Site icon Kannada News-suddikshana

ರಾಜಕೋಟ್ ನಲ್ಲಿ “ಸ್ಪಿನ್ ಚಕ್ರವರ್ತಿ” ಆದ್ರು ವರುಣ್ ಚಕ್ರವರ್ತಿ: ಐದು ವಿಕೆಟ್ ಪಡೆದು ಮಿಂಚಿಂಗ್!

SUDDIKSHANA KANNADA NEWS/ DAVANAGERE/ DATE:28-01-2025

ರಾಜಕೋಟ್: ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಮೂರನೇ ಟಿ-20 ಪಂದ್ಯದಲ್ಲಿ ವರುಣ್ ಚಕ್ರವರ್ತಿ ಮಾರಕ ದಾಳಿ ನಡೆಸಿದರು. ಆಂಗ್ಲನ್ನರ ಬ್ಯಾಟಿಂಗ್ ಬೆನ್ನಲುಬು ಮುರಿದರು.

ಸರಣಿಯಲ್ಲಿ 2-0ಯಿಂದ ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಈ ಪಂದ್ಯ ಗೆದ್ದರೆ ಟಿ-20 ಸರಣಿ ವಶಪಡಿಸಿಕೊಳ್ಳಲಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಜೋಸ್ ಬಟ್ಲರ್ ಪಡೆಯು ಆರಂಭಿಕ ಆಘಾತ ಅನುಭವಿಸಿತು. ನಾಲ್ಕು ಓವರ್ ಎಸೆದ ವರುಣ್ ಚಕ್ರವರ್ತಿ 24 ರನ್ ನೀಡಿ ಐದು ವಿಕೆಟ್ ಗಳಿಸಿದರು. ಸತತ ಎರಡು ಬಾಲ್ ಗಳಲ್ಲಿ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ಚಾನ್ಸ್ ಇದ್ದರೂ ಆಗಲಿಲ್ಲ. ಫಿಲ್ ಸಾಲ್ಟ್ 2 ರನ್ ಗಳಿಸಿ ಔಟಾದರೆ ಬೆನ್ ಡಕೆಟ್ ಅಬ್ಬರಿಸಿದರು. ಕೇವಲ 28 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು.

ವರುಣ್ ಚಕ್ರವರ್ತಿ ಅವರು ಅಪಾಯಕಾರಿ ಬ್ಯಾಟ್ಸ್ ಮನ್ ಜೋಸ್ ಬಟ್ಲರ್, ಜೇಮೀ ಸ್ಮಿತ್, ಜೇಮಿ ಓವರ್ ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಕಳೆದ ಪಂದ್ಯದಲ್ಲಿಯೂ ಅತ್ಯುತ್ತಮ ಬೌಲಿಂಗ್ ನಡೆಸಿದ್ದ ವರುಣ್ ಚಕ್ರವರ್ತಿ ಐದು ವಿಕೆಟ್ ಪಡೆಯುವ ಮೂಲಕ ಆಂಗ್ಲನ್ನರ ಬೃಹತ್ ಪೇರಿಸುವ ಗುರಿಗೆ ತಣ್ಣೀರು ಎರಚಿದರು. ಒಂದೇ ಓವರ್ ನಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಗಳಿಸುವಲ್ಲಿ ಯಶಸ್ವಿಯಾದರು. ರವಿ ಬಿಷ್ಣೋಯಿ ದುಬಾರಿ ಬೌಲರ್ ಎನಿಸಿದರು. ನಾಲ್ಕು ಓವರ್ ಗಳಲ್ಲಿ 46 ರನ್ ನೀಡಿ ಒಂದು ವಿಕೆಟ್ ಗಳಿಸಿದರು.

Exit mobile version