Site icon Kannada News-suddikshana

ನಾಪತ್ತೆಯಾದ ಮಹಿಳೆ ಹೆಬ್ಬಾವಿನ ಕೊಟ್ಟೆಯಲ್ಲಿ ಶವವಾಗಿ ಪತ್ತೆ ..!

16 ಅಡಿ ಉದ್ದದ ಬೃಹತ್​ ಹೆಬ್ಬಾವೊಂದು ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಆಘಾತಕಾರಿ ಘಟನೆಯೊಂದು ಮಧ್ಯ ಇಂಡೋನೇಷ್ಯಾದ ಮಕಾಸ್ಸರ್​ನಲ್ಲಿ ನಡೆದಿದೆ.

ಆಕೆ ನಾಲ್ಕು ಮಕ್ಕಳ ತಾಯಿ. ಫರೀದಾ (45) ನಾಪತ್ತೆಯಾದ ಮಹಿಳೆ‌ ಆಗಿದ್ದು,  ಇವಳು ನಾಪತ್ತೆಯಾಗಿ ಮೂರು ದಿನ ಕಳೆದಿತ್ತು. ಗುರುವಾರ ರಾತ್ರಿ ಮನೆ ಬಿಟ್ಟು ಹೋದ ಆಕೆ ಪತ್ತೆಯಾಗಿರಲಿಲ್ಲ. ಆಕೆ ಕಾಣೆಯಾದಾಗಿನಿಂದ ಅವಳ ಗಂಡ ಹಾಗೂ ಗ್ರಾಮಸ್ಥರು ಆಕೆಗಾಗಿ ಇನ್ನಿಲ್ಲದ ಹುಟುಕಾಟ ನಡೆಸಿದ್ದರು. ಆದರೆ ಆಕೆ ಮಾತ್ರ ಪತ್ತೆಯಾಗಲೇ ಇಲ್ಲ.

ಮುಂದುವರಿದ ಹುಡುಕಾಟದ ನಡುವೆ ಆಕೆಗೆ ಸಂಬಂಧಿಸಿದ ಕೆಲ ವಸ್ತುಗಳು ಗ್ರಾಮದ ಹೊರಗೆ ಕಂಡು ಬಂದವು. ಆಕೆಯ ಗಂಡ ಅವುಗಳನ್ನು ಗುರುತಿಸಿದ್ದ. ಅದರ ಜಾಡು ಹಿಡಿದು ಹೊರಟ ಗ್ರಾಮಸ್ಥರಿಗೆ ಆಘಾತ ಕಾದಿತ್ತು.

ಕಾಳೆಂಪಂಗ್‌ ಗ್ರಾಮದ ಹೊರವಲಯದಲ್ಲಿಸುಮಾರು 16 ಅಡಿಯ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಅದರ ಹೊಟ್ಟೆ ಊದಿಕೊಂಡಿದ್ದು ಕಂಡುಬಂದಿದೆ. ಫರೀದಾಳನ್ನು ಹಾವು ನುಂಗಿದೆ ಎಂದು ಊಹಿಸಿದ ಜನ ಹೆಬ್ಬಾವಿನ ಹೊಟ್ಟೆಯನ್ನು ಸೀಳಲು ನಿರ್ಧರಿಸಿದ್ದಾರೆ.

ಎಲ್ಲರೂ ಸೇರಿ ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಫರೀದಾಳ ತಲೆ ಕಂಡಿದೆ. ಜೊತೆಗೆ ಆಕೆ ತೊಟ್ಟ ಬಟ್ಟೆ ಸಮೇತ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಸಿಕ್ಕಿದ್ದಾಳೆ.

ಈ ಬಗ್ಗೆ ಮಾತನಾಡುವ ಜನ ಈ ಊರಿನಲ್ಲಿ ನಾಪತ್ತೆಯಾದವರು ಹೀಗೆ ಹೆಬ್ಬಾವಿನ ಹೊಟ್ಟೆ ಸೇರಿರುವ ಘಟನೆ ಇದೇ ಮೊದಲಲ್ಲ.. ಈ ರೀತಿ ಈ ಹಿಂದೆಯೂ ಆಗಿದೆ. ಸ್ಥಳೀಯ ಆಡಳಿತ ಹೆಬ್ಬಾವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವೆನಿಸಿದರೂ ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳು ಆಗಾಗ ಕೇಳಿ ಬರುತ್ತವೆ.

Exit mobile version