SUDDIKSHANA KANNADA NEWS/DAVANAGERE/DATE:15_12_2025
ದಾವಣಗೆರೆ: ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.
ಈ ಸುದ್ದಿಯನ್ನೂ ಓದಿ: ಶಾಮನೂರು ಶಿವಶಂಕರಪ್ಪರೆಂಬ ದಾನಚಿಂತಾಮಣಿಯ ಮಹಾಸ್ಮರಣೆ: ಸಿರಿಗೆರೆ ಶ್ರೀ, ಯಡಿಯೂರಪ್ಪ, ಸಚಿವರು ಸೇರಿ ಹಲವರ ಭಾಗಿ
ಪುತ್ರರಾದ ಎಸ್. ಎಸ್. ಬಕ್ಕೇಶ್, ಎಸ್. ಎಸ್. ಗಣೇಶ್, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಂತಿಮ ವಿಧಿವಿಧಾನ ನಡೆಸಿಕೊಟ್ಟರು. ಪತ್ನಿ ಸಮಾಧಿ ಪಕ್ಕದಲ್ಲಿಯೇ ಶಾಮನೂರು ಶಿವಶಂಕರಪ್ಪರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪಂಚಪೀಠಾಧಿಪತಿಗಳು ಅಂತಿಮ ಕ್ರಿಯೆಯಲ್ಲಿ ಭಾಗಿಯಾದರು. ಶಿವ ಪಾರ್ವತಿ ಪದ್ಧತಿ ಮೂಲಕ ಅಂತ್ಯಸಂಸ್ಕಾರ ನೆರವೇರಿತು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸೊಸೆಯರು, ಮೊಮ್ಮಕ್ಕಳು, ಮರಿಮಕ್ಕಳು, ಹಿತೈಷಿಗಳು, ಸಂಬಂಧಿಕರು, ಕುಟುಂಬಸ್ಥರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಸಾವಿರಾರು ಜನರು ಈ ಕ್ಷಣಕ್ಕೆ ಸಾಕ್ಷಿಯಾದರು. ಕಿರಿಯ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಿಧಿವಿಧಾನ ನೆರವೇರಿಸಿದರು.
ಮುಖ್ಯಾಂಶಗಳು
– ಪಂಚಪೀಠಾಧಿಪತಿಗಳ ಪಾದೋದಕ ಪೂಜೆ
-ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸೇರಿ ಹಲವರು ಭಾಗಿ
– ಸಿರಿಗೆರೆ ಶ್ರೀ, ಸಾಣೇಹಳ್ಳಿ ಶ್ರೀ, ಪಂಚಪೀಠಾಧಿಪತಿಗಳು ಉಪಸ್ಥಿತಿ
– ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಎಸ್ ಎಸ್ ಸಮಾಧಿ
– ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ
– ಕ್ಯಾಬಿನೆಟ್ ನ ಬಹುತೇಕ ಸಚಿವರು ಭಾಗಿ
– ವೀರಶೈವ ಲಿಂಗಾಯತ ಪದ್ಧತಿಯಂತೆ ಕಾರ್ಯ
– ಸೊಸೆಯಂದರು, ಮೊಮ್ಮಕ್ಕಳು, ಮರಿಮಕ್ಕಳ ಕಣ್ಣೀರು
– ಮಣ್ಣು ಹಾಕದೇ ಕ್ರಿಯಾ ಸಮಾಧಿಯಲ್ಲಿ ವಿಭೂತಿ
– ಮೋಕ್ಷ ಪ್ರಾಪ್ತಿಗೆ ವಿಶೇಷ ಪೂಜೆ
ಪಂಚಪೀಠಾಧ್ಯಕ್ಷರ ಪಾದೋದಕ ಪೂಜೆ ಬಳಿಕ ಮಣ್ಣು ಹಾಕದೇ ಕ್ರಿಯಾ ಸಮಾಧಿಯಲ್ಲಿ ವಿಭೂತಿ ಹಾಕಲಾಯಿತು. ಕ್ರಿಯಾಸಮಾಧಿ ಬಳಿಕ ವಿಶೇಷ ಪೂಜೆ ಮಾಡಲಾಯಿತು. ಇದಕ್ಕೂ ಮೊದಲು ಶಾಮನೂರು ಶಿವಶಂಕರಪ್ಪರ ಮೃತದೇಹಕ್ಕೆ
ತ್ರಿವರ್ಣ ಧ್ವಜ ಹೊದಿಸಿ ಸರ್ಕಾರಿ ಗೌರವಗಳನ್ನು ಸಮರ್ಪಿಸಲಾಯಿತು. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿ ಗಣ್ಯರು ಶಾಮನೂರು ಶಿವಶಂಕರಪ್ಪರ ಮೃತದೇಹದ ಅಂತಿಮ ದರ್ಶನ ಪಡೆದರು.
