Home ದಾವಣಗೆರೆ “ಪ್ರಾಣ ಹೋದರೂ ಪ್ರಯಾಣಿಕರ ಜೀವ ಕಾಪಾಡಿದೆ”: ಪ್ರಧಾನಿ ಮೋದಿ ಜತೆ ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಮಾತುಕತೆ
ದಾವಣಗೆರೆನವದೆಹಲಿಬೆಂಗಳೂರು

“ಪ್ರಾಣ ಹೋದರೂ ಪ್ರಯಾಣಿಕರ ಜೀವ ಕಾಪಾಡಿದೆ”: ಪ್ರಧಾನಿ ಮೋದಿ ಜತೆ ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಮಾತುಕತೆ

Share
ಮೋದಿ
Share

ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ಒಮಾನ್ ಮೂಲದ ಸಹ-ಪೈಲಟ್ ವಿಮಾನ ಪತನಗೊಳಿಸಲು ಯತ್ನಿಸಿದಾಗ, ತೀವ್ರವಾಗಿ ಗಾಯಗೊಂಡರೂ ಪ್ರಾಣಪಣಕ್ಕಿಟ್ಟು ಹೋರಾಡಿ 174ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯ ಸಾಹಸವನ್ನು ಜಗತ್ತೇ ಕೊಂಡಾಡುತ್ತಿದೆ. ಈ ಘಟನೆಯ ಬೆನ್ನಲ್ಲೇ, 2025ರಲ್ಲಿ ಮಾಧ್ಯಮ ಪ್ರಮುಖೆ ಜಲಕ್ ಮೆಹ್ತಾ  ಅವರು ಸ್ಮಿತ್ ಮಚ್ಚಾರ್ ಅವರೊಂದಿಗೆ ನಡೆಸಿದ್ದ ಪೋಡ್‌ಕಾಸ್ಟ್ ಸಂದರ್ಶನವು ವೈರಲ್ ಆಗಿದೆ.

NDTV ಯ ವಿದೇಶಾಂಗ ವ್ಯವಹಾರಗಳ ಸಂಪಾದಕ ಆದಿತ್ಯ ರಾಜ್ ಕೌಲ್ ಅವರೊಂದಿಗೆ ಮಾತನಾಡಿದ ಜಲಕ್ ಮೆಹ್ತಾ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಕಾಂಪೋಸರ್ (ಶಾಂತ ಮನಸ್ಥಿತಿ) ಮತ್ತು ಪ್ರಬುದ್ಧತೆಯನ್ನು ನೆನಪಿಸಿಕೊಂಡಿದ್ದಾರೆ.

ಪೋಡ್‌ಕಾಸ್ಟ್‌ನಲ್ಲಿ ಸ್ಮಿತ್ ಹೇಳಿದ್ದ ಪ್ರಮುಖ ವಿಷಯಗಳು:

ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ: “ನಮ್ಮ ಪೋಡ್‌ಕಾಸ್ಟ್‌ನ ರ‍‍್ಯಾಪಿಡ್-ಫೈರ್ ಸುತ್ತಿನಲ್ಲಿ, ‘ನಿಮಗೆ ಸ್ಮೂತ್ (ಸುಗಮ) ಲ್ಯಾಂಡಿಂಗ್ ಮುಖ್ಯವೋ ಅಥವಾ ಸೇಫ್ (ಸುರಕ್ಷಿತ) ಲ್ಯಾಂಡಿಂಗ್ ಮುಖ್ಯವೋ?’ ಎಂದು ಕೇಳಿದ್ದೆ. ಅದಕ್ಕೆ ಅವರು ‘ನನಗೆ ಯಾವಾಗಲೂ ಸುರಕ್ಷಿತ ಲ್ಯಾಂಡಿಂಗ್ ಅತ್ಯಂತ ಮುಖ್ಯ, ಪ್ರಯಾಣಿಕರ ಸುರಕ್ಷತೆಯೇ ನನ್ನ ಮೊದಲ ಆದ್ಯತೆ’ ಎಂದು ತಟ್ಟನೆ ಉತ್ತರಿಸಿದ್ದರು” ಎಂದು ಜಲಕ್ ಮೆಹ್ತಾ ಸ್ಮರಿಸಿದ್ದಾರೆ.

ಶಾಂತ ಸ್ವಭಾವದ ವ್ಯಕ್ತಿ: ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡವಾಗಲೂ ಸ್ಮಿತ್ ಅದೇ ಶಾಂತ ಹಾಗೂ ಸಂಯಮದ ಧೋರಣೆಯನ್ನು ಕಾಯ್ದುಕೊಂಡಿದ್ದರು.

ಕುಟುಂಬದ ಉದ್ಯಮದಿಂದ ವಾಯುಯಾನಕ್ಕೆ: 19ನೇ ವಯಸ್ಸಿನಲ್ಲಿ ಕುಟುಂಬದ ವ್ಯಾಪಾರವನ್ನು ತೊರೆದು ವಾಯುಯಾನ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡ ಸ್ಮಿತ್, ಅತ್ಯಂತ ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ತಲುಪಿದ್ದರು.

ವಿಮಾನದಲ್ಲಿ ನಡೆದ ಘಟನೆಯ ಸಾರಾಂಶ:

ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ, ಒಮಾನ್‌ ಮೂಲದ ಸಹ-ಪೈಲಟ್‌ ಕಾಕ್‌ಪಿಟ್‌ ಒಳಗಡೆಯೇ ಕ್ಯಾಪ್ಟನ್ ಸ್ಮಿತ್‌ಗೆ ಚಾಕುವಿನಿಂದ ಇರಿದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ. ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೂ, ಸ್ಮಿತ್‌ ಕಾಕ್‌ಪಿಟ್‌ ಬಾಗಿಲಿನ ಲಾಕ್ ತೆರೆದು ತುರ್ತು ಎಚ್ಚರಿಕೆ (Squawk 7500) ರವಾನಿಸುವಲ್ಲಿ ಯಶಸ್ವಿಯಾದರು. ವಿಮಾನದಲ್ಲಿದ್ದ ಇತರ ಸಿಬ್ಬಂದಿ ಹಾಗೂ ಪ್ರಯಾಣಿಕರು ಆರೋಪಿ ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರು ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles