SUDDIKSHANA KANNADA NEWS/ DAVANAGERE/DATE:22_09_2025
ದಾವಣಗೆರೆ: ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿ. ಇಷ್ಟೊಂದು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಜನುಮದಿನ ಆಚರಿಸಲು ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದಗಳು. ಈ ಸಂಭ್ರಮ ಕಂಡು ಮನಸ್ಸು ತುಂಬಿ ಬಂದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
READ ALSO THIS STORY: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ 58ನೇ ಜನುಮದಿನ ಅದ್ಧೂರಿ ಆಚರಣೆ: ಹರಿದು ಬಂದ ಶುಭಾಶಯಗಳು
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 58ನೇ ಜನುಮದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಇಲ್ಲಿ ಸೇರಿರುವ ಮತ್ತು ಆಯೋಜನೆ ಮಾಡಿರುವವರ ಶ್ರಮಕ್ಕೆ ಧನ್ಯವಾದ
ಸಲ್ಲಿಸುತ್ತೇನೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಯೊಂದು ಜಾತಿ, ಜನಾಂಗ, ಸಮಾಜದವರು ನಮ್ಮ ಜೊತೆಯಲ್ಲಿದ್ದಾರೆ. ಜಾತಿಬೇಧ ಭಾವವಿಲ್ಲದೇ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಕಾರ್ಯಕರ್ತರ ಬೆನ್ನೆಲುಬಾಗಿ ನಿಂತು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ನನ್ನ ಜನುಮದಿನಕ್ಕೆ ವಾರ್ಡ್ ಗಳಲ್ಲಿ ಊಟದ ವ್ಯವಸ್ಥೆ, ದಾನ ಧರ್ಮ, ಸರ್ಕಾರಿ ಶಾಲೆಗಳಿಗೆ ಪುಸ್ತಕ, ತಟ್ಟೆ, ಲೋಟ, ಬೆಂಚ್, ವಾಟರ್ ಫಿಲ್ಟರ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅಭಿಮಾನಿಗಳು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಇದು ನನ್ನ ಮೇಲಿನ ಇಟ್ಟ ವಿಶ್ವಾಸ. ಅಭಿಮಾನದ ಮೇರೆಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದು, ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾನೇ ಖುಷಿ ಕೊಟ್ಟಿದೆ. 58ನೇ ಜನುಮದಿನ ಅದ್ಧೂರಿಯಾಗಿ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದೆ. ಅಭಿಮಾನಿಗಳು ಇಷ್ಟೊಂದು ಚೆನ್ನಾಗಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿ ಆಶೀರ್ವದಿಸಲು ಇಷ್ಟೊಂದು ಜನರು ಬಂದಿರುವುದು ಮನದುಂಬಿ ಬಂದಿದೆ. 2001ರಲ್ಲಿ ಮಂತ್ರಿಯಾಗಿದ್ದಾಗ ಆಶ್ರಯ ಮನೆಗಳನ್ನು ನೀಡಿದ್ದೆ. 15ರಿಂದ 16 ಸಾವಿರ ಮನೆಗಳನ್ನು ಕಟ್ಟಿ ಮನೆ ಹಂಚಿದ್ದೇವೆ. 20ರಿಂದ 30 ಲಕ್ಷ ರೂಪಾಯಿ ಈಗ ಆ ಒಂದು ಮನೆಗಳಬೆಲೆ ಆಗಿದೆ. ಜನರು ಆರ್ಥಿಕವಾಗಿ ಸದೃಢವಾಗಬೇಕು. ಮನುಷ್ಯತ್ವ ಜೊತೆಗೆ ಆದಾಯವೂ ಹೆಚ್ಚಾಗಬೇಕು ಎಂದು ತಿಳಿಸಿದರು.
