SUDDIKSHANA KANNADA NEWS/ DAVANAGERE/ DATE:22-12-2023
ದಾವಣಗೆರೆ: ಅಬಕಾರಿ ತಂಡ ಹೊನ್ನಾಳಿ ಪಟ್ಟಣದ ಮಾರಿಕೊಪ್ಪ ರಸ್ತೆಯಲ್ಲಿ ದಾಳಿ ನಡೆಸಿ ದ್ವಿಚಕ್ರ ವಾಹನದಲ್ಲಿ ಅನಧಿಕೃತವಾಗಿ ಮಾರಾಟಮಾಡುತ್ತಿದ್ದ ರೂ.20 ಸಾವಿರ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.
ಹೊನ್ನಾಳಿ ಪಟ್ಟಣದ ಮಾರಿಕೊಪ್ಪ ರಸ್ತೆ ಮತ್ತು ಬಾರ್ ಲೈನ್ ರಸ್ತೆಗಳು ಸಂಪರ್ಕಿಸುವ ವಿದ್ಯುತ್ ಕಂಬದ ತಿರುವಿನ ಬಳಿ ಮೊಹಮದ್ ಸಾದತ್, ಕರೋಂಖಾನ್ ಎಂಬಾತ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 145 ಗ್ರಾಂ ಎಲೆ, ಸೊಪ್ಪು, ಹೂವು, ಬೀಜ, ಒಣಗಿದಕಡ್ಡಿ ಮಿಶ್ರಿತವಾದ ಒಣ ಗಾಂಜಾವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುವ ಸಮಯದಲ್ಲಿ ಪತ್ತೆ ಹಚ್ಚಿ ವಾಹನ ಮತ್ತು ಗಾಂಜಾವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎನ್ ಡಿ ಪಿ ಎಸ್ ಪದಾರ್ಥಗಳ ಅಂದಾಜು ರೂ.20,000 ಮೊತ್ತದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತೆ ಸ್ವಪ್ನ.ಆರ್.ಎಸ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಮುರುಡೇಶ್.ಎಸ್.ಆರ್, ಹಾಗೂ ಇತರರು ದಾಳಿ ನಡೆಸಿದ್ದರು.