅಸಲಿ ಬೆಳ್ಳುಳ್ಳಿಯೊಂದಿಗೆ ನಖಲಿ ಬೆಳ್ಳುಳ್ಳಿ ಸೇರಿಸಿ ಮಾರಾಟ ಮಾಡುತ್ತಿದ್ದಾರೆ.

 

Exit mobile version