ಪ್ರತಿಯೊಂದು ಮುಖ್ಯ ರಸ್ತೆಗಳು ಕಾಂಕ್ರಿಟ್ ರಸ್ತೆಗಳನ್ನು ಮಾಡಿದ್ದೇವೆ. ರಸ್ತೆ ಹೇಗಿದೆ ಎಂದು ಆಟೋ ಚಾಲಕರು ಈ ಹಿಂದೆ ಹೇಳಿಕೊಂಡು ಓಡಾಡೋರು. ಬೆಂಗಳೂರಿನಲ್ಲಿ ಪ್ರವಾಹ ಆಗುತ್ತಿದೆ. ಇಲ್ಲಿ ಪ್ರವಾಹ ತಲೆದೋರಿಲ್ಲ. 2015ರಲ್ಲಿ ಗ್ಲಾಸ್ ಹೌಸ್ ಮಾಡಿದೆವು. ವಿವಿಧ ಯೋಜನೆಗಳನ್ನು ತಂದೆವು. 2001ರಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಹೋದಾಗ ಶೌಚಾಲಯ ಇಲ್ಲ ಎಂದಾಗ ಬೇತೂರು ಗ್ರಾಮದಲ್ಲಿ ಪಬ್ಲಿಕ್ ಟಾಯ್ಲೆಟ್ ಶುರು ಮಾಡಿದೆವು. ವೈಯಕ್ತಿಕವಾಗಿ ಮನೆ ಮನೆಗೂ ಶೌಚಾಲಯ ವ್ಯವಸ್ಥೆ ಮಾಡಿದ್ದು ಇಲ್ಲಿಯೇ ಮೊದಲು. ಈ ಯೋಜನೆಯು ರಾಜ್ಯದಲ್ಲೆಡೆ ವಿಸ್ತರಣೆಯಾಗಿ ಜನಪ್ರಿಯವಾಯಿತು ಎಂದು ಹೇಳಿದರು.
ಪ್ರತಿಯೊಂದು ಊರಿನಲ್ಲಿ ಯುಜಿಡಿ ವ್ಯವಸ್ಥೆ ಮಾಡುವ ಸಂಕಲ್ಪ. ಆದಷ್ಟು ಬೇಗ ಪೂರೈಸುತ್ತೇವೆ ಎಂಬ ಭರವಸೆ ನೀಡುತ್ತೇನೆ. ಕುಡಿಯುವ ನೀರಿನ ಯೋಜನೆ. ಫಿಲ್ಟರ್ ವಾಟರ್ ಸಿಗಬೇಕೆಂಬ ನಿಟ್ಟಿನಲ್ಲಿ ಮಲ್ಟಿ ವಿಲೇಜ್ ಯೋಜನೆಯಡಿ ಮಾಡಿ ತಲುಪಿಸುತ್ತೇವೆ. ಒಳ್ಳೆಯ ಕೆಲಸ ನಾವೆಲ್ಲರೂ ಸೇರಿ ಮಾಡೋಣ. ಈಗ ಕಿಡ್ನಿ ರೋಗಿಗಳು ಹೆಚ್ಚು ಬರುತ್ತಿದ್ದಾರೆ. ಕಿಡ್ನಿ ಡಯಾಲಿಸಿಸ್ ಬಡವರು ಮಾಡಿಸಿಕೊಳ್ಳಬೇಕಾದರೆ ವಾರಕ್ಕೆ ಹತ್ತು ಸಾವಿರ ರೂಪಾಯಿ ಬೇಕು. ಅದನ್ನು ಉಚಿತವಾಗಿ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆವು. ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಉಚಿತ ಡಯಾಲಿಸಿಸ್ ಮಾಡುತ್ತಿದ್ದೇವೆ. ಹಳೇ ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಸಂಸ್ಥೆ ಮತ್ತು ಸರ್ಕಾರ ಜಂಟಿಯಾಗಿ ಉಚಿತ ಆಸ್ಪತ್ರೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇವೆ. ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು ಎಂದರು.
ಆರೋಗ್ಯ, ಸೂರು, ನೀರು, ವಿದ್ಯಾಭ್ಯಾಸ ಮತ್ತು ಮನೆ ವ್ಯವಸ್ಥೆ ಮಾಡುತ್ತೇವೆ. ಐಎಎಸ್, ಕೆಎಎಸ್ ಕೋಚಿಂಗ್ ಸೆಂಟರ್, ವಿವಿಧ ಯೋಜನೆಗಳನ್ನು ಸಂಸದರಾಗಿ ಪ್ರಭಾ ಮಲ್ಲಿಕಾರ್ಜುನ್ ಅವರು ಮಾಡುತ್ತಿದ್ದು, ಇದೇ ರೀತಿಯಲ್ಲಿ ಮುನ್ನಡೆಯಲಿ ಎಂದು ಸಲಹೆ ನೀಡಿದರು.
ಚುನಾವಣೆಗೆ ನಿಂತಾಗ ಐಟಿ-ಬಿಟಿ ತರಬೇಕೆಂದರು. ಕೇಂದ್ರ ಸರ್ಕಾರಕ್ಕೆ ತಿಳಿಸಿಕೊಟ್ಟು, ಸಂಸತ್ ನಲ್ಲಿಯೂ ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆ ಮಾಡಿದ್ದರ ಫಲವಾಗಿ ದಾವಣಗೆರೆಗೆ ಬಂದು ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಾವು ಇಲ್ಲಿ ಐಟಿಬಿಟಿ ಮಾಡಲು ತಯಾರಿದ್ದೇವೆ ಎಂದು ಹೇಳಿದರು.