Site icon Kannada News-suddikshana

ಐಪಿಎಲ್ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಪೊಲೀಸರ ತಪ್ಪಿದೆ ಎಂಬ ಸರ್ಕಾರಕ್ಕೆ ಸೇರಿದೆ ಎಂಬದು ಸುಳ್ಳು: ಡಾ. ಜಿ. ಪರಮೇಶ್ವರ ಸ್ಪಷ್ಟನೆ

ಜಿ. ಪರಮೇಶ್ವರ

ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಮೃತರಾಗಿದ್ದು ನ್ಯಾಯಾಂಗ ತನಿಖೆಗೆ ಸರ್ಕಾರ ಸೂಚಿಸಿತ್ತು. ವರದಿಯನ್ನು ನೀಡಲಾಗಿದ್ದು ವರದಿ ಸರ್ಕಾರಕ್ಕೆ ಕೈಸೇರದೆಯೇ ಪೊಲೀಸರ ತಪ್ಪಿದೆ ಎಂದು ವರದಿ ನೀಡಲಾಗಿದೆ ಎಂದು ಮಾಧ್ಯಮದಲ್ಲಿ ಸುದ್ದಿ ಮಾಹಿತಿ ಕೊರತೆಯಿಂದ ಪ್ರಸಾರವಾಯಿತು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.

READ ALSO THIS STORY: ಪಾಕ್ ಸಂಪರ್ಕ ಹೊಂದಿದ್ದ ಜಾಲ ಬಯಲು: ಇಸ್ಲಾಂ ಧರ್ಮಕ್ಕೆ ಹಿಂದೂ ಹುಡುಗಿಯರ ಮತಾಂತರಕ್ಕೆ ಆನ್ ಲೈನ್ ಗೇಮ್ಸ್ ಬಳಕೆ!

ಪೊಲೀಸ್ ಇಲಾಖೆಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಮನೆ-ಮನೆಗೂ ಪೊಲೀಸ್ ಮಿತ್ರಪಡೆ, ಪೊಲೀಸ್ ನಡೆ ಸಮುದಾಯದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಪೊಲೀಸ್ ಮಿತ್ರಪಡೆ, ಜಂಟಿ ಕೈಗಳಾಗಿ ಕೆಲಸ ಮಾಡುವ ಸಾರ್ವಜನಿಕರಿಗೆ ಪ್ರಶಂಸನೀಯ ಪತ್ರ ನೀಡಿ, ಮನೆ-ಮನೆಗೆ ಪೊಲೀಸ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹರಿಹರ ಶಾಸಕರಾದ ಬಿ.ಪಿ.ಹರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮನೆ-ಮನೆಗೂ ಪೊಲೀಸ್ ಕಾರ್ಯಕ್ರಮ ಉತ್ತಮವಾಗಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನವಾಗಲೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು. ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ; ಆರ್.ರವಿಕಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಸ್ವಾಗತಿಸಿದರು.

ವೇದಿಕೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಪರಮೇಶ್ವರ ಹೆಗಡೆ, ತುಮಕೂರು ಹೆಚ್ಚುವರಿ ರಕ್ಷಣಾಧಿಕಾರಿ ಗೋಪಾಲ್ ಉಪಸ್ಥಿತರಿದ್ದರು. ಹೆಚ್ಚುವರಿ ರಕ್ಷಣಾಧಿಕಾರಿ ಜಿ.ಮಂಜುನಾಥ್ ವಂದಿಸಿದರು.

Exit mobile version