ಸಿರಿಗೆರೆಯ ತರಳಬಾಳು ಬೃಹನ್ಮಠದ ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಪೀಠಾಧಿಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಮಠದ ಶ್ರೀಗಳು, ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್, ಸಚಿವರಾದ ಹೆಚ್. ಸಿ. ಮಹಾದೇವಪ್ಪ, ಕೆ. ಜೆ. ಜಾರ್ಜ್, ಬೈರತಿ ಸುರೇಶ್, ಎಂ. ಬಿ. ಪಾಟೀಲ್, ಈಶ್ವರ್ ಖಂಡ್ರೆ, ಮುನಿಯಪ್ಪ, ಡಿ. ಸುಧಾಕರ್, ಜಮೀರ್ ಅಹ್ಮದ್, ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಜಗದೀಶ್ ಶೆಟ್ಟರ್, ಶಂಕರ್ ಬಿದರಿ, ಸೇರಿದಂತೆ ಬಿಜೆಪಿ ನಾಯಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವಿಐಪಿಗಳಿಗೆ ಪ್ರತ್ಯೇಕ ಆಸದನ ವ್ಯವಸ್ಥೆಯನ್ನು ದಾವಣಗೆರೆ ಪೊಲೀಸರು ಮಾಡಿದ್ದರು. ಅಂತ್ಯಕ್ರಿಯೆ ಸ್ಥಳದಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳು ಉಪಸ್ಥಿತಿ ಗಮನ ಸೆಳೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುುನ್ ಮನೆಯಿಂದ ಸಾಯಿಬಾಬ ದೇವಸ್ಥಾನ, ರೆಡ್ಡಿ ಬಿಲ್ಡಿಂಗ್, ಚರ್ಚ್ ಮುಂಭಾಗ, ರಾಮ್ ಅಂಡ್ ಕೋ ಸರ್ಕಲ್, ಎವಿಕೆ ಕಾಲೇಜು ರಸ್ತೆ, ಮಹಾತ್ಮಾ ಗಾಂಧಿ ಶಾಲೆ, ಹಳೇ ಕೋರ್ಟ್ ರಸ್ತೆ ಮೂಲಕ ಸಾಗಿ ಹೈಸ್ಕೂಲ್ ಮೈದಾನ ತಲುಪಿತು. ಬಳಿಕ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಮೃತದೇಹ ಇರಿಸಲಾಗಿತ್ತು.
ಕಾಯಿಪೇಟೆ, ದೊಡ್ಡಪೇಟೆ ಗಣಪತಿ ದೇವಸ್ಥಾನ, ದುರ್ಗಾಂಬಿಕಾ ದೇವಸ್ಥಾನ, ಕಾಯಿಪೇಟೆ ರಸ್ತೆ, ಚೌಕಿಪೇಟೆ, ಬಕ್ಕೇಶ್ವರ ದೇವಸ್ಥಾನ, ಗ್ಯಾಸ್ ಕಟ್ಟೆ ಸರ್ಕಲ್, ಮದೀನಾ ಆಟೋ ನಿಲ್ದಾಣ, ಹಳೇಬೇತೂರು ರಸ್ತೆ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್, ಕಲ್ಲೇಶ್ವರ್ ರೈಸ್ ಮಿಲ್ ಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ





Leave a comment