ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಡನೆ ಮಾಡಿದ 2026-27ನೇ ಸಾಲಿನ ಆಯವ್ಯಯ ಅಭಿವೃದ್ಧಿ ಮತ್ತು ದೂರದೃಷ್ಟಿತ್ವ ಪೂರಕವಾಗಿದೆ ಎಂದು ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಜಗನ್ನಾಥ ಅವರು ಹೇಳಿದ್ದಾರೆ.
ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪುವ ಆಯವ್ಯಯ ಇದಾಗಿದ್ದು, ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ರಕ್ಷಣೆ, ವಸತಿ ಸೇರಿದಂತೆ ಪ್ರತಿಯೊಂದು ಇಲಾಖೆಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವ ಮೂಲಕ ಐತಿಹಾಸಿಕ ಬಜೆಟ್ ಅನ್ನು ಸಿದ್ದರಾಮಯ್ಯರು ಸ್ಮರಣೀಯವಾಗಿಸಿದ್ದಾರೆ. ನೀರಾವರಿ, ಸಣ್ಣ ನೀರಾವರಿ, ಪಶು ರೋಗ ಪತ್ತೆ, ಅಡಿಕೆ, ಕೃಷಿ ವಿಸ್ತಾರ ಯೋಜನೆ, ಬಾಣಂತಿಯರಿಗೆ ಬಿಸಿಯೂಟ, ಮಘುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ, ನಿರುದ್ಯೋಗಿಗಳಿಗೆ ಸರ್ಕಾರಿ ಕೆಲಸ ನೀಡುವ ಘೋಷಣೆ, ಅಹಿಂದ ವರ್ಗವೂ ಸೇರಿದಂತೆ ಎಲ್ಲಾ ವರ್ಗದವರೂ ಮೆಚ್ಚುವಂಥ ಬಜೆಟ್ ಇದಾಗಿದೆ. ದಾಖಲೆಯ ಹದಿನೇಳನೇ ಬಜೆಟ್ ಅನ್ನು ಮಂಡನೆ ಮಾಡಿದ ಸಿದ್ದರಾಮಯ್ಯರ ಲೆಕ್ಕ ಪಕ್ಕಾ ಇದೆ ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಗೆ 19,843 ಕೋಟಿ ರೂಪಾಯಿ, ಜಲಸಂಪನ್ಮೂಲ ಇಲಾಖೆಗೆ 22,203 ಕೋಟಿ ರೂಪಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 7,942 ಕೋಟಿ ರೂಪಾಯಿ, ಕೃಷಿ ಇಲಾಖೆಗೆ 8373 ಕೋಟಿ ರೂಪಾಯಿ ಸೇರಿದಂತೆ ಪ್ರತಿಯೊಂದು ಇಲಾಖೆಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ನೀಡಿದ್ದಾರೆ. ಈ ಮೂಲಕ ಇದೊಂದು ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ಗಜೇಂದ್ರ ಜಗನ್ನಾಥ ಬಣ್ಣಿಸಿದ್ದಾರೆ.
- Agriculture funding
- AHINDA welfare
- Davanagere Congress
- Gajendra Jagannath
- Government jobs for youth
- Guarantee Schemes
- Health department allocation
- Karnataka State Budget
- Siddaramaiah Budget 2026-27
- Visionary Budget.
- ಅಹಿಂದ ವರ್ಗ
- ಆರೋಗ್ಯ ಇಲಾಖೆ ಅನುದಾನ
- ಕರ್ನಾಟಕ ಆಯವ್ಯಯ
- ಕೃಷಿ ಅನುದಾನ
- ಗಜೇಂದ್ರ ಜಗನ್ನಾಥ
- ಗ್ಯಾರಂಟಿ ಯೋಜನೆಗಳು
- ದಾವಣಗೆರೆ ಕಾಂಗ್ರೆಸ್
- ನಿರುದ್ಯೋಗಿಗಳಿಗೆ ಸರ್ಕಾರಿ ಕೆಲಸ
- ಬಾಣಂತಿಯರಿಗೆ ಬಿಸಿಯೂಟ.
- ಸಿದ್ದರಾಮಯ್ಯ ಬಜೆಟ್ 2026-27





Leave a